ಜ್ಞಾನದೀಪ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ

ಹಾವೇರಿ :
       
          ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ  ಗುಣಮಟ್ಟದ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿರುವ  ಜ್ಞಾನದೀಪ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯ ಶ್ಲಾಘನೀಯವಾಗಿದೆ ವಿರಕ್ತಮಠ ಲಿಂಗನಾಯಕನಹಳ್ಳಿ ಶ್ರೀ. ಮ.ನಿ.ಪ್ರ ಚನ್ನವೀರ ಮಹಾಸ್ವಾಮಿಗಳು ಹೇಳಿದರು. ತಾಲೂಕಿನ ಕಳ್ಳಿಹಾಳ ಗ್ರಾಮದ ಶ್ರೀ ಪಾರ್ವತಿ ಪರಮೇಶ್ವರ ವಿದ್ಯಾಸಂಸ್ಥೆಯ ಜ್ಞಾನದೀಪ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಅವರು ಮಾತನಾಡಿದರು.      
 
         ಇಂದು ಎಲ್ಲ ಕ್ಷೇತ್ರಕ್ಕಿಂತ ಶಿಕ್ಷಣ ರಂಗ ಬಹಳ ಸ್ಪರ್ಧಾತ್ಮಕವಾಗಿ ಬೆಳೆಯುತ್ತಿದೆ. ಎಲ್ಲ ವರ್ಗದ ಮಕ್ಕಳು ಆಂಗ್ಲ ಮಾಧ್ಯಮ ಶಿಕ್ಷಣವನ್ನು ಒದಗುಸುವ ಉದ್ದೇಶದಿಂದ ಹಳ್ಳಿಯಲ್ಲಿ ಸಂಸ್ಥೆ ತೆಗೆದು ಇಂತಹ  ಮಹತ್ವ ಪೂರ್ಣ ಕೆಲಸ ಮಾಡುತ್ತಿರುವ ಸಂಸ್ಥೆಯ ಪದಾಧಿಕಾರಿಗಳಿಗೆ ಹಾಗೂ ಶಿಕ್ಷಕ ವೃಂದದವರಿಗೆ ಅಭಿನಂದನೆ. ಇಲ್ಲಿ ಉತ್ತಮ ಗುಣಾತ್ಮಕ ಶಿಕ್ಷಣ ನೀಡುತ್ತಿದ್ದು, ಇಲ್ಲಿ ಕಲಿತ ಮಕ್ಕಳು ದೇಶದ ಉನ್ನತ ಸ್ಥಾನಕ್ಕೆ  ಏರಲಿ ಎಂದು ಆರ್ಶಿವಚನ ನೀಡಿದರು. ಪ್ರತಿಭಾಕಾರಂಜಿ, ಕ್ರೀಡಾಕೂಟ, ಶಾಲಾ ಸೆಮಿಸ್ಟರ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ  ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು
         
        ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಎಂ,ಎಂ ಹಿರೇಮಠ ಮಾತನಾಡಿ ಹಳ್ಳಿ ಮಕ್ಕಳ ಶಿಕ್ಷಣದ ಬೆಳವಣೆಗೆ ಹಾಗೂ ಎಲ್ಲ ವರ್ಗದವರಿಗೂ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೆ ಏರುವ ಗುರಿ ಹೊಂದಿದ್ದೇವೆ. ಎಲ್ಲರ ಸಹಕಾರದಿಂದ ಈ ಸಂಸ್ಥೆ ಬೆಳೆಯುತ್ತಿದ್ದು,ಈ ಎಲ್ಲ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಶಿಕ್ಷಕರ ಸೇವೆ ಅಪಾರ. ಮುಂದೆಯೂ ಮಕ್ಕಳ ವಿಕಾಸಕ್ಕೆ ಮುಂದಾಗೋಣ ಎಂದರು.
         ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟಮಟ್ಟಕ್ಕೆ ಆಯ್ಕೆಯಾದ ಶಾಲಾ ವಿದ್ಯಾರ್ಥಿ ಕಿರಣ್‍ಕುಮಾರ ಯತ್ನಳಿಯನ್ನು ಸನ್ಮಾನಿಸಲಾಯಿತು .ಎಸ್‍ಎಸ್‍ಎಲ್‍ಸಿ & ಪಿಯುಸಿ ಯಲ್ಲಿ ಪ್ರಥಮ ಸ್ಥಾನ ಪಡೆದ ಕಳ್ಳಿಹಾಳದ ವಿದ್ಯಾರ್ಥಿ ಗಳನ್ನು  ಜ್ಞಾನದೀಪ ಪುರಸ್ಕಾರ ಎನ್ನುವ ಶಿರ್ಷಿಕೆಯಡಿ 2000 ರೂ.ನಗದು ಬಹುಮಾನದೊಂದಿಗೆ ಸನ್ಮಾನಿಸಲಾಯಿತು, ಶೇ 80ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಕಳ್ಳಿಹಾಳ ಗ್ರಾಮದ ಎಲ್ಲಾ ವಿಧ್ಯಾರ್ಥಿಗಳನ್ನು ಸನ್ಮಾನ ಮಾಡಲಾಯಿತು.
           ಈ ಸಂದರ್ಭದಲ್ಲಿ  ಮಾಜಿ ಸಚಿವರಾದ  ರುದ್ರಪ್ಪ ಲಮಾಣೆ  ಸಂಸ್ಥೆಯ  ಕಾರ್ಯದರ್ಶಿ  ಸಿ ಎಚ್ ಹಿರೇಮಠ, ಸದಸ್ಯರಾದ ಎಸ್ ಎಸ್ ಭೂಸನೂರಮಠ, ಆನಂದಗೌಡ ಪಾಟೀಲ, ಶ್ರೀಮತಿ ಪುಷ್ಟಾ ಹಾವೇರಿಮಠ, ತಾಲೂಕ ಪಂಚಾಯತ ಅದ್ಯಕ್ಷರಾದ ಕರಿಯಪ್ಪ ಉಂಡಿ, ಉಪಾಧ್ಯಕ್ಷರಾದ  ಸಾವಿತ್ರವ್ವ ಮರಡೂರ, ವಿ ಸಿ ಹಾವೇರಿಮಠ, ಬಿ ಎಸ್ ಹಳೆಮನಿ, ಎಚ್ ಬಿ ಐಹೊಳೆ, ಚಂದ್ರಣ್ಣ ದೊಡ್ಡಮನಿ, ಗುರುಬಸಯ್ಯ ಚಪ್ಪರದಳ್ಳಿಮಠ, ಜಗದೀಶ ಬೊಮ್ಮಣ್ಣನವರ, ಮಲ್ಲಿಕಾರ್ಜುನ ಡಂಬಳ, ಬಸವರಾಜ ಮತ್ತೂರ ಇನ್ನಿತರರು  ವಹಿಸಿಕೊಂಡಿದ್ದರು. ನಂತರ ಮಕ್ಕಳಿಂದ ವಿಭಿನ್ನ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link