ಬೆಂಗಳೂರು:
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದ ‘ಸಂತ್ರಸ್ತ’ ಯುವತಿ ನ್ಯಾಯಾಧೀಶರ ಮುಂದೆ ಹಾಜರಾಗಲು ಕೋರ್ಟ್ ಅನುಮತಿ ನೀಡಿದೆ.
ಈ ಸಿಡಿ ಪ್ರಕರಣದಲ್ಲಿ ಯುವತಿಯ ಹೇಳಿಕೆ ತುಂಬಾನೇ ಮುಖ್ಯವಾಗಿದ್ದು, ಯುವತಿ ವಿಚಾರಣೆಗೆ ಕೋರ್ಟ್ಗೆ ಹಾಜರಾಗುವಂತೆ ಕೋರ್ಟ್ ಅನುಮತಿ ಕೊಟ್ಟ ಆದೇಶ ಪ್ರತಿ ಪಡೆಯಲು ಯುವತಿ ಪರ ವಕೀಲ ಜಗದೀಶ್ ತೆರಳಿದ್ದಾರೆ. ಆದೇಶ ಪ್ರತಿ ಪಡೆದ ಬಳಿಕ ಯುವತಿ ವಿಚಾರಣೆಗೆ ಹಾಜರಾಗುವ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ.
ಯುವತಿ ವಿಚಾರಣೆಗೆ ಹಾಜರಾಗಲು ಭದ್ರತೆಯ ಕುರಿತು ಅಪಸ್ವರವೆತ್ತಿದ್ದ ಹಿನ್ನೆಲೆ ಆಕೆಯ ಭದ್ರತೆಗೆ ಎಸ್‌ಐಟಿಯಿಂದ ಓರ್ವ ಮಹಿಳಾ ಸಬ್ಇನ್ಸ್ಪೆಕ್ಟರ್ ಸೇರಿದಂತೆ 8 ಜನರ ತಂಡ ರಚನೆ ಮಾಡಲಿದೆ. ಯುವತಿ ಹೇಳಿದಲ್ಲಿ ತೆರಳಿ ಭದ್ರತೆ ನೀಡಲು, ಆಕೆಯ ಹೇಳಿಕೆ ದಾಖಲಿಸಲು ವಿಶೇಷ ತಂಡ ಸಿದ್ಧವಾಗಿದೆ. ಒಂದು ವೇಳೆ ಆಕೆಯೇ ನೇರವಾಗಿ ಹಾಜರಾದರೂ ಈ ತಂಡ ಭದ್ರತೆ ನೀಡಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
