ಚಿತ್ರದುರ್ಗ
ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಸಂಚರಿಸುವ ಪೋಷಕರು, ವಿದ್ಯಾರ್ಥಿಗಳಿಗೆ, ಅಪಘಾತ ಮುಕ್ತ ಸಂಚಾರಕ್ಕೆ ಅವಕಾಶ ಸಿಗಲೇಬೇಕು. ಇದರಿಂದಾಗಿ ಸಾಕಷ್ಟು ಜೀವಿಗಳಿಗೆ ನಮ್ಮದಿ ಕಾಣುವಂತಾಗಬೇಕು ಎಂದು ಕೆ. ವೆಂಕಣ್ಣಾಚಾರ್ ತಿಳಿಸಿದರು.
ಅವರು ಜೆ.ಸಿ.ಅರ್. ವೃತ್ತದಲ್ಲಿ ವಿಜ್ಞಾನ ಕೇಂದ್ರ, ಲಿಟ್ಲ ಕಿಡ್ಸ್ ಶಾಲೆ, ಸಾಂಸ್ಕತಿ ಸಂಘ, ಪರಿಸರ ತಂಡ ಸಂಯುಕ್ತವಾಗಿ ಆಯೋಜಿದ್ದ, ರಸ್ತೆ ಅಪಘಾತಗಳ ನಿಗ್ರಹಕ್ಕೆ ಜನರ ಸಹಿ ಸಂಗ್ರಹ ಹಾಗೂ ರಸ್ತೆ ಅಪಘಾತದಿಂದ ಮೃತಳಾದ ಕುಮಾರಿ ಅಮೃತಾಳಿಗೆ ಶ್ರದ್ಧಾಂಜಲಿ ಕಾರ್ಯಕ್ರದಲ್ಲಿ ಮಾತನಾಡುತ್ತಿದ್ದರು.
ಇತ್ತೀಚೆಗೆ ಜೆ.ಎಂ. ಐ.ಟಿ. ತಿರುವು ಬಳಿ ನೆಡೆದ ಅಮೃತಳ ಅಪಘಾತದ ಸಾವು ಆಘಾತವನ್ನು ಉಂಟುಮಾಡಿದೆ. ಅವಳ ಆತ್ಮಕ್ಕೆ ಚಿರಶಾಂತಿ ದೊರೆಯಬೇಕಾದರೆ ಕೆಳ ರಸ್ತೆಗಳನ್ನ ನಿರ್ಮಿಸುವಂತೆ ಮನವಿ ಮಾಡಬೇಕು. ಜನರ ಸಂಕಷ್ಟಗಳಿಗೆ ಸರಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು. ಜನರ ಪ್ರಾಣ ರಕ್ಷಣೆ ರಾಷ್ಟ್ರೀಯ ಹೆದ್ದಾರಿ ನಿಗಮ ಮುಂದಾಗಬೇಕು. ಇಂತಹ ಸಮಸ್ಯೆಗಳ್ನ ಇಲಾಖೆಗಳು ಶೀಘ್ರ ರೀತಿಯಲ್ಲಿ ಪರಿಹರಿಸಬೇಕು. ಜನರಿಂದ ಪದೇ, ಪದೇ ಹೇಳಿಸಿಕೊಳ್ಳಬಾರದು ಎಂದರು.
ಜಿ.ಪಂ. ಸದಸ್ಯರಾದ ಡಿ.ಕೆ. ಶಿವಮೂರ್ತಿ ಮಾತನಾಡಿ, ಈ ರಸ್ತೆ ಬಗ್ಗೆ ಜಿ.ಪಂ. ನಲ್ಲಿ ನೆಡೆದ ಕೆ.ಡಿ.ಪಿ. ಸಭೆಯಲ್ಲಿ ಸುರಕ್ಷತೆ ರಸ್ತೆ ನಿರ್ಮಾಣ ಹಾಗೂ ಸೂಚನಾ ಫಲಕವನ್ನೂ ಅಳವಡಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದರು.
ಬಿ.ಇ.ಒ. ಕೆ. ನಾಗಭೂಷಣ ಮಾತನಾಡಿ, ಶಾಲಾ ಮಕ್ಕಳಿಗೆ ರಸ್ತೆ ಸುರಕ್ಷತೆಯ ಸಂಚಾರಕ್ಕಾಗಿ ಜನ ಜಾಗೃತಿ ಮೂಡಿಸಲು ಶಿಕ್ಷಕರಿಂದ ರಸ್ತೆ ನಿಯಮಗಳನ್ನು ತಿಳಿಸಲಾಗುವಂತೆ ಸೂಚಿಸಲಾಗುವುದು. ಶಾಲಾ ಮಕ್ಕಳು ಜಾಗರೂಕತೆಯಿಂದ ರಸ್ತೆ ನಿಯಮಗಳನ್ನು ಅನುಸರಿಸುವಂತೆ ತಿಳಿಸಿದರು.
ಪ್ರೋ.ಕೆ. ಕಾಮಾನಿ, ಪ್ರಾದ್ಯಾಪಕರು ಮಾತನಾಡುತ್ತ, ಪ್ರತಿಯೊಬ್ಬ ಪ್ರಜೆಯು ಸಹ ತಮ್ಮ ತಪ್ಪುಗಳನ್ನ ಮಾರೆಮಾಚಿಕೊಂಡು ಜೀವನ ಮಾಡಬಾರದು. ಸಂಚಾರಿ ನಿಯಮಗಳಿಗಾಗಿ ಜನರು ಹಾತೋರೆಯಬೇಕು, ಅಷ್ಡರ ಮಟ್ಟಿಗೆ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದರು.
ಪರಿಸರವಾದಿ ಡಾ|| ಹೆಚ್.ಕೆ.ಎಸ್. ಸ್ವಾಮಿ ಮಾತನಾಡಿ ಜನರನ್ನ ಸರಿ ದಾರಿಯಲ್ಲಿ ಕೊಂಡೊಯ್ಯಲು ಹಲವಾರು ಜಾಗೃತಿ ಕಾರ್ಯಕ್ರಮಗಳ ಅವಶ್ಯಕತೆ ಇದೆ. ಇಲ್ಲದಿದ್ದರೆ ಜನರಲ್ಲಿ ಸಾರಿಗೆ ಶಿಸ್ತು ತರುವುದು ಕಷ್ಟ. ಪ್ರತಿಯೊಬ್ಬ ಪ್ರಜೆಯೂ ಸಹ ಸಂಚಾರಿ ನಿಯಮಗಳ ಪಾಲನೆ ಮಾಡುವಂತೆ ಮಾಡಲು ಪ್ರಯತ್ನಿಸಬೇಕು ಎಂದರು.
ಸಹಿ ಆಂದೋಲನದಲ್ಲಿ ಶ್ರೀ ಕೃಷ್ಣಮೂರ್ತಿ, ನಿವೃತ್ತ ಸಹಾಯಕ ಅಭಿಯಾಂತರರು, ಶ್ರೀ ಪಿ.ಕೆ. ಶಿವಮೂರ್ತಿ, ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಸದಸ್ಯರು, ಕೆ.ಎಂ. ಗಣೇಶಯ್ಯ, ಸಹ ನಿರ್ದೇಶಕರು, ಶ್ರೀ ಶಶಿಧರ್, ಲಿಟ್ಲಕಿಡ್ಸ್, ಎಸ್.ಆರ್.ಎಸ್. ಕಾಲೇಜಿನ ವಿದ್ಯಾರ್ಥಿಗಳು, ಸೆಂಟ್ ಜೋಸೆಫ್ ಶಾಲಾ ಮಕ್ಕಳು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು, ನಾಗರೀಕರು, ಗಣಿಗಾರಿಕೆ ಸಿಬ್ಬಂದಿ ವರ್ಗದವರು ಸಹಿ ಆಂದೋಲನದಲ್ಲಿ ಬಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
