ಭಾರಿ ಮಳೆ : ಕೆರೆಯಾದ ಜಿಜೆಸಿ ಕ್ರೀಡಾಂಗಣ

ತುರುವೇಕೆರೆ:

    ಪಟ್ಟಣದ ಜಿಜೆಸಿ ಕ್ರೀಡಾಂಗಣದಲ್ಲಿ ಮಳೆ ನೀರು ತುಂಬಿ ಅವ್ಯವಸ್ಥೆಯ ತಾಣವಾಗಿದ್ದು ವಾಯು ವಿಹಾರಿಗಳಿಗೆ ಓಡಾಡಲು ತೊಂದರೆಯಾಗಿದೆ.ಪಟ್ಟಣದಲ್ಲಿ ಇರುವ ಏಕೈಕ ಕ್ರೀಡಾಂಗಣ ಇದಾಗಿದ್ದು ಪ್ರತಿದಿನ ಮುಂಜಾನೆ ಹಾಗೂ ಸಂಜೆ ನೂರಾರು ನಾಗರೀಕರು ವಾಯು ವಿಹಾರಕ್ಕೆ ಕ್ರೀಡಾಂಗಣಕ್ಕೆ ಆಗಮಿಸುತ್ತಾರೆ.

      ಆದರೆ ಇತ್ತೀಚೆಗೆ ಮೈದಾನದಲ್ಲಿ ಟ್ರಾಕ್ ಫಾರ್ಮೇಶನ್‍ನ ಕಾಮಗಾರಿ ಸಮರ್ಪಕವಾಗಿಲ್ಲದ್ದರಿಂದ ಕ್ರೀಡಾಂಗಣದಲ್ಲಿ ಮಳೆ ನೀರು ಆಚೆ ಹೋಗಲು ವ್ಯವಸ್ಥೆಯಿಲ್ಲದ ಕಾರಣ ಕ್ರೀಡಾಂಗಣ ನೀರಿನಿಂದ ಆವೃತವಾಗಿದೆ.

      2019 ರಲ್ಲಿ ಸ್ಪೋಟ್ಸ್ ಅಂಡ್ ಕಲ್ಚರಲ್ ಆಕ್ಟಿವಿಟೀಸ್ ವತಿಯಿಂದ ಕ್ರೀಡಾಂಗಣದಲ್ಲಿ 200 ಮೀಟರ್ ಟ್ರಾಕ್ ಫಾರ್ಮೇಶನ್ ನ ಕಾಮಗಾರಿಯನ್ನು ನಿರ್ಮಿತಿ ಕೇಂದ್ರದವರು ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿಯನ್ನು ಸಹಾ ಪೂರೈಸಲಾಗಿದೆ. ಆದರೆ ಈ ಕಾಮಗಾರಿ ಕಳಪೆಯಿಂದ ಕೂಡಿದ್ದು ಟ್ರ್ಯಾಕ್ ಸುತ್ತಲೂ ನಿರ್ಮಿಸಿರುವ ಚರಂಡಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಪ್ರಯೋಜನಕ್ಕೆ ಬಾರದಂತಾಗಿದೆ .

       ವ್ಯವಸ್ಥಿತ ರೀತಿಯಲ್ಲಿ ಮಾಡದ್ದರಿಂದ ಟ್ರ್ಯಾಕ್ನ ಒಳ ಹಾಗೂ ಹೊರ ಬಾಗದಲ್ಲಿ ಕೆರೆಯೋಪಾದಿಯಲ್ಲಿ ನಿಂತಿದೆ. ಇನ್ನು ಟ್ರ್ಯಾಕ್ ಸುತ್ತಲೂ ಅರ್ಧ ಅಡಿ ತಡೆಗೋಡಿ ಮಾಡಿರುವುದರಿಂದ ಟ್ರ್ಯಾಕ್ ಒಳಬಾಗದ ಮೈದಾನದ ನೀರು ಹೊರಹೋಗಲು ಆಸ್ಪದವಿಲ್ಲದೆ ಅಲ್ಲೇ ನಿಂತು ಸಣ್ಣ ಕಟ್ಟೆಗಳಾಗಿ ಮಾರ್ಪಾಟಾಗಿವೆ. ಪ್ರತಿದಿನ ಹಿರಿಯ ಹಾಗೂ ಕಿರಿಯ ಸೇರಿದಂತೆ ಎಲ್ಲಾ ವಯಸ್ಸಿನ ನೂರಾರು ನಾಗರೀಕರು ಪ್ರತಿ ದಿನ ಬೆಳಿಗ್ಗೆ ಇಲ್ಲಿಗೆ ವಾಯು ವಿಹಾರಕ್ಕೆ ಬರುತ್ತಿದ್ದು ಇದರ ಅವ್ಯವಸ್ಥೆ ಕಂಡು ಹಿಡಿ ಶಾಪ ಹಾಕುತ್ತಿದ್ದಾರೆ.

       ಅನೇಕ ಬಾರಿ ಸಂಬಂದಪಟ್ಟವರ ಗಮನಕ್ಕೆ ತಂದಿದ್ದರೂ ಸಹ ಇದುವರೆವಿಗೂ ಯಾವುದೇ ಪ್ರಯೋಜನವಾಗಿಲ್ಲ. ಸಂಬಂದ ಪಟ್ಟವರು ಕೂಡಲೇ ಇತ್ತ ಗಮನ ಹರಿಸಿ ಕ್ರೀಡಾಂಗಣದ ಸುತ್ತ ಫುಟ್ಪಾತ್ ನಿರ್ಮಿಸಿ ವಾಯುವಿಹಾರಿಗಳಿಗೆ ಅನುವು ಮಾಡಿಕೊಡಬೇಕೆಂದು ಮುಂಜಾನೆ ಗೆಳೆಯರ ಬಳಗ ವಿನಂತಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap