ಮತ್ತೊಂದು ವಿಷ ಪ್ರಸಾದ ದುರಂತಕ್ಕೆ ಮಹಿಳೆ ಬಲಿ !!!

ಚಿಂತಾಮಣಿ:
   
        ಚಿಕ್ಕಬಳ್ಲಾಪುರ ಜಿಲ್ಲೆ ಚಿಂತಾಮಣಿಯಲ್ಲಿ ಸಹ ಅಂತಹದೇ ಘಟನೆ ನಡೆದಿದೆ. ಚಿಂತಾಮಣಿಯ ನರಸಿಂಹ ಪೇಟೆ ಗಂಗಮ್ಮನ ಗುಡಿ ಪ್ರಸಾದ ಸೇವಿಸಿದ ಕವಿತಾ ಎಂಬ ಮಹಿಳೆ ಮೃತಪಟ್ಟು ಇನ್ನೂ 6 ಮಂದಿ ಭಕ್ತರು ಅಸ್ವಸ್ಥರಾಗಿದ್ದಾರೆ ಎಂದು ತಿಳಿದು ಬಂದಿದೆ .ನಿನ್ನೆ ವಿಶೇಷ ಪೂಜೆ ಇದ್ದ ಕಾರಣ ಹಲವಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದರು ಈ ವೇಳೆ ದೇವಸ್ಥಾನದಲ್ಲಿ ನೀಡಲಾದ ಸ್ವೀಟ್ ಪೊಂಗಲ್ ಸೇವಿಸಿ ಕವಿತಾ ಸೇರಿ ಹಲವರು ಅಸ್ವಸ್ಥರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಹಲವು ಮಂದಿಗೆ ವಾಂತಿಯಾಗಿದ್ದು ತಕ್ಷಣ ಎಲ್ಲರನ್ನೂ ಚಿಂತಾಮಣಿಯಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಲಾಗಿದೆ.

Recent Articles

spot_img

Related Stories

Share via
Copy link