ಭದ್ರಾಮೇಲ್ದಂಡೆ ಯೋಜನೆ: ಜಮೀನು ಕಳೆದುಕೊಂಡವರಿಗೆ ಪರಿಹಾರ ಕೊಡಿ

ಚಿತ್ರದುರ್ಗ

    ಕರ್ನಾಟಕ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಅದಿಸೂಚನೆ ಹೊರಡಿಸಿ ಭೂ ಸ್ವಾಧೀನ ಮಾಡಿಕೊಳ್ಳದೇ ಭೂ ಪರಿಹಾರ ನೀಡದೆ ಸಿ.ವಿ.ಸಿ ಸಮಿತಿ ಕರೆದು ಭೂ ದರ ಹೆಚ್ಚಿಸದೇ ಗುತ್ತಿಗೆದಾರರೊಂದಿಗೆ ಶಾಮೀಲು ಆಗಿ ಭದ್ರ ಮೇಲ್ದಂಡೆ ಯೋಜನೆ ಅಧಿಕಾರಿಗಳು ಮತ್ತು ಸರ್ಕಾರ ಹಾಗೂ ಗುತ್ತಿಗೆದಾರ ವಂಚನೆ ಮಾಡಿದ್ದಾರೆ ಎಂದು ಅರೋಪಿಸಿ ರಾಷ್ಟ್ರೀಯ ಕಿಸಾನ್ ಸಂಘದವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿಯನ್ನು ನಡೆಸಲಾಯಿತು.

    ಚಳುವಳಿಯಲ್ಲಿ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೊಂಚೆ ಶಿವರುದ್ರಪ್ಪ ಪಾಲವ್ವನಹಳ್ಳಿಗೊಲ್ಲರಹಟ್ಟಿ ರಾಷ್ಟ್ರೀಯ ಹೆದ್ದಾರಿ-4ಕ್ಕೆ ಹತ್ತಿರವಿದ್ದು, ಮಾರುಕಟ್ಟೆ ದರ ಹೆದ್ದಾರಿ ಪಕ್ಕ ರೂ.50ಲಕ್ಷ ದರ ಮಾರುಕಟ್ಟೆ ದರ ಇರುತ್ತದೆ. ರೈತರ ಭೂಮಿಗೆ ವಶಪಡಿಸುವ ಸಮಯದಲ್ಲಿ ಎಕರೆ ಗುಂಟೆ ಅನ್ನದೇ ಪ್ರತಿ ಚದರ ಅಡಿಗೆ ಒಂದರಂತೆ ದರ ನಿಗಧಿಪಡಿಸಬೇಕು ಎಂದು ಆಗ್ರಹಿಸಿದರು

   ರಾಜ್ಯ ಮಹಿಳಾ ಅಧ್ಯಕ್ಷೆ ಶ್ರೀಮತಿ ಮಂಜುಳ ಡಾ.ಸ್ವಾಮಿ ಮನವಿ ಪತ್ರ ನೀಡಿ, ಭಷ್ಟಾಚಾರದಲ್ಲಿ ಅಧಿಕಾರಗಳನ್ನು ಭಾಗಿಯಾಗಿರುವುದರಿಂದ ಬಂಧಿಸಿ ಎಂದು ಒತ್ತಾಯಿಸಿದರು.ರಾಜ್ಯ ಮಹಿಳಾ ಸಂಚಾಲಕಿ ಚಂದ್ರಕಲಾ ಮಾತನಾಡುತ್ತಾ ಮಹಿಳಾ ರೈತರನ್ನು ಒಕ್ಕಲೆಬ್ಬಿಸುತ್ತಿದ್ದು, ಅನವಶ್ಯಕ ಕಿರುಕುಳ ಕೊಡುವುದು ಪರಿಹಾರ ನೀಡದೇ ಕಾಮಗಾರಿ ಮಾಡುವುದು ಸರಿಯಲ್ಲ ಎಂದು ಹೇಳಿದರು.

    ರಾಜ್ಯ ಸಮಿತಿ ಪದಾಧಿಕಾರಿಗಳಾದ ಶಾರದ ನಾಯಕ್ ತುಮಕೂರು, ಡಾ.ಮಲ್ಲಿಕಾರ್ಜುನ್ ದಾವಣಗೆರೆ, ಕಾರ್ಯಾಧ್ಯಕ್ಷರು, ಆರ್.ಹೇಮಂತ್‍ಕುಮಾರ್ ಕೆ.ಆರ್.ಬಾಬುರೆಡ್ಡಿ ಜಿ.ಆರ್. ಮಂಜುನಾಥ್ ಹಿರಿಯೂರು, ಜಿ.ಟಿ.ತಿಪ್ಪೇರುದ್ರಪ್ಪ ತಿಮ್ಮಾರೆಡ್ಡಿ ಧನಂಜಯರೆಡ್ಡಿ, ವೀರಭದ್ರಪ್ಪ ರುದ್ರಪ್ಪ ಈಶ್ವರಪ್ಪ ರಾಜಶೇಖರ್ ತುಮಕೂರು, ಡಿ.ಕೃಷ್ಣಾರೆಡ್ಡಿ, ಎಸ್.ಎಂ.ಬಸಯ್ಯ ಭಾಗವಹಿಸಿ ಮಾತನಾಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap