ರೈತರಿಗೆ ಸರಿಯಾದ ರೀತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಒದಗಿಸಿ: ಒಂಬುಡ್ಸ್‍ಮನ್ ಆರ್.ಅಲ್ಲಪ್ಪ

ತುಮಕೂರು

    ಗ್ರಾಮೀಣ ಭಾಗದ ಬಡ ಅಸಂಘಟಿತ ಕೂಲಿ ಕಾರ್ಮಿಕರಿಗೆ ಗುಳೆ ಹೋಗದಂತೆ ನರೇಗಾ ಯೋಜನೆಯಡಿ 100 ದಿನಗಳ ಉದ್ಯೋಗವನ್ನು ಒದಗಿಸಬೇಕು ಎಂದು ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಒಂಬುಡ್ಸ್‍ಮನ್ ಆರ್.ಅಲ್ಲಪ್ಪ ಅವರು ತಿಳಿಸಿದರು.

    ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿಂದು ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಿಂದ ರೈತರು ತಮ್ಮ ಕೃಷಿ ಜಮೀನಿನಲ್ಲಿ ದನದ ಕೊಟ್ಟಿಗೆ/ಕೃಷಿಹೊಂಡವನ್ನು ನಿರ್ಮಿಸಿಕೊಂಡು ತಮ್ಮ ಕೂಲಿಯನ್ನು ತಾವೇ ವೃದ್ಧಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

   ನನ್ನನ್ನು ಈ ಜಿಲ್ಲೆಗೆ ಸರ್ಕಾರ ನೇಮಕ ಮಾಡಿದಾಗ ನವಂಬರ್ 2017 ರಲ್ಲಿ 25 ಹಳೆ ದೂರು ಪ್ರಕರಣಗಳು ಬಾಕಿಯಿದ್ದವು. ಅನಂತರ 113 ಸೀಕೃತಿಯಾಗಿ ಒಟ್ಟು 138 ದಾಖಲಾಗಿದ್ದು, ಈ ಪೈಕಿ 79 ಪ್ರಕರಣಗಳು ಇತ್ಯರ್ಥವಾಗಿದ್ದು. ಈ ಪೈಕಿ 59 ಪ್ರಕರಣಗಳು ವಿವಿಧ ಹಂತದಲ್ಲಿ ಬಾಕಿ ಇವೆ ಎಂದರಲ್ಲದೇ ಜಿಲ್ಲೆಯ 10 ತಾಲ್ಲೂಕುಗಳ ಪೈಕಿ ಕುಣಿಗಲ್ ಮತ್ತು ತುರುವೇಕೆರೆ ತಾಲ್ಲೂಕುಗಳಲ್ಲಿ ಹೆಚ್ಚು ದೂರು ಪ್ರಕರಣಗಳು ದಾಖಲಾಗಿದೆ. ಕುಣಿಗಲ್ 35 ತುರುವೇಕೆರೆ 15 ಪ್ರಕರಣಗಳು ಕಡಿಮೆ ಪ್ರಕರಣಗಳು ದಾಖಲಾಗಿವೆ ಎಂದು ಅವರು ತಿಳಿಸಿದರು.

 

Recent Articles

spot_img

Related Stories

Share via
Copy link
Powered by Social Snap