ಋಣ ಮುಕ್ತ ಪತ್ರ ನೀಡಲು ಒತ್ತಾಯ

ಹಾವೇರಿ :

         ಜಿಲ್ಲೆಯ ಭೂರಹಿತಯರಿಗೆ ಬಗುರಹುಕ್ಕಂ ಸಾಗುವಳಿಗಾರರಿಗೆ ಹಕ್ಕು ಪತ್ರ ಹಾಗೂ ರೈತರಿಗೆ ಸಾಲ ಋಣ ಮುಕ್ತ ಪತ್ರ ನೀಡುವಂತೆ ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘ ಮತ್ತು ಕರ್ನಾಟಕ ಭೂ ಹಕ್ಕುದಾರರ ವೇದಿಕೆ ವತಿಯಿಂದ ದಿ,17 ರಂದು ಬೆಳಗಾವಿ ಸುವರ್ಣ ಸೌಧ ಚಲೋ ಮಾಡಲಾಗುವುದು ಎಂದು ಜಿಲ್ಲಾಧ್ಯಕ್ಷ ಪ್ರಕಾಶ ಯ ಬಾರ್ಕಿ ಹೇಳಿದರು.

           ನಗರದ ಪ್ರವಾಸಿ ಮಂದಿರದಲ್ಲಿ ಸುದ್ಧಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಜಿಲ್ಲೆಯ 6-10-2018ರ ಸರ್ಕಾರದ ಆದೇಶದ ಪ್ರಕಾರ 2005 ಒಳಗಾಗಿ ಸಾಗು ಮಾಡುತ್ತಿರುವ ರೈತರಿಗೆ 57/58 ಪಾರ್ಮನಲ್ಲಿ ಅರ್ಜಿಯನ್ನು ನೀಡಲು ಅವಕಾಶ ನೀಡಲಾಗುತ್ತು. ಜಿಲ್ಲೆಯಲ್ಲಿ 24 ಸಾವಿರಕ್ಕಿಂತ ಹೆಚ್ಚು ಅರ್ಜಿಗಳು ಬಂದಿದ್ದು, ಸುಮಾರು 2943 ರೈತರಿಗೆ ಸಾಗುವಳಿ ಪತ್ರ ನೀಡಲಾಗಿದೆ. ಸರ್ಕಾರ ಜಿಲ್ಲಾಧಿಕಾರಿಗಳಿಗೆ ಹಾಗೂ ತಹಶೀಲ್ದಾರಗಳಿಗೆ ಹಕ್ಕು ಪತ್ರ ನೀಡಲು ಆದೇಶಿಸಿದರೂ ಮಂದಗತಿಯ ಕಾರ್ಯವನ್ನು ರೈತ ಸಮುದಯ ಖಂಡುಸುತ್ತದೆ.

           ಸರ್ಕಾರ ಸಾಲಮನ್ನಾ ವಿಚಾರವಾಗಿ ಗೊಂದಲಮಯ ಅಂಶ ಕಂಡು ಬರುತ್ತಿದ್ದು, ಜಿಲ್ಲಾಧಿಕಾರಿಗಳ ಮೂಲಕ ಸಾಲಋಣಮುಕ್ತ ಪತ್ರ ನೀಡಲು ಮುಂದಾಗಬೇಕು.ಕಳೆದ ವರ್ಷಗಳ ಕೃಷಿ ಬೆಳೆ ವಿಮೆ ಪರಿಹಾರ ನೀಡಬೇಕು. ಜಿಲ್ಲೆಯಲ್ಲಿ ನೂರಾರು ಕೆರೆಗಳು ಅಭಿವೃದ್ಧಿ ಕಾಣದೇ ಅವುಗಳನ್ನು ವ್ಯಯಕ್ತಿಕವಾಗಿ ಆರ್‍ಟಿಸಿ ಸೃಷ್ಠಿ ಮಾಡಿಕೊಂಡಿರುವುದು ಕಂಡು ಬರುತ್ತಿದೆ ಇದಕ್ಕೆ ಅಧಿಕಾರಿಗಳ ಬೇಜವಾಬ್ದಾರಿತನ ಎಂದರು.

           ಸರ್ಕಾರ ರೈತಗೆ ಅನುಕೂಲವಾಗುವಂತೆ ಬೆಳೆ ವಿಮಾ ಪರಿಹಾರ ಕೇಂದ್ರಗಳನ್ನು ಜಿಲ್ಲೆಗೆ ಒಂದರಂತೆ ತೆರೆಯಬೇಕು. ನೀರಾವರಿ ಕಾಮಗಾರಿಗಳು ಸ್ಥಿಗಿತಗೊಂಡಿದ್ದು, ಬರದಿಂದ ಜನರು ಬಳಲುತ್ತಿದ್ದಾರೆ ಸೂಕ್ತ ಕ್ರಮಕ್ಕೆ ಒತ್ತಾಯಿಸಿದರು. ಸವಣೂರ ತಾಲೂಕಿನ ಮಾರುತಿಪೂರ. ಅಲ್ಲಿಪೂರ.ಪರವಾಡಿ.ಚಚಡಾಳ.ಚಿಲ್ಲೂರ ಬಡ್ನಿ.ಯಲವಿಗಿ ಗ್ರಾಮಗಳ ವ್ಯಪ್ತಿಯ 1084 ಎಕರೆಯ ಸರ್ಕಾರಿ ಭೂಮಿ ಸಾಗುವಳಿದಾರರನ್ನಾಗಿ ಒಕ್ಕಲೆಬ್ಬಿಸುತ್ತಿರುವ ದುಂಡಸಿ ವಲಯ ಅರಣ್ಯಾಧಿಕಾರಿಗಳ ಕ್ರಮವನ್ನು ವಿರೋಧಿಸಿ ಸರ್ಕಾರಕ್ಕೆ ಒತ್ತಾಯಿಸಿದರು.

          ಜಿಲ್ಲೆಯ ರೈತರ ನ್ಯಾಯಯುತ ಬೇಡಿಕೆಗಳ ಇಡೇರಿಕೆಗಳಿಗಾಗಿ ದಿ17 ರಂದು ಜಿಲ್ಲೆಯಿಂದ 1 ಸಾವಿರ ರೈತ ಬಾಂದವರು ಬೆಳಗಾವ ಚಲೋ ನಡೆಸುತ್ತೇವೆ ಸರ್ಕಾರ ಜಿಲ್ಲೆಯ ರೈತರ ನೆರವಿಗೆ ಕೊಡಲೇ ಧಾವಿಸಬೇಕು ಎಂದು ಪ್ರಕಾಶ ಬಾರ್ಕಿ ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರುಗಳಾದ ಬಿಎಂ ಕುಳೇನೂರ.ನಾಗಪ್ಪ ನೆರೇಗಲ್ಲ.ಪ್ರಭು ಮಾಳಾಪೂರ.ದಿಳ್ಲೇಪ್ಪ ಅಗಡೇರ.ತಿಮ್ಮಣ್ಣ ಸವಣೂರ.ದ್ಯಾಮನಗೌಡ ಪಾಟೀಲ.ಮಹಾದೇವಪ್ಪ ಸಾಲಿ.ಷರಿಫಸಾಬ. ರಾಜು ಮಠಪತಿ ಭೂ ಹಕ್ಕುದಾರರ ವೇದಿಕೆಯ ಕರಬಸಪ್ಪ ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link