ತುಮಕೂರು
ಮೆಡಿಕಲ್ ಕಾಲೇಜು ಹೊಂದಿರುವ ಮಹಾಶಯರೆಲ್ಲಾ ತಪ್ಪು ಮಾಡುತ್ತಾರೆ, ಮೆಡಿಕಲ್ ಕಾಲೇಜು ನಡೆಸುತ್ತಿರುವ ಸ್ವಾಮೀಜಿಗಳೂ ಹೊರತಲ್ಲ, ಯಾರಿಗೆ ಗ್ರಹಚಾರ ಕೆಡುವುದೋ ಅಂತಹವರು ತಗಲಾಕಿಕೊಳ್ಳುತ್ತಾರೆ ಎಂದು ಐಟಿ ದಾಳಿ ಬಗ್ಗೆ ಮಾಜಿ ಶಾಸಕ ಕೆ.ಎನ್. ರಾಜಣ್ಣನವರು ಪ್ರತಿಕ್ರಿಯೆ ನೀಡಿದರು.
ಮಾಜಿ ಡಿಸಿಎಂ ಡಾ. ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆ ಮೇಲಿನ ಐಟಿ ದಾಳಿ ಬಗ್ಗೆ ನಾನು ಏನೂ ಹೇಳಂಗಿಲ್ಲ ಎಂದ ಅವರು, ಐಟಿ ದಾಳಿ ಬಿಜೆಪಿಯ ಪಿತೂರಿಯೋ ಅಲ್ಲವೊ, ತಪ್ಪು ಯಾಕೆ ಮಾಡಬೇಕು, ತಪ್ಪು ಮಾಡದಿದ್ದರೆ ಯಾರು ದಾಳಿ ಮಾಡುತ್ತಾರೆ ಎಂದರು.
ಇ.ಡಿ. ಅಧಿಕಾರಿಗಳು ತಮಗೆ ನೋಟೀಸ್ ಜಾರಿ ಮಾಡಿದ್ದರಿಂದ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಹರ್ಷ ಶುಗರ್ಸ್‍ಗೆ ಸಾಲ ನೀಡಿದ್ದರ ಸಂಬಂಧದ ದಾಖಲೆಗಳನು ತೆಗೆದುಕೊಂಡು ಹೋಗಿ ಕೊಟ್ಟು ಬಂದೆ, ಇನ್ನೂ ಕೆಲವು ದಾಖಲೆ ಕೇಳಿದ್ದಾರೆ, ಬರುವ 16ರಂದು ಹೋಗಿ ಕೊಟ್ಟು ಬರುತ್ತೇನೆ. ಬ್ಯಾಂಕ್ ಸಮೂಹ ವ್ಯವಸ್ಥೆ ಅಡಿಯಲ್ಲಿ ನಿಯಮಾನುಸಾರ 215 ಕೋಟಿ ರೂ ಸಾಲ ನೀಡಲಾಗಿದೆ. ಅವರು ಮರು ಪಾವತಿ ಮಾಡುತ್ತಿದ್ದಾರೆ ಹೊರತು ಇದರಲ್ಲಿ ಯಾವುದೇ ಲೋಪವಾಗಿಲ್ಲ ಎಂದರು.ಬ್ಯಾಂಕಿನಲ್ಲಿ ಹಣ ಠೇವಣಿ ಇಟ್ಟವರಿಗೆ ಬಡ್ಡಿ ಕೊಡಬೇಕೆಂದರೆ ಹಣವನ್ನು ಬ್ಯಾಂಕಿನಲ್ಲಿ ಇಟ್ಟುಕೊಂಡರೆ ಆಗುತ್ತಾ, ಸಾಲ ಕೊಟ್ಟು ವಹಿವಾಟು ನಡೆಸಬೇಕಲ್ಲವೆ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
