ಗುಬ್ಬಿ
ರೈತರ ಅಭ್ಯುದಯಕ್ಕೆ ಹತ್ತು ಹಲವು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದ್ದು, ರೈತರು ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಅಭಿವೃದ್ಧಿಪಥದತ್ತ ಸಾಗುವಂತೆ ತುಮಕೂರು ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಸಿ.ವಿ.ಮಹಾಲಿಂಗಯ್ಯ ತಿಳಿಸಿದರು.
ಪಟ್ಟಣದ ನಂದಿನಿ ಕ್ಷೀರ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ತುಮಕೂರು ಜಿಲ್ಲಾ ಸಹಕಾರ ಯೂನಿಯನ್ ತುಮಕೂರು, ಸಹಕಾರಿ ಹಾಲು ಒಕ್ಕೂಟ ಹಾಗೂ ಸಹಕಾರ ಇಲಾಖೆ ಇವರ ಸಹಕಾರ ಸಹಯೋಗದಲ್ಲಿ ಏರ್ಪಡಿಸಿದ್ದ ಒಂದು ದಿನದ ಜಿಲ್ಲಾ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಾಲು ಉತ್ಪಾದಕರಿಗೆ ಹೆಚ್ಚಿನ ಆದಾಯ ಬರಬೇಕು ಎಂಬ ನಿಟ್ಟಿನಲ್ಲಿ 23.50 ಪೈಸೆ ನೀಡಲು ಸಂಘವು ಬದ್ದವಾಗಿದ್ದು ಇದರಿಂದ ಅವರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಹಾಲಿನ ದರ ಹೆಚ್ಚಳದಿಂದ ವಾರ್ಷಿಕವಾಗಿ ಲಕ್ಷಾಂತರ ಹಣ ಹೊರೆ ಬೀಳುತ್ತದೆ.
ಆದರೂ ಅದನ್ನು ಭರಿಸಲು ಸಿದ್ದವಿದ್ದು ರೈತರಿಗೆ ಬೇಕಾದಂತಹ ಎಲ್ಲಾ ಸೌಲಭ್ಯಗಳು ಸಹ ಸಿಗಬೇಕು ಎಂಬ ಉದ್ದೇಶದಿಂದ ಹೆಚ್ಳ ಮಾಡಲಾಗಿದೆ ಎಂದು ತಿಳಿಸಿದ ಅವರು, ಈ ಕಾರ್ಯಾಗಾರಗಳಲ್ಲಿ ರೈತರಿಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತಿದ್ದು ಕಾರ್ಯದರ್ಶಿಗಳು ಅರ್ಥ ಮಾಡಿಕೊಳ್ಳಬೇಕು. ಚುನಾವಣೆಗಳು ಹೇಗೆ ಮಾಡಬೇಕು ಆಡಳಿತ ಲೆಕ್ಕ ಪುಸ್ತಕಗಳ ನಿರ್ವಹಣೆ ಮುಂತಾದ ವಿಷಯಗಳ ಬಗ್ಗೆ ಸಮಗ್ರವಾಗಿ ತಿಳಿಸಲಾಗುವುದು. ಇಂತಹ ಕಾರ್ಯಾಗಾರಗಳಲ್ಲಿ ಭಾಗವಹಿಸುವ ಮೂಲಕ ಸಹಕಾರ ಸಂಘಗಳು ನಿರ್ವಹಿಸಬೇಕಾದ ದಾಖಲೆಗಳ ನಿರ್ವಹಣೆ ಬಗ್ಗೆ ತಿಳಿಸಲಾಗುತ್ತಿದೆ ಎಂದು ತಿಳಿಸಲಾಗುವುದೆಂದು ತಿಳಿಸಿದರು ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳದ ನಿರ್ದೇಶಕ ಜಿ.ಚಂದ್ರಶೇಖರ್ ಮಾತನಾಡಿ ಪ್ರತಿದಿನವು ಸಹ ನಾವು ವಿಚಾರಗಳನ್ನು ತಿಳಿಯಬೇಕಾಗಿದೆ.
ನಮ್ಮ ಚುನಾವಣೆಯನ್ನು ಅಭಿವೃದ್ಧಿ ಅಧಿಕಾರಿಗಳು ಬಂದು ಮಾಡುತ್ತಿದ್ದಾರೆ. ಬೇರೆ ಚುನಾವಣೆಗೂ ಸಹಕಾರ ಸಂಘದ ಚುನಾವಣೆಗೂ ಸಾಕಷ್ಟು ವ್ಯತ್ಯಾಸವಿದೆ. ಹಾಗಾಗಿ ಕಾರ್ಯದರ್ಶಿಗಳು ಸರಿಯಾದ ರೀತಿಯಲ್ಲಿ ವಿಚಾರವನ್ನು ತಿಳಿದುಕೊಂಡಿರಬೇಕು. ಆಗ ಯಾವುದೇ ಸಮಸ್ಯೆಯಾಗದಂತೆ ನಡೆಸಿಕೊಂಡು ಹೋಗಬಹುದು. ಕಾಯಿದೆಗಳ ಬಗ್ಗೆ ನಿಮಗೆ ಅರಿವು ಇರಬೇಕು. ಹಾಗಾಗಿಯೇ ನಿಮಗೆ ನಾವು ಇಂತಹ ಕಾರ್ಯಾಗಾರಗಳನ್ನು ಮಾಡುತ್ತಿದ್ದು ಇಲ್ಲಿ ತಿಳಿಸುವ ಎಲ್ಲಾ ವಿಚಾರವನ್ನು ಸರಿಯಾಗಿ ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಯೂನಿಯನ್‍ನ ಅಧ್ಯಕ್ಷ ಬಿ.ಜಿ.ವೆಂಕಟೆಗೌಡ, ನಿರ್ದೇಶಕ ಜಿ.ಡಿ. ಸುರೇಶ್‍ಗೌಡ, ಸಂಪನ್ಮೂಲ ವ್ಯಕ್ತಿ ಎಚ್.ಎಸ್.ನಾಗರಾಜಯ್ಯ, ಸಹಾಯಕ ವ್ಯವಸ್ಥಾಪಕ ಎಂ.ಎಸ್. ಮಂಜುನಾಥ್, ವಿಸ್ತಾರಣಾಧಿಕಾರಿ ಬಷೀರ್, ಸಿದ್ದಲಿಂಗಸ್ವಾಮಿ, ಮಹಾಂತೇಶ್, ಹಿರೆಮಠ, ಮಹಾದೇವಯ್ಯ, ಗೌತಮಿ ಸೇರಿದಂತೆ ತಾಲ್ಲೂಕಿನ ಎಲ್ಲಾ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
