ದಾವಣಗೆರೆ:
ಬಳ್ಳಾರಿಯ ಬಿ ಐ ಟಿ ಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ತಾಂತ್ರಿಕ ಮೇಳ “ಆವಿಷ್ಕಾರ್-2ಕೆ19” ಕಾರ್ಯಕ್ರಮದಲ್ಲಿ ನಗರದ ಜಿ.ಎಂ.ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ವಿಭಾಗದ 8ನೇ ಸೆಮಿಸ್ಟರ್ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಬಹುಮಾನ ಪಡೆದಿದ್ದಾರೆ.
ವಿದ್ಯಾರ್ಥಿಗಳಾದ ಚೇತನ್ ಕೆ ಎಂ, ನಿಖಿಲ್ ಎಂ ಡಿ ಅವರುಗಳು ಮ್ಯಾಡ್ ಫಾರ್ ಕ್ಯಾಡ್ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದಿರುತ್ತಾರೆ. 6ನೇ ಸೆಮಿಸ್ಟರ್ನ ವಿದ್ಯಾರ್ಥಿಗಳಾದ ಸುರೇಶ, ಅಜಯ್ ಎ ಆರ್, ಕು. ಪ್ರಿಯಾಂಕಾ ಯು ಹಾಗೂ ಕು. ಚಂದನ ಎ, ಇವರು ಮಾಡೆಲ್ ಮೇಕಿಂಗ್ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದಿರುತ್ತಾರೆ.
ಪ್ರಬಂಧ ಮಂಡನೆಯಲ್ಲಿ 6ನೇ ಸೆಮಿಸ್ಟರ್ನ ವಿದ್ಯಾರ್ಥಿಗಳಾದ ತನ್ಮಯ ವಿ ಸಿ, ಕು. ಸಂಜನಾ ಕುಲ್ಕರ್ಣಿ ಮತ್ತು ಶರತ್ ಪಿ ವಿಷಯಕ್ಕೆ ತೃತೀಯ ಪ್ರಶಸ್ತಿಯನ್ನು ಪಡೆದು ನಮ್ಮ ಕಾಲೇಜಿಗೆ ಕೀರ್ತಿಯನ್ನು ತಂದಿರುತ್ತಾರೆ. ಇವರುಗಳು ಸಿವಿಲ್ ಇಂಜಿನಿಯರಿಂಗ್ ವಿಭಾಗದ ಕಿರಣ್ ಕುಮಾರ್ ಎಚ್ ಎಸ್ ಮತ್ತು ಮೊಹಮ್ಮದ್ ಯಾಸೀನ್, ಸಹಾಯಕ ಪ್ರಾಧ್ಯಾಪಕರುಗಳು ಇವರ ಮಾರ್ಗದರ್ಶನದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ.
ಇವರಿಗೆ ಕಾಲೇಜಿನ ಆಡಳಿತಾಧಿಕಾರಿ ವೈ.ಯು.ಸುಭಾಶ್ಚಂದ್ರ, ಪ್ರಾಂಶುಪಾಲ ಡಾ|| ಪಿ.ಪ್ರಕಾಶ್, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಎಚ್ ಎಸ್ ಗೋವರ್ಧನಸ್ವಾಮಿ, ಪ್ರಾಧ್ಯಾಪಕ ವರ್ಗದವರು ಹಾಗು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.