ಬೆಂಗಳೂರು: ![](http://prajapragathi.com/wp-content/uploads/2018/10/gas-leak-metro.gif)
![](http://prajapragathi.com/wp-content/uploads/2018/10/gas-leak-metro.gif)
ಕೆ.ಆರ್.ಪುರದ ಮೆಟ್ರೋ ರೈಲಿನ ಕಾಮಗಾರಿ ವೇಳೆ ಅವಘಡವೊಂದು ನಡೆದಿದೆ. ಡ್ರಿಲ್ಲಿಂಗ್ ಮಾಡುವಾಗ ಗ್ಯಾಸ್ ಪೈಲ್ ಲೈನ್ ಒಡೆದಿದೆ, ಈ ವೇಳೆ ಗ್ಯಾಸ್ ಸೋರಿಯಾಗಿ ಆತಂಕದ ವಾತಾವರಣ ನಿರ್ಮಾಣಗೊಂಡಿರುವ ಘಟನೆ ಸೋಮವಾರ ನಡೆದಿದೆ.
ಮಹದೇವಪುರ ಬಳಿಯ ಗರುಡಾಚಾರ್ ಪಾಳ್ಯದಲ್ಲಿ ಈ ಅವಘಡ ಸಂಭವಿಸಿದೆ. ಮೆಟ್ರೋ ಕಾಮಗಾರಿ ವೇಳೆ ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಡ್ರಿಲ್ಲಿಂಗ್ ಮಾಡುವಾಗ ಅಲ್ಲಿದ್ದ 70 ಕಿಲೋ ಫೋರ್ಸ್’ನ ಗ್ಯಾಸ್ ಪೈಪ್ ಲೈನ್ ಸೋರಿಕೆಯಾಗಿದೆ ಎಂದು ಮೆಟ್ರೋ ತಿಳಿಸಿದೆ ಮತ್ತು ಯಾವುದೇ ರೀತಿಯ ಸಾವು ನೋವು ಸಂಭವಿಸಿಲ್ಲ ಎಂದು ತಿಳಿಸಲಾಗಿದೆ.
![](https://prajapragathi.com/wp-content/uploads/2018/10/gas-leak-metro.gif)