ಬಳ್ಳಾರಿ
ತುಂಗಭದ್ರ ರೈತರ ಸಂಘ ಉದ್ಘಾಟನಾ ಸಮಾರಂಭಕ್ಕೆ ದಿವ್ಯಸಾನಿದ್ಯವಹಿಸಿದ ಕಲ್ಯಾಣ ಸ್ವಾಮಿ ಕಮ್ಮರಚೇಡು ಇವರು ಸಂಘವನ್ನು ಉದ್ಘಾಟಿಸಿ ರೈತರ ಕಷ್ಟಗಳಿಗೆ ಸರ್ಕಾರ ನೇರವಾಗಿ ಅವರ ಬೇಳದ ಬೆಳೆಗಳನ್ನು ಸರ್ಕಾರ ಬೆಂಬಲ ಬೆಲೆ ನೀಡಬೇಕು ಎಂದು ರೈತರ ಪರವಾಗಿ ಒತ್ತಾಯಿಸಿದರು,
ನಂತರದ ಭಾಗವಾಗಿ ರೈತ ಸಂಘವು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಿ ಸಿರುಗುಪ್ಪ ತಾಲೂಕಿನಲ್ಲಿ 07 ಸಾವಿರ ಹೆಕ್ಟೇರ್ ಜಮೀನಿಗೆ ಕಬ್ಬು ಬೆಳೆಯನ್ನು ಬೆಳೆದು 80 ಕೋಟಿ ರೂಪಾಯಿಗಳು ವೆಚ್ಚವನ್ನು ಮಾಡಿದ್ದಾರೆ, ಈ ಕಬ್ಬು ಸರ್ಕಾರ ಖರೀದಿ ಮಾಡಬೇಕು, ಹಾಗೆಯೇ ಹಿಂದಿನ ವರ್ಷ ಖರೀದಿ ಮಾಡಿದ ಕಬ್ಬಿನ 03 ಮೂರು ಕೋಟಿ ಹಣ ಬಿಡುಗಡೆ ಗೊಳಿಸಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ ದರೂರು ಪುರುಷೋತ್ತಮ ಗೌಡ ಸರ್ಕಾರವನ್ನು ಒತ್ತಾಯಿಸಿದರು.
ನಗರದ ಮಯೂರ ಹೋಟೆಲ್ ನಲ್ಲಿ ಪತ್ರಿಕಾ ಮಾದ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು ಇದೆ ನವೆಂಬರ್ 15 ರಂದು ತುಂಗಭದ್ರ ನೀರಾವರಿ ಸಲಹಾ ಸಮಿತಿ ಸಭೆ ಮುನಿರಬಾದ್ ನಲ್ಲಿ ಸಚಿವ ವೆಂಕಟರಾವ್ ನಾಡಗೌಡ ಅಧ್ಯಕ್ಷತೆಯಲ್ಲಿ ನಡೆಯಲಿದ್ದು ಕರ್ನಾಟಕದ ಮೂಲೆ ಮೂಲೆಗಳಲ್ಲಿರುವ ರೈತರಿಗೆ ಬೇಸಿಗೆ ಬೆಳೆಗೆ ನೀರು ಸರಬರಾಜು ಮಾಡಬೇಕು ಎಂದು ಅವರಿಗೆ ಕೇಳಿಕೊಂಡಿದ್ದೆವೆ ಈ ಸಂದರ್ಭದಲ್ಲಿ ಸ್ಪಷ್ಟ ಪಡಿಸಿದರು
ಶಾಸಕರು ಮಂತ್ರಿಗಳು ಜನ ಪ್ರತಿನಿಧಿಗಳು ಮರೆತು ನಿದ್ದೆ ಮಾಡಿದರೆ ಅವರುಗಳ ಮನೆ ಮುಂದೆ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತದೆ, ಅದರಂತೆ ಬೇಸಿಗೆ ಬೆಳೆಗೆ ನೀರು ಕೊಡದೆ ಹೋದರೆ ರೈತರಿಗೆ ವಿಷ ಕೊಡಿ ಅದನ್ನು ಕೂಡಿದು ಸಾಯಿತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು, ಇದರೊಂದಿಗೆ ಕೇಂದ್ರ ಸರ್ಕಾರವು ಈಗಾಗಲೇ 1750 ಭತ್ತಕ್ಕೆ ಬೆಂಬಲ ಬೆಲೆ ನೀಡಿದೆ ಅದನ್ನ ಕ್ರೋಡೀಕರಿಸಿ ಬೆಲೆ ನಿಗದಿ ಮಾಡಿ ಭತ್ತ ಖರೀದಿ ಕೇಂದ್ರ ಆರಂಬಿಸಬೇಕು ಎಂದು ಇದು ಸರ್ಕಾರಕ್ಕೆ ಕೊನೆ ಎಚ್ಚರಿಕೆ ನೀಡಿದರು ಇದಕ್ಕೆ ರೈತ ಸಂಘದ ಜಿಲ್ಲಾ ಅದ್ಯಕ್ಷರು ಬಸವನಗೌಡ ಜಿಲ್ಲಾ ಉಪಾಧ್ಯಕ್ಷರು ಶಿವಯ್ಯ ಸತ್ಯನಾರಾಯಣ ಬಸಯ್ಯಸ್ವಾಮಿ ರಂಜಾನ್ ಸಾಬ್ ಅಯ್ಯನಗೌಡ ಇನ್ನಿತರರು ರೈತ ಮುಖಂಡರು ಭಾಗವಹಿಸಿದ್ದರು