ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಓಲೇಕರ್

ಹಾವೇರಿ

       ಭಾರತೀಯ ಸಮಾಜದಲ್ಲಿ ಜಡ್ಡು ಗಟ್ಟಿದ ಜಾತಿ ವ್ಯವಸ್ಥೆಯನ್ನು ತೊಲಗಿಸಲು ಹಾಗೂ ಸಾಮಾಜಿಕ ಧಾರ್ಮಿಕ ಮತ್ತು ರಾಜಕೀಯ ಸಮಾನತೆ ತರಲು ತಮ್ಮ ಜೀವನ ಪರ್ಯಂತ ಡಾ. ಬಿ.ಆರ್. ಅಂಬೇಡ್ಕರ ಹೋರಾಟ ಮಾಡಿದರು ಎಂದು ಶಾಸಕ ನೆಹರೂ ಓಲೇಕಾರ ಹೇಳಿದರು.

        ನಗರದ ಅಂಬೇಡ್ಕರ ಸರ್ಕಲ್‍ನಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
ಅಂಬೇಡ್ಕರರ ಕಲ್ಪನೆಯ ಸಮ ಸಮಾಜ ನಿರ್ಮಾಣ ಸ್ವಾತಂತ್ರ್ಯ ಪಡೆದು ಇಂದಿಗೂ ಪಟ್ಟಭದ್ರ ಹಿತಾಸಕ್ತಿಗಳಿಂದ ಸಾಧ್ಯವಾಗಿಲ್ಲ. ಅದನ್ನು ಮೀರಿ ಬದುಕಿದಾಗ ಭಾರತೀಯ ಸಮಾಜಕ್ಕೆ ಶ್ರೀಮಂತಿಕೆ ಬರಲು ಸಾಧ್ಯವಿದೆ ಎಂದರು.

         ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ, ಡಾ. ಬಿ.ವಿ. ಚೈತ್ರಾ, ನಗರಸಭೆ ಆಯುಕ್ತ ಬಸವರಾಜ ಜಿದ್ದಿ, ಉಪವಿಭಾಗಾಧಿಕಾರಿ ತಿಪ್ಪೇಸ್ವಾಮಿ, ಪತ್ರಾಂಕಿತ ವ್ಯವಸ್ಥಾಪಕ ಆಂಜನೇಯ ಹುಲ್ಲಾಳ, ಸಹಾಯಕ ನಿರ್ದೇಶಕ ನವೀನ ಕಟ್ಟಿ,ಡಿಎಸ್‍ಎಸ್ ರಾಜ್ಯ ಮುಖಂಡ ಉಡಚಪ್ಪ ಮಾಳಗಿ.ಕಚೇರಿಯ ಎಲ್ಲಾ ಸಿಬ್ಬಂದಿ ವರ್ಗ ಸೇರಿದಂತೆ ಜಿಲ್ಲೆಯ ವಿವಿಧ ಸಂಘಟನೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link