ಗಾಂಧಿ ತತ್ವ-ಸಿದ್ದಾಂತ ಕಣ್ಮರೆ

ಚಿತ್ರದುರ್ಗ;

      ಮಹಾತ್ಮಗಾಂಧೀಜಿಯವರು ಪ್ರತಿಪಾದಿಸಿದ ಸತ್ಯ, ಶಾಂತಿ, ಅಹಿಂಸೆ ತತ್ವ ಸಿದ್ಧಾಂತಗಳು ಇಂದಿನ ಆಧುನಿಕಕಾಲದಲ್ಲಿ ದಿನದಿಂದ ದಿನಕ್ಕೆ ಕಣ್ಮರೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆಎಂದು ಸಂಸದ ಬಿ.ಎನ್. ಚಂದ್ರಪ್ಪಅವರ ಕಳವಳ ವ್ಯಕ್ತಪಡಿಸಿದರು.

        ಮಹಾತ್ಮಾಗಾಂಧೀಜಿಯವರ 150 ನೇ ಜನ್ಮ ವರ್ಷಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಯೋಗದಲ್ಲಿ ಜಿಲ್ಲೆಯಲ್ಲಿ ನ. 21 ರಿಂದ ಡಿ. 08 ರವರೆಗೆಜಿಲ್ಲೆಯಾದ್ಯಂತ ಹಮ್ಮಿಕೊಂಡಿರುವ ‘ಗಾಂಧಿ 150 ಒಂದುರಂಗಪಯಣ’ ನಾಟಕ ಪ್ರದರ್ಶನ ಸರಣಿಕಾರ್ಯಕ್ರಮಕ್ಕೆ ನಗರದ ತ.ರಾ.ಸು. ರಂಗಮಂದಿರದಲ್ಲಿ ಚಾಲನೆ ನೀಡಿಅವರು ಮಾತನಾಡಿದರು.

         ಭಾರತೀಯರನ್ನುಅಹಿಂಸಾತ್ಮಕವಾಗಿ ಪರಕೀಯರಿಂದ ಬಿಡುಗಡೆಗೊಳಿಸಿ, ಸ್ವಾತಂತ್ರ್ಯತಂದುಕೊಟ್ಟ ಮಹಾತ್ಮಗಾಂಧೀಜಿಯವರು ಪ್ರತಿಪಾದಿಸಿದ ಸತ್ಯ, ಶಾಂತಿ ಮತ್ತುಅಹಿಂಸೆಯತತ್ವ ಸಿದ್ಧಾಂತಗಳು ಇಂದಿನ ಆಧುನಿಕಕಾಲದಲ್ಲಿ ದಿನದಿಂದ ದಿನಕ್ಕೆ ಕಣ್ಮರೆಯಾಗುತ್ತಿರುವುದು ಕಳವಳಕಾರಿ ವಿಷಯವಾಗಿದೆ.ಸತ್ಯದಿಂದ ಬಾಳುವವರನ್ನು, ದುಶ್ಚಟಗಳಿಂದ ದೂರವಿರುವವರನ್ನು, ಶಾಂತಿ ಕಾಪಾಡುವವರನ್ನುಇಂದು ‘ಗಾಂಧಿವಾದಿ’ ಎಂಬುದಾಗಿ ವ್ಯಂಗ್ಯ ಮಾತುಗಳಲ್ಲಿ ಟೀಕಿಸುವ ಸ್ಥಿತಿಗೆ ಇಂದುತಲುಪಿರುವುದುಆತಂಕದ ವಿಚಾರವಾಗಿದೆ.ಆದರೆಗಾಂಧಿತತ್ವವನ್ನುಇಡೀ ವಿಶ್ವವೇ ಮೆಚ್ಚುತ್ತಿದೆ ಎಂದರು

        ಮಹಾತ್ಮಾಗಾಂಧೀಜಿಯವರುತಮ್ಮಜೀವನದಲ್ಲಿ ಅಳವಡಿಸಿಕೊಂಡಿದ್ದ ಸರಳತೆ, ಸತ್ಯ, ಅಹಿಂಸೆಗಳೇ ಅವರನ್ನು ಮೇರು ವ್ಯಕ್ತಿಯನ್ನಾಗಿ ರೂಪಿಸಿದವು ಎಂಬುದನ್ನು ಇಂದಿನ ಯುವಪೀಳಿಗೆ ಅರ್ಥ ಮಾಡಿಕೊಳ್ಳಬೇಕಿದೆ.ಈ ನಿಟ್ಟಿನಲ್ಲಿ ವಾರ್ತಾ ಇಲಾಖೆಯು ಗಾಂಧೀಜಿಯವರ ಜೀವನ ಕುರಿತ ನಾಟಕ ಪ್ರದರ್ಶನ ಹಮ್ಮಿಕೊಂಡಿರುವುದು ಇಂತಹ ಪ್ರಯತ್ನಗಳಲ್ಲಿ ಒಂದಾಗಿದೆ.

         ಭವಿಷ್ಯದ ಪ್ರಜೆಗಳಾಗಿರುವ ವಿದ್ಯಾರ್ಥಿಗಳಿಗೆ ಗಾಂಧೀಜಿಯವರ ಆದರ್ಶ, ತತ್ವ, ಸಿದ್ಧಾಂತಗಳನ್ನು ಇಂತಹರಂಗ ಪ್ರಯೋಗಗಳ ಮೂಲಕ ತಲುಪಿಸುತ್ತಿರುವುದು ಪರಿಣಾಮಕಾರಿ ಕಾರ್ಯಕ್ರಮವಾಗಿದೆ ಎಂದರುನನ್ನ ಜೀವನವೇ ನನ್ನ ಸಂದೇಶ ಎಂದು ಸಾರಿದ ಗಾಂಧೀಜಿಯವರು ಭ್ರಷ್ಟಾಚಾರರಹಿತ ಸಮಾಜ ನಿರ್ಮಾಣವಾಗಬೇಕು ಎಂಬ ಆಶಯ ಹೊಂದಿದ್ದರು.ವಿದ್ಯಾರ್ಥಿಗಳು ಕುವೆಂಪು, ಕನಕದಾಸರು, ಪುರಂದರದಾಸರಂತಹದಾರ್ಶನಿಕರ ತತ್ವಗಳಲ್ಲಿ ಕೆಲವನ್ನಾದರೂ ಅಳವಡಿಸಿಕೊಳ್ಳಬೇಕು.ದಿನವಿಡೀ ಕಪಟವನ್ನಾಚರಿಸಿ, ಸಂಜೆದೇವರಿಗೆ ಪೂಜೆ ಮಾಡಿದಲ್ಲಿ, ಅಂತಹ ಪೂಜೆಗೆಯಾವುದೇಅರ್ಥವಿರುವುದಿಲ್ಲ.ನಾವು ಮಾಡುವ ಒಳ್ಳೆಯ ಕೆಲಸಗಳೇ ಪೂಜೆಗೆ ಸಮ.ಜೀವನದಲ್ಲಿ ನಮ್ಮಲ್ಲಿ ನಾವು ಮೊದಲ ಒಳ್ಳೆಯ ತತ್ವವನ್ನು ಅಳವಡಿಸಿಕೊಳ್ಳಬೇಕು ಎಂದು ಸಂಸದ ಬಿ.ಎನ್. ಚಂದ್ರಪ್ಪಅವರು ಹೇಳಿದರು.

         ಪ್ರಾರಂಭದಲ್ಲಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ವಾರ್ತಾಧಿಕಾರಿಧನಂಜಯಪ್ಪಅವರು, ಅಹಿಂಸಾ ತತ್ವದ ಮೂಲಕ ದೇಶಕ್ಕೆ ಸ್ವಾತಂತ್ರ್ಯತಂದುಕೊಟ್ಟಗಾಂಧೀಜಿಯವರು, ಇಡೀಜಗತ್ತನ್ನೇ ಭಾರತದತ್ತತಿರುಗಿ ನೋಡುವಂತೆ ಮಾಡಿದರು.ಗಾಂಧೀಜಿಯವರು ಹಾಕಿಕೊಟ್ಟ ಸತ್ಯ, ಶಾಂತಿ ಮತ್ತುಅಹಿಂಸೆಯ ಮಾರ್ಗಎಲ್ಲ ಸಮಸ್ಯೆಗಳಿಗೂ ಪರಿಹಾರವನ್ನುತಂದುಕೊಡಬಹುದಾಗಿದೆ.ಗಾಂಧೀಜಿಯವರ 150 ನೇ ಜನ್ಮ ವರ್ಷಾಚರಣೆ ಅಂಗವಾಗಿ ವಾರ್ತಾಇಲಾಖೆಯುಗಾಂಧೀಜಿ 150 ರಂಗಪಯಣ ಮೂಲಕ ವಿದ್ಯಾರ್ಥಿಗಳಲ್ಲಿ ಗಾಂಧೀಜಿಯವರಕುರಿತುಅರಿವು ಮೂಡಿಸುವಕಾರ್ಯಕ್ರಮವನ್ನುಚಿತ್ರದುರ್ಗಜಿಲ್ಲೆಯಲ್ಲಿ ನ. 21 ರಿಂದ ಡಿ. 08 ರವರೆಗೆಎಲ್ಲ ತಾಲ್ಲೂಕುಗಳಲ್ಲಿ ಆಯೋಜಿಸಲಾಗಿದೆ.

          ನ. 21 ರಿಂದ 23 ರವರೆಗೆಚಿತ್ರದುರ್ಗದಲ್ಲಿಆಯ್ದ ಸ್ಥಳಗಳಲ್ಲಿ ರಂಗಪಯಣ ನಾಟಕ ಪ್ರದರ್ಶನಗೊಳ್ಳಲಿದೆ.ನ. 24 ರಿಂದ 26 ರವರೆಗೆ ಮೊಳಕಾಲ್ಮೂರು.ನ. 27 ರಿಂದ 29 ರವರೆಗೆ ಚಳ್ಳಕೆರೆ, ನ. 30 ರಿಂದ ಡಿ. 02 ರವರೆಗೆ ಹಿರಿಯೂರು. ಡಿ. 03 ರಿಂದ 05 ರವರೆಗೆ ಹೊಸದುರ್ಗ ಹಾಗೂ ಡಿ. 06 ರಿಂದ 08 ರವರೆಗೆ ಹೊಳಲ್ಕೆರೆ ತಾಲ್ಲೂಕುಗಳಲ್ಲಿ ಆಯ್ದ ಸ್ಥಳಗಳಲ್ಲಿ ನಾಟಕ ಪ್ರದರ್ಶನವಾಗಲಿದೆ. ವಿದ್ಯಾರ್ಥಿಗಳು, ಸಾರ್ವಜನಿಕರು ಈ ನಾಟಕದ ಪ್ರದರ್ಶನ ವೀಕ್ಷಿಸುವಂತೆ ಮನವಿ ಮಾಡಿದರು.

          ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ಸಂಶೋಧಕಡಾ; ಬಿ.ರಾಜಶೇಖರಪ್ಪಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

           ಕಲಾವಿದ ಹರಿಕೃಷ್ಣ ನೇತೃತ್ವದರಂಗಪಯಣತಂಡಗಾಂಧೀಜಿಯವರಕುರಿತ 1.15 ಗಂಟೆಅವಧಿಯ ನಾಟಕವನ್ನು ಪ್ರದರ್ಶಿಸಿತು . ಗಾಂಧೀಜಿಯವರ ಜೀವನದ ಮಹತ್ವದ ಮೈಲುಗಲ್ಲುಗಳನ್ನು ರಂಗ ಪ್ರಯೋಗದಲ್ಲಿ ಯಶಸ್ವಿಯಾಗಿ ಕಣ್ಣಿಗೆಕಟ್ಟುವರೀತಿಯಲ್ಲಿ ನಾಟಕ ಪ್ರದರ್ಶನ ಮೂಡಿಬಂದಿತು .ರಂಗಕಲಾವಿದರಾದ ಅಂಬಾಲಿ, ಶರತ್, ಕಾರ್ತಿಕ್, ಪುಷ್ಪಲತ, ರಾಕೇಶ್, ಗೀತಾ, ಲಕ್ಷ್ಮೀಕಾಂತ್, ಗಗನ್, ಅರುಣ್ ಸೇರಿದಂತೆ ಹಲವರಅಭಿನಯ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap