ಗೋಸ್ಟ್ ಪ್ರ್ಯಾಂಕ್ ಮಾಡಿ ಹೆದರಿಸುತ್ತಿದ್ದ ತಂಡದ ಬಂಧನ..!

ಬೆಂಗಳೂರು

    ತಡರಾತ್ರಿ ದೆವ್ವದ ಮುಖವಾಡಿ ಧರಿಸಿ, ದಾರಿಹೋಕರನ್ನು ಬೆದರಿಸಿ, ತಮಾಷೆಗಾಗಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ತಂಡವನ್ನು ಪೊಲೀಸರು ಬಂಧಿಸಿದ್ದಾರೆ.ಪ್ರ್ಯಾಂಕ್​ ವಿಡಿಯೋ ಮಾಡಿ, ಟಿಕ್ ಟಾಕ್, ಯೂಟ್ಯೂಬ್​ನಲ್ಲಿ ಅಪಲೋಡ ಮಾಡುವ ಉದ್ದೇಶದಿಂದ.7 ಯುವಕರ ತಂಡವು ನಿತ್ಯವೂ ದೆವ್ವದ ವೇಷ ಧರಿಸಿ ಯಶವಂತಪುರ ಸೇರಿ ಸುತ್ತಮುತ್ತಲ ಪ್ರದೇಶದಲ್ಲಿ ತಡರಾತ್ರಿಯಲ್ಲಿ ಜನರನ್ನು ಬೆದರಿಸುವ ಕೆಲಸ ಮಾಡುತ್ತಿತ್ತು. ಇದರಿಂದ ಹೆದರಿ ಕೆಲವರು ಯಶವಂತಪುರ ಪೊಲೀಸ್​ ಠಾಣೆಗೆ ದೂರು ನೀಡಿದ್ದರು.

    ಭಾನುವಾರ ತಡರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು, 7 ಯುವಕರನ್ನು ವಶಕ್ಕೆ ಪಡೆದು, ಪ್ರ್ಯಾಂಕ್​ ವಿಡಿಯೋ ಚಿತ್ರೀಕರಣಕ್ಕೆ ಬಳಸುತ್ತಿದ್ದ ಕ್ಯಾಮರಾ ಮತ್ತಿತರ ಸಾಮಗ್ರಿಗಳನ್ನು ವಶ ಪಡಿಸಿಕೊಂಡಿದ್ದಾರೆ‌.ತಮಾಷೆಗಾಗಿ ಜನರನ್ನು ಬೆದರಿಸಿ ವೀಡಿಯೋ ಚಿತ್ರೀಕರಿಸಿ, ಟಿಕ್ ಟಾಕ್, ಯುಟ್ಯೂಬ್ ನಲ್ಲಿ ಅಪಲೋಡ್ ಮಾಡುತ್ತಿದುದ್ದಾಗಿ ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link