ತುರುವೇಕೆರೆ:
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಮಂಗಳವಾರ ಸಂಜೆ ವಿದ್ಯುತ್ ತಗಲಿ ಸಾವನ್ನಪ್ಪಿದ್ದ ಶ್ರೀನಿವಾಸ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಕಟ್ಟಡ ಕಾರ್ಮಿಕರ ಸಂಘ, ವಿವಿದ ಕಾರ್ಮಿಕರು ಹಾಗೂ ದಲಿತಪರ ಸಂಘಟನೆಗಳು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಗೇಟ್ ಬಳಿ ಬುಧವಾರ ಪ್ರತಿಭಟನೆ ನೆಡೆಸಿದರು.
ತಿಪಟೂರಿನ ಗೊರಗೊಂಡನಹಳ್ಳಿ ನಿವಾಸಿ ಬಡ ದಲಿತ ಕುಟುಂಬವಾದ ಗೌರಮ್ಮ ವಂಕಟೇಶ್ ಹಿರಿಯ ಮಗನಾದ ಮೃತ ದುರ್ದೈವಿ ಶ್ರೀನಿವಾಸ್(20) ಕುಟುಂಬದ ಜವಬ್ದಾರಿ ಹೊತ್ತು ಕುಟುಂಬವನ್ನು ನಿರ್ವಹಿಸುತ್ತಿದ್ದಾನೆ. ಇತನ ತಂದೆ ಹೃದಯ ಸಂಬಂದಿ ಖಾಯಿಲೆ ಇದ್ದು ಒಬ್ಬ ತಮ್ಮ ಹಾಗೂ ಮೂವರು ತಂಗಿಯರ ಅವರ ಜವಬ್ದಾರಿಯನ್ನು ಹೊತ್ತಿದ್ದರು.
ಇವರ ದುಡುಮೆಯಿಂದಲೇ ಜೀವನ ನೆಡೆಯುತ್ತಿದ್ದರಿಂದ ಶ್ರೀನಿವಾಸ್ ಕುಟುಂಬಕ್ಕೆ ಬೆಸ್ಕಾಂ ಇಲಾಖೆ ಹಾಗೂ ಗುತ್ತಿಗೆದಾರರು ಕೂಡಲೇ ಸೂಕ್ತ ಪರಿಹಾರ ನೀಡಬೇಕೆಂದು ಪ್ರತಿಭಟನಕಾರರು ಒತ್ತಾಯಿಸಿ ಪರಿಹಾರ ನೀಡುವರೆಗೂ ಪ್ರತಿಭಟನೆ ಮಂದುವರೆಸಲಾಗುವುದು ಎಂದು ಎಚ್ಚರಿಸಿದರು.
ಸ್ಥಳಕ್ಕೆ ಆಗಮಿಸಿದ ಬೆಸ್ಕಾಂ ಇಲಾಖೆ ಹಾಗೂ ಗುತ್ತಿಗೆದಾರರ ಪರವಾಗಿ ಮುಖಂಡರುಗಳು ಪ್ರತಿಭಟನಕಾರರ ಜೊತೆ ಮಾತನಾಡಿ ಮನಹೊಲಿಸಿ ಬೆಸ್ಕಾಂ ಇಲಾಖೆಯಿಂದ 50 ಸಾವಿರ, ಗುತ್ತಿಗೆದಾರ 1 ಲಕ್ಷ ತಾತ್ಕಾಲಿಕ ಪರಿಹಾರ ನೀಡುವ ಬರವಸೆಯ ಮೇಲೆ ಪ್ರತಿಭಟನೆ ಅಂತ್ಯ ಗೊಳಿಸಲಾಯಿತು.
ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಚಿದಾನಂದ್, ಕುಮಾರ್, ಮಧು, ಭಾಬು, ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಬಸವರಾಜು, ಪದಾರಿಕಾರಿಗಳಾದ ಗುರುಮೂರ್ತಿ, ಅತ್ತಿಕುಳ್ಳೆಪಾಳ್ಯ ಈರಣ್ಣ, ಕೃಷ್ಣಪ್ಪ, ಪ್ರದೀಪ್ ಸೇರಿದಂತೆ ದಲಿತ ಮುಖಂಡರುಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








