ಗಾಂಜಾ ವ್ಯಸನಕ್ಕಾಗಿ ಕಳ್ಳತನ ಮಾಡುತ್ತಿದ್ದ ಕಳ್ಳರಿಗಾಗಿ ತೀವ್ರ ಶೋಧ

ಬೆಂಗಳೂರು

     ಗಾಂಜಾ ವ್ಯಸನ ಮೋಜಿಗಾಗಿ ಸ್ಕೂಟರ್‍ನಲ್ಲಿ ಸಂಚರಿಸುತ್ತ ಸುಲಿಗೆ ಸರ ಕಳವು ಮಾಡುತ್ತಿದ್ದ ಇಬ್ಬರು ಸುಲಿಗೆಕೋರರನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿ, ಮತ್ತಿಬ್ಬರಿಗಾಗಿ ತೀವ್ರ ಶೋಧ ನಡೆಸಿದ್ದಾರೆ.ಬೊಮ್ಮನಹಳ್ಳಿಯ ಮಂಗಮ್ಮನಪಾಳ್ಯದ ಸಲ್ಮಾನ್ ಖಾನ್ (22) ಹಾಗೂ ಅರ್ಬಾಜ್ ಖಾನ್ ಅಲಿಯಾಸ್ ಚೋಟು (22) ಬಂಧಿತ ಆರೋಪಿಗಳಾಗಿದ್ದು,

     ಬಂಧಿತರಿಂದ 10 ಲಕ್ಷ ರೂ. ಮೌಲ್ಯದ 209 ಗ್ರಾಂ. ತೂಕದ 8 ಮಾಂಗಲ್ಯಸರ, 4 ಕೆಜಿ ಬೆಳ್ಳಿ, 9.5 ಸಾವಿರ ರೂ. ನಗದು ಸೇರಿ, 10 ಲಕ್ಷ ರೂ. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ.ಇವರ ಗ್ಯಾಂಗ್‍ನಲ್ಲಿದ್ದು, ಪರಾರಿಯಾಗಿರುವ ಇಬ್ಬರಿಗಾಗಿ ಶೋಧ ನಡೆಸಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಡಾ. ರೋಹಿಣಿ ಕಟೋಚ್ ಅವರು ತಿಳಿಸಿದ್ದಾರೆ.

     ಆರೋಪಿಗಳು ಕಳೆದ ಜೂನ್ 6 ರಂದು ಮಧ್ಯಾಹ್ನ 12ರ ವೇಳೆ ಕನಕಪುರ ರಸ್ತೆಯ ಎಸ್.ಎಂ. ಅಂಗಡಿಗೆ ಗ್ಯಾಸ್ ಸಿಲಿಂಡರ್‍ಗಳನ್ನು ಕೊಡಲು ಹೋಗುತ್ತಿದ್ದ ಕೆಲಸಗಾರರಾದ ವೆಂಕಟ ರೆಡ್ಡಿ, ನಂದಶರ್ಮ ಹಾಗೂ ಮುನಿಯಪ್ಪ ಎಂಬುವವರಿದ್ದ ವಾಹನವನ್ನು ಸಾರಕ್ಕಿ ಮಾರ್ಕೆಟ್ ಬಳಿ ಅಡ್ಡಗಟ್ಟಿದ್ದಾರೆ.

     ವಾಹನದಿಂದ ಇಳಿದ ಮೂವರಿಗೂ ಚಾಕು ತೋರಿಸಿ ಬೆದರಿಸಿ 37,450 ರೂ. ಗಳ ನಗದನ್ನು ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿದ್ದ ಕುಮಾರಸ್ವಾಮಿ ಪೊಲೀಸ್ ಇನ್ಸ್‍ಪೆಕ್ಟರ್ ಹಜರೇಶ್ ಎ. ಕಿಲ್ಲೇದಾರ್, ಮತ್ತವರ ತಂಡ ಕಾರ್ಯಾಚರಣೆ ಕೈಗೊಂಡು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

       ಬಂಧಿತ ಇಬ್ಬರು ಆರೋಪಿಗಳು ಹಿಂದೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿದ್ದು, 10 ತಿಂಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದರು. ಗಾಂಜಾ ವ್ಯಸನ ಹಾಗೂ ಮೋಜಿಗಾಗಿ ಸುಲಿಗೆ ಕೃತ್ಯ ನಡೆಸುತ್ತಿರುವುದು ವಿಚಾರಣೆಯಲ್ಲಿ ತಿಳಿದುಬಂದಿದೆ.

        ಆರೋಪಿಗಳ ಬಂಧನದಿಂದ ಕುಮಾರಸ್ವಾಮಿ ಲೇಔಟ್, ಬಸವನಗುಡಿ ತಲಾ 2, ತಲಘಟ್ಟಪುರ, ಪುಟ್ಟೇನಹಳ್ಳಿ, ಸಿದ್ದಾಪುರ, ಸಿ.ಕೆ. ಅಚ್ಚುಕಟ್ಟು, ಹುಳಿಮಾವು ಸೇರಿದಂತೆ, ತಲಾ 1 ಸರಗಳವು, ಸುಲಿಗೆ ಪ್ರಕರಣಗಳು ಸೇರಿ 10 ಅಪರಾಧ ಪ್ರಕರಣಗಳು ಪತ್ತೆಯಾಗಿವೆ ಎಂದು ರೋಹಿಣಿ ತಿಳಿಸಿದ್ದಾರೆ.

        ಪರಾರಿಯಾಗಿರುವ ಇಬ್ಬರು ಆರೋಪಿಗಳ ಜೊತೆ ಸೇರಿ ಬಂಧಿತ ಇಬ್ಬರು ಗ್ಯಾಂಗ್ ಕಟ್ಟಿಕೊಂಡು ಹೊಂಡಾ ಡಿಯೋ ಸ್ಕೂಟರ್‍ಗಳಲ್ಲಿ ಸಂಚರಿಸುತ್ತ ಸರಗಳವು, ಸುಲಿಗೆ ಕೃತ್ಯಗಳನ್ನು ನಡೆಸುತ್ತಿದ್ದರು ಎಂದು ಅವರು ತಿಳಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link