ಬಳ್ಳಾರಿ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧೀನದಲ್ಲಿ ಬರುವ ಅಮೂಲ್ಯ(ಜಿ) ವಿಶೇಷ ದತ್ತು ಸಂಸ್ಥೆಯಲ್ಲಿ ಸುಮಾರು ಎರಡು ದಿನದ ಹೆಣ್ಣು ಮಗು ನೊಂದಣಿಯಾಗಿದೆ ಎಂದು ಸಂಸ್ಥೆಯ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾ.17ರಂದು ಬೊಮ್ಮಗಟ್ಟ ಗ್ರಾಮದ ಹತ್ತಿರವಿರುವ ತೋಟದ ಒಳಗೆ ಬೇಲಿ ಪಕ್ಕದಲ್ಲಿ ಹೆಣ್ಣು ಮಗು ಪತ್ತೆಯಾಗಿರುತ್ತದೆ. ಸಂಸ್ಥೆಯವರು ಅಭಿನಂದನ ಎಂಬ ಹೆಸರು ಇಟ್ಟಿರುತ್ತಾರೆ. ಗೋಧಿ ಮೈಬಣ್ಣ, ದುಂಡು ಮುಖ ಇದ್ದು, ತೆಲೆಯಲ್ಲಿ ಕಪ್ಪು ಕೂದಲು ಇರುತ್ತದೆ. ಮೈ ಮೇಲೆ ಯಾವುದೇ ಬಟ್ಟೆ ಧರಿಸಿರುವುದಿಲ್ಲ.
ಮಗುವಿನ ಪೋಷಕರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಅಧೀಕ್ಷಕರು, ಅಮೂಲ್ಯ(ಜಿ) ವಿಶೇಷ ದತ್ತು ಸಂಸ್ಥೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕಂಟೋನ್‍ಮೆಂಟ್ ಅಥವಾ ದೂ.ಸಂ. 08392-297101 ಗೆ ಮಾಹಿತಿ ನೀಡಬೇಕೆಂದು ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
