ಉಳ್ಳವರಿಂದ ಪಡೆದು, ನನಗೆ ಮತಹಾಕಿ:ಡಾ.ಕೆ.ಎಂ ಸುರೇಶ್

ತಿಪಟೂರು :

      ಆಗ್ನೇಯಪದವೀದರಕ್ಷೇತ್ರವುಅತ್ಯಂತಅಸಹ್ಯ ಹುಟ್ಟಿಸುವಂತಕ್ಷೇತ್ರವಾಗಿದೆಇದನ್ನು ಸ್ವಚ್ಚಗೊಳಿಸಲು ನಾನು ಚುನಾವಣೆಗೆ ನಿಂತಿದ್ದೇನೆ ಹಾಗೂ ನಾನು ಯಾವುದೇಉದ್ಯಮಿ, ರಿಯಲ್‍ಎಸ್ಟೇಟ್‍ಏಜೆಂಟಲ್ಲ, ನಾನೊಬ್ಬ ಬಡಶಿಕ್ಷಕ ನನಗೆ ಪದವೀದರರ ಪರ ಮತ್ತು ನೇಮಕಾತಿಯಲ್ಲಿಆಗುತ್ತಿರುವ ಭ್ರಷ್ಟಾಚಾರದ ಬಗ್ಗೆ ಧನಿಎತ್ತಲು ನನಗೆ ಮತ ನೀಡಿಎಂದುಆಗ್ನೇಯಕ್ಷೇತ್ರದ ಪಕ್ಷೇತರಅಭ್ಯರ್ಥಿಡಾ.ಕೆ.ಎಂ ಸುರೇಶ್ ತಿಳಿಸಿದರು.

    ನಗರದ ಖಾಸಗಿ ಸಭಾಂಗಣದಲ್ಲಿಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದಅವರುನಾನು ಇದೇ ಉಪವಿಭಾಗಕ್ಕೆ ಸೇರಿದಗ್ರಾಮೀಣ ಪ್ರದೇಶದಸರಕಾರಿ ಶಾಲೆಗಳು ಓದಿದೆಇಂದುಇದೇ ಸರ್ಕಾರಿ ಶಾಲೆಗಳಲ್ಲಿ ಪ್ರತಿಭಾನ್ವಿತ ಶಿಕ್ಷಕರಿದ್ದಾರೆ ಆದರೆ ಆ ಶಿಕ್ಷಕರಿಗೆ ನಮ್ಮ ಸರ್ಕಾರಗಳು ಪಾಠಮಾಡಲು ಬಿಡದೆ ಪಾತ್ರೆಗಳನ್ನು ತೊಳೆದು ಲೆಕ್ಕ ಬರೆಯುತ್ತಿದ್ದಾರೆಇದುತಪ್ಪಿ ಶಿಕ್ಷಕರು ಪಾಠಮಾಡುವಂತಾದರೆ ಮಾತ್ರ ದೇಶವು ಉದ್ದಾರವಾಗುತ್ತದೆ.

     ಜನಗಣತಿ ಮುಂತಾದ ಸೆನ್ಸಸ್‍ಗಳನ್ನು ಮಾಡುವ ಕೆಲಸವನ್ನು ಶಿಕ್ಷಕರಿಗೆವಹಿಸಿದೆ ನಿರುದ್ಯೋಗಿ ಪದವೀದರರಿಗೆತರಬೇತಿಯನ್ನು ನೀಡಿಅವರಿಗೆಉದ್ಯೋಗವನ್ನುಕೊಟ್ಟು ಶಿಕ್ಷಕರನ್ನು ಪಾಠಮಾಡಲು ಬಿಡಿ ಎಂದರು ತಿಳಿಸಿದ ಅವರುಇಂತಹ ಶಾಲೆಗಳು ಉನ್ನತ ಮಟ್ಟಕ್ಕೆ ಏರಬೇಕು.ಸರ್ಕಾರಿ ಶಾಲೆಗಳು ಬಡವರಿಗೆ ನೀಡುವಜ್ಞಾನ ನೀಡುವ ಪುಣ್ಯ ಕ್ಷೇತ್ರಗಳು ಇದ್ದಂತೆಇಂತಹಸರಕಾರಿಶಾಲೆಗಳ ಅಭಿವೃದ್ಧಿ ನನ್ನ ಮೂಲ ಧ್ಯೇಯಎಂದು ತಿಳಿಸಿದ ಅವರುನಾನು ಇದೇತಾಲೂಕಿನಲ್ಲಿ ಶಿಕ್ಷಣ ಮುಗಿಸಿದ್ದೇನೆ, ನಾನು

     ಯಾವುದೇ ಉದ್ಯಮಿ ಅಥವಾ ರಾಜಕಾರಣಿ ಕುಟುಂಬದ ವ್ಯಕ್ತಿಯಲ್ಲ, ನಾನೋಬ್ಬ ಶಿಕ್ಷಕ, ಇದರಿಂದಲೆ ನಮ್ಮ ಪದವಿ ಪಡೆದಿರುವ ಮತ್ತು ಅತಿಥಿ ಶಿಕ್ಷಕರ ಸಮಸ್ಯೆಗಳನ್ನು ತಿಳಿದಿರುವಂತವನು, ಇದರಿಂದ ಬಡವ ನಿರುದ್ಯೋಗಿ ಯುವಕರಿಗೆ ಏನಾದರೂ ಸಹಾಯ ಮಾಡಬೇಕು ಇದನ್ನು ನಾವು ಹೊರಗೆ ಇದ್ದು ಮಾಡಲು ಸಾಧ್ಯವಿಲ್ಲ ಹಾಗಾಗಿ ವಿಧಾನ ಸಭೆಗೆ ಹೋಗಲು ಅವಕಾಶ ಮಾಡಿಕೊಡಿ ಎಂದರು.ಇತ್ತೀಚಿನ ದಿನಗಳಲ್ಲಿ ಯುವಕರ ಸಮಸ್ಯೆಗಳನ್ನು ಅರಿತು ಕೆಲಸ ಮಾಡುವ ವ್ಯಕ್ತಿಗಳು ಬರುತ್ತಿಲ್ಲ, ನಮ್ಮ ಯುವಕರಿಗೆ ಜಿಲ್ಲಾ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳನ್ನು ತೆರೆಯವುದು ಅಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸಲಾಗುವುದು, ಪದವಿ ದರ ವಿಧ್ಯಾರ್ಥಿಗಳಿಗೆ ಕೌಶಲ್ಯ ತರಬೇತಿಗಳನ್ನು ನೀಡಲಾಗುವುದು, ಇದುವರೆಗೆ ಪಕ್ಷೇತರ ಅಭ್ಯರ್ಥಿಗಳು ಗೆಲ್ಲವುದು ಕಷ್ಟವಿದೆ ಎನ್ನುವಂತಿತ್ತು ಆದರೆ ನನ್ನ ವಿದ್ಯಾರ್ಥಿ ಸಮೂಹ ರಾಜ್ಯಾದ್ಯಂತವಿದೆ ನನ್ನನ್ನು ಗೆಲ್ಲಿಸುತ್ತೇವೆ ಎಂದು ಹೊದಕಡೆ ವಿದ್ಯಾರ್ಥಿಗಳು ತಿಳಿಸಿದ್ದಾರೆ ಎಂದರು, ನಾನು ಯಾವುದೇಜಾತಿ, ಪಕ್ಷಕ್ಕೆ ಸೀಮಿತ ವಾದ ವ್ಯಕ್ತಿಯಲ್ಲಾ, ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಇರುವ ವ್ಯಕ್ತಿ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap