ಬೆಂಗಳೂರು
ಪೋಷಕರು ಜಾತಿಯ ಕಾರಣಕ್ಕೆ ವಿವಾಹ ಮಾಡಿಕೊಡಲು ಒಪ್ಪದಿದ್ದರಿಂದ ಪ್ರೀತಿಸಿದ ಕಾಲೇಜು ವಿದ್ಯಾರ್ಥಿನಿಯನ್ನು ಹಾಡಹಗಲೇ ಮೂವರು ಪರಿಚಯಸ್ಥ ಯುವಕರು ಅಪಹರಿಸಲು ಯತ್ನಿಸಿದ ಘಟನೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದಾಸರಹಳ್ಳಿ ಬಸ್ ನಿಲ್ದಾಣ ಬಳಿ ಕಾಲೇಜು ಮುಗಿಸಿ ವಿದ್ಯಾರ್ಥಿನಿಯು ಮನೆಗೆ ಹೋಗುತ್ತಿದ್ದಾಗ ಒಮ್ನಿ ವ್ಯಾನ್‍ನಲ್ಲಿ ಬಂದ ಮೂವರು ವಿದ್ಯಾರ್ಥಿನಿಯನ್ನು ಅಪಹರಿಸಿ ತುಮಕೂರು ರಸ್ತೆಯ ನೈಸ್ ರಸ್ತೆ ಪಕ್ಕ ನಿಂತಿದ್ದ ಮತ್ತೊಂದು ಕಾರಿಗೆ ಆಕೆಯನ್ನು ಹತ್ತಿಸಿದ್ದಾರೆ.
ಇನ್ನೊಂದು ಕಾರಿನಲ್ಲಿ ಇದ್ದ ಯುವಕನನ್ನು ಕಂಡ ವಿದ್ಯಾರ್ಥಿನಿ ಬೆರಗಾಗಿದ್ದಾಳೆ. ಕಾರಣ ಆ ಕಾರಿನಲ್ಲಿದ್ದ ಯುವಕ ಆಕೆಯ ಸ್ನೇಹಿತನಾಗಿದ್ದು ಆತನನ್ನ ಸಹಾಯ ಮಾಡುವಂತೆ ಆಕೆ ಕೇಳಿದ್ದಾಳೆ. ಈ ವೇಳೆ ನಿನ್ನನ್ನ ಅಪಹರಣ ಮಾಡಿಸಿದ್ದು ನಾನೇ ಎಂದು ಸ್ನೇಹಿತ ಸಚಿನ್ ಉತ್ತರ ಕೊಟ್ಟಿದ್ದಾನೆ. ಬಳಿಕ ಆತನ ಸ್ವಿಫ್ಟ್ ಕಾರಿನಲ್ಲಿ ಕುಣಿಗಲ್ ಮಾರ್ಗವಾಗಿ ತೆರಳಿ ಮಾರ್ಗ ಮಧ್ಯೆ ವಿದ್ಯಾರ್ಥಿನಿಗೆ ಪ್ರೀತಿಸುವಂತೆ ಒತ್ತಾಯ ಮಾಡಿ ಖಾರದ ಪುಡಿ ಎರಚಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ಖಾರದ ಪುಡಿ ಘಾಟು ಜಾಸ್ತಿಯಾಗಿದ್ದರಿಂದ ಸಚಿನ್ ಕಾರಿನ ಗ್ಲಾಸ್ ತೆಗೆದಿದ್ದು ಈ ವೇಳೆ ಕಾರಿನ ಬಾಗಿಲು ತೆಗೆದು ವಿದ್ಯಾರ್ಥಿನಿ ಪರಾರಿಯಾಗಿ, ಅಲ್ಲೇ ಸಮೀಪದಲ್ಲಿದ್ದ ಆಟೋ ಚಾಲಕರ ನೆರವಿನಿಂದ ತನ್ನ ತಾಯಿಗೆ ಕರೆ ಮಾಡಿದ್ದಾಳೆ. ಕಳೆದ ಡಿ.20ರಂದು ಈ ಘಟನೆ ನಡೆದಿದ್ದು ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದ ಯುವಕನಿಗೆ ಅನ್ಯ ಜಾತಿಯ ಕಾರಣಕ್ಕೆ ವಿವಾಹಕ್ಕೆ ಪೋಷಕರು ಒಪ್ಪದಿದ್ದರಿಂದ ಅಪಹರಣ ಯತ್ನ ನಡೆದಿದೆ ಎಂದು ತಿಳಿದುಬಂದಿದೆ ಬಾಗಲಗುಂಟೆ ಪೆಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








