ಚಿತ್ರದುರ್ಗ:
ವಸತಿ ರಹಿತರನ್ನು ಗುರುತಿಸಿ, ಅವÀರನ್ನು ಕುಟುಂಬಸ್ಥರಿಗೆ ಸೇರಿಸುವಂತಾಗಬೇಕು. ಅಥವಾ ವಸತಿ ರಹಿತರಿಗೆ ವಸತಿ ಕಲ್ಪಿಸುವ ಕೆಲಸ ಶೀಘ್ರಗತಿಯಲ್ಲಿ ಸಾಗಬೇಕು ಎಂದು ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಅವರು ಹೇಳಿದರು.ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ ನಗರದ ವಸತಿ ರಹಿತರಿಗೆ ಆಶ್ರಯ ಉಪಘಟಕ ಪ್ರಗತಿ ಪರಿಶೀಲನಾ ಸಭೆ (ಡೇ-ನಲ್ಮ್)’ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಗರದಲ್ಲಿ ನಿರ್ಗತಿಕರ ಸಂಖ್ಯೆ ಇನ್ನೂ ಕಡಿಮೆಯಾಗಿಲ್ಲ. ನಿರ್ಗತಿಕರು ಹಾಗೂ ವಸತಿ ರಹಿತರನ್ನು ಗುರುತಿಸಿ, ಅವರ ಕುಟುಂಬದೊಡನೆ ಸೇರಿಸಬೇಕು. ವಸತಿ ರಹಿತರಿಗೆ ವಸತಿ ಸೌಲಭ್ಯ ನೀಡಬೇಕು. ಕೌಶಲ್ಯ ತರಬೇತಿ ಸಹ ನೀಡಿ, ಅವರಿಗೆ ಉದ್ಯೋಗ ಮಾಡುವಂತೆ ಪ್ರೋತ್ಸಾಹಿಸಬೇಕು. ಹಿರಿಯ ನಾಗರಿಕರನ್ನು ಅವರ ಕುಟುಂಬ ತಿರಸ್ಕರಿಸಿದರೆ ಹಿರಿಯ ನಾಗರೀಕ ಕಾಯ್ದೆಯಡಿ ಪ್ರಕರಣ ದಾಖಲಿಸಬಹುದು ಅಥವಾ ವೃದ್ಧಾಶ್ರಮ ಸೇರಿಸಬೇಕು ಎಂದರು.
ಡೇ-ನಲ್ಮ್ ಅಭಿಯಾನದ ವ್ಯವಸ್ಥಾಪಕರಾದ ಸೌಮ್ಯ ಎಸ್ ಅವರು ದೀನ್ ದಯಾಳ್ ಅಂತ್ಯೋದಯ ಯೋಜನೆ – ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ಡೇ-ನಲ್ಮ್) ನಗರ ಪ್ರದೇಶದ ಬಡತನ ನಿರ್ಮೂಲನೆ ಈ ಯೋಜನೆ ಪ್ರಮುಖ ಉದ್ದೇಶವಾಗಿದೆ. ನಗರ ಪ್ರದೇಶದ ಬಸ್, ರೈಲ್ವೆ ನಿಲ್ದಾಣ, ದೇವಸ್ಥಾನ, ಆಸ್ಪತ್ರೆ ಹಾಗೂ ಕಾಲುದಾರಿಗಳಲ್ಲಿ ವಾಸಿಸುತ್ತಿರುವ ನಗರದ ವಸತಿ ರಹಿತರಿಗೆ ಈ ಯೋಜನೆ ಕಲ್ಪಿಸಲಾಗುತ್ತದೆ.
ನಿರ್ಗತಿಕರನ್ನು ಸಮೀಕ್ಷೆ ಮುಖಾಂತರ ಗುರುತಿಸಲಾಗುತ್ತದೆ. ಆರೋಗ್ಯ ಸಮಸ್ಯೆಯಿದ್ದವರಿಗೆ ವೈದ್ಯಕೀಯ ಸೇವೆ ಕಲ್ಪಿಸಲಾಗುತ್ತದೆ. ಅವರಿಗೆ ಆಧಾರ್ ಕಾರ್ಡ್ ಸೌಲಭ್ಯವನ್ನು ಸಹ ನೀಡಲಾಗುತ್ತದೆ. ಜೊತೆಗೆ ಎಲ್ಲಾ ಜನನಿಬಿಡ ಪ್ರದೇಶಗಳಲ್ಲಿ ಈ ಯೋಜನೆ ಬಗ್ಗೆ ಮಾಹಿತಿ ಭಿತ್ತಿ ಪ್ರತಗಳ ಮೂಲಕ ಪ್ರಚುರಪಡಿಸಲಾಗಿದೆ ಎಂದರು.
ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ. ರವಿಶಂಕರ್ ರೆಡ್ಡಿ, ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಪಿ. ಆರ್ ತಿಪ್ಪೇಸ್ವಾಮಿ, ಜಂಟಿ ಕೃಷಿ ನಿರ್ದೇಶಕ ಸದಾಶಿವ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.








