ಗಾಂಧೀಜಿ ಸ್ಮಾರಕ ಪ್ರವಾಸಿ ತಾಣವಾಗಲಿ: ನಜ್ಮಾ

ಹರಪನಹಳ್ಳಿ:

      ಮಹಾತ್ಮ ಗಾಂಧೀಜೀ ನೆಡೆದಾಡಿ ತಂಗಿಹೋಗಿದ್ದ ಸ್ಥಳದಲ್ಲೆ ಜಯಂತಿ ಅಚರಣೆ ಅವಿಸ್ಮರಣೀಯ ಅನುಭವ ತಂದುಕೊಟ್ಟಿದೆ ಎಂದು ಉಪವಿಭಾಗಾಧಿಕಾರಿ ಜಿ.ನಜ್ಮಾ ಅಭಿಪ್ರಾಯಪಟ್ಟರು.

       ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಮಹಾತ್ಮಗಾಂಧೀ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು. ಇಂತಹ ಪವಿತ್ರ ಸ್ಥಳದಲ್ಲಿ ನೆಡೆಯುವ ಕಾರ್ಯಕ್ರಮಕ್ಕೆ ಸಾರ್ವಜನಿಕರು ಭಾಗವಹಿಸುವ ಮೂಲಕ ಮಹಾತ್ಮರಿಗೆ ಗೌರವ ಸಮರ್ಪಣೆ ಮಾಡಬೇಕು ಎಂದರು,

      ಇಲ್ಲಿರುವ ಸ್ಮಾರಕ ಯುವಜನಾಂಗಕ್ಕೆ ಮಾದರಿಯಾಗಿದೆ. ಗಾಂದೀಜಿಯರ ಪ್ರತಿಮೆಯಿರುವ ಈ ಸ್ಥಳವನ್ನು ಪ್ರವಾಸಿ ತಾಣವಾಗಿ ಮಾರ್ಪಡಿಸುವ ಅಗತ್ಯತೆ ಇದೆ ಎಂದರು.ಜಿಪಂ ಸದಸ್ಯ ಡಾ.ಮಂಜುನಾಥ್ ಉತ್ತಂಗಿ ಮಾತನಾಡಿ. 150 ನೇ ಗಾಂದೀ ಜಯಂತಿ ಆಚರಣೆ ವಿಶಿಷ್ಟತೆಯನ್ನು ಹೊಂದಿದ್ದು ಈ ಕಾರ್ಯಕ್ರಮಕ್ಕೆ ಶಾಸಕರು ಭಾಗಿಯಾಗಿದ್ದರೆ ಇನ್ನೂ ಮೆರಗು ಬರುತ್ತಿತ್ತು. ಮುಂದಿನ ದಿನಗಳಲ್ಲಾದರೂ ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿ ಎಂದರು.

      ಪುರಸಭೆ ಅಧ್ಯಕ್ಷ ಹೆಚ್.ಕೆ.ಹಾಲೇಶ್ ಮಾತನಾಡಿ. ಗಾಂಧೀಜಿ ತಂಗಿದ್ದ ಕೊಠಡಿ ಸ್ಮಾರಕವಾಗಿ ನಿರ್ಮಾಣಕ್ಕೆ ಪುರಸಭೆ 30 ಲಕ್ಷ ಅನುದಾನ ನೀಡಿದ್ದರೂ ಯಾರು ಸ್ಮರಿಸುತ್ತಿಲ್ಲ. ಶಾಸಕರು ಅನಾರೋಗ್ಯದ ಕಾರಣ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ.ತಹಸಿಲ್ದಾರ್ ಡಾ.ಮಧು ಮಾತನಾಡಿ. ಮಹಾತ್ಮರ ಜಯಂತಿಗೆ ಸಾರ್ವಜನಿಕರ ಕೊರತೆ ಎದ್ದು ಕಾಣುತ್ತಿದೆ. ಕಾರ್ಯಕ್ರಮಗಳಿಗೆ ಜನರನ್ನು ಕರೆತರುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ಮಾದ್ಯಮಗಳು ಮುಂದಾಗಬೇಕು ಎಂದರು.

       ಜಿಪಂ ಸದಸ್ಯ ಡಿ.ಸಿದ್ದಪ್ಪ, ಹೆಚ್.ಬಿ.ಪರಶುರಾಮಪ್ಪ, ತಾಪಂ ಉಪಾಧ್ಯಕ್ಷ ಮಂಜ್ಯಾನಾಯ್ಕ್ ಮಾತನಾಡಿದರು.ಕಾರ್ಯಕ್ರಮದಲ್ಲಿ ತಾಪಂ ಸದಸ್ಯ ವೈ.ಬಸಪ್ಪ, ಪುರಸಭೆ ಉಪಾಧ್ಯಕ್ಷ ಕೆ.ಸತ್ಯನಾರಯಣ, ಇಓ ತಿಪ್ಪೇಸ್ವಾಮಿ, ಶಿಲ್ಪಿ ಸಂಜಿತಾ, ಜಯಮಾಲತೇಶ್, ಕುಬೇಂದ್ರ ಮೆಕ್ಕಪ್ಪನವರ್, ಪ್ರಸಾದ್ ಶಾಸ್ತ್ರಿ, ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link