ಸಿರುಗುಪ್ಪ
5ನೇ ದಿನಕ್ಕೆ ವಿಸರ್ಜನೆ ವಾಗಬೇಕಿದ್ದ ಗಣೇಶ 21ದಿನಕ್ಕೆ ನಿಟ್ಟೂರು ನರಸಿಂಹಮೂರ್ತಿ ಶೆಟ್ಟಿ ಮೈದಾನದಲ್ಲಿ ಪ್ರತಿಷ್ಠಾಪಿಸಿದ ಸ್ಥಳದಲ್ಲೇ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ರಂಗರಾಜನ್ ಅವರಿಂದ ವಿಸರ್ಜನೆಗೆ ಚಾಲನೆ ನೀಡಲಾಯಿತು.
ಪ್ರತಿ ವರ್ಷ ನಡೆದು ಬಂದ ರಸ್ತೆಯಲ್ಲಿ ಮೆರವಣಿಗೆ ನಡೆಯಲಿ ಯಾವುದೇ ಕಾರಣಕ್ಕೆ ರಸ್ತೆಗೆ ಸೌದಾಗರ್ ಮಸೀದಿ ಇರುವುದರಿಂದ ಮೆರವಣಿಗೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಈ ಬಗ್ಗೆ ಪೊಲೀಸ್ ಠಾಣೆ ಆವರಣದಲ್ಲಿ ಶಾಂತಿ ಸಭೆ ನಡೆಸಿ ತಿಳಿವಳಿಕೆ ಮೂಡಿಸಲಾಗಿತ್ತು.
ಆದರೂ ಅದೇ ಮಾರ್ಗದಲ್ಲಿ ಮೆರವಣಿಗೆ ನಡೆಸುವುದಾಗಿ ಪಟ್ಟು ಹಿಡಿದ ಗಣೇಶ ಪ್ರತಿಷ್ಠಾಪಿಸಿದ ಕೆಲವರು ಹೈಕೋರ್ಟ್ ಮೊರೆ ಹೋಗಿದ್ದರೂ ಆದರೆ ಹೈಕೋರ್ಟ್ ನ್ಯಾಯಾಲಯವು ಯಾವುದೇ ಕಾರಣಕ್ಕೂ ಸೌದಾಗರ ಮಸೀದಿ ರಸ್ತೆಯಲ್ಲಿ ಮೆರವಣಿಗೆ ಹೋಗುವುದು ಬೇಡ ಪ್ರತಿ ವರ್ಷ ನಡೆದ ಸಾಂಪ್ರದಾಯಿಕವಾಗಿ ಇರುವುದು ಮಾರ್ಗದಲ್ಲೇ ಮೆರವಣಿಗೆ ನಡೆಸುವಂತೆ ಸೂಚನೆ ನೀಡಿತ್ತು ಆದರೆ ಮೆರವಣಿಗೆ ವಿಷಯದಲ್ಲಿ ಹಿಂದೂ ಮಹಾಸಭಾ ಗಣೇಶ ಸಂಘಟಕರ ತಿಕ್ಕಾಟದಿಂದ ವಿಸರ್ಜನೆಗೆ ಕಗ್ಗಂಟಾಗಿತ್ತು ಇದೀಗ ಪ್ರಕರಣ ಇತ್ಯರ್ಥವಾಗಿದೆ ಇಲ್ಲಿ ಎಲ್ಲ ಜನರು ಶಾಂತಿ ಸೌಹಾರ್ದ ಸಾಮರಸ್ಯದಿಂದ ಬಾಳುತ್ತಿದ್ದ ಸಮಸ್ಯೆ ಪ್ರಶ್ನಾರ್ಥವಾಗಿದೆ ಆದರೆ ಇದು ಮುಂದುವರಿಯಬಾರದು ಎಲ್ಲರಲ್ಲೂ ಅಭಿಪ್ರಾಯ ಮೂಡಿದೆ. ಶಾಂತಿಗೆ ತೊಂದರೆಯಾಗದಂತೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಂಡಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
