ವಿಜಯದಶಮಿ: ನಗರದಲ್ಲಿ ದೇವರುಗಳ ವೈಭವಪೂರ್ಣ ಶೋಭಾಯಾತ್ರೆ

ತುಮಕೂರು:

       ತುಮಕೂರು ದಸರಾ ಸಮಿತಿಯಿಂದ ನಡೆದ ವಿಜಯದಶಮಿ ಮೆರವಣಿಗೆಗೆ ಶುಕ್ರವಾರ ಮದ್ಯಾಹ್ನ 1 ಗಂಟೆ ಸಮಯಕ್ಕೆ ಚಿತ್ರದುರ್ಗ ಛಲವಾದಿ ಸಂಸ್ಥಾನ ಪೀಠದ ಶ್ರೀಬಸವ ನಾಗಿದೇವ ಸ್ವಾಮಿಗಳು ಚಾಲನೆ ನೀಡಿದರು.

        ಬಿಜಿಎಸ್ ವೃತ್ತದಿಂದ ಆರಂಭವಾದ ದೇವರುಗಳ ವೈಭವಪೂರ್ಣ ಶೋಭಾಯಾತ್ರೆ ಹಾಗೂ ಸಾಂಸ್ಕತಿಕ ಕಲಾ ತಂಡಗಳ ಮೆರವಣಿಗೆ ಉದ್ಘಾಟನೆಯಲ್ಲಿ ಶ್ರೀಗಳೊಂದಿಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್, ಎಸ್.ಪಿ. ಡಾ.ದಿವ್ಯಾಗೋಪಿನಾಥ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಆರ್.ಚಂದ್ರಿಕಾ, ದಸರಾ ಕಾರ್ಯನಿರ್ವಾಹಕ ಮಂಡಳಿ ಗೌರವಾಧ್ಯಕ್ಷ ಸಿ.ವಿ.ಮಹದೇವಯ್ಯ, ಕಾರ್ಯಾಧ್ಯಕ್ಷ ಬಿ.ಎಸ್.ಮಂಜುನಾಥ್, ಅಧ್ಯಕ್ಷ ಕೋರಿಮಂಜುನಾಥ್, ಪ್ರಾಂತ ಕಾರ್ಯಾಧ್ಯಕ್ಷ ಆರ್.ಎಲ್.ರಮೇಶ್ ಬಾಬು, ಪ್ರಧಾನ ಕಾರ್ಯದರ್ಶಿ ಬಿ.ಎಸ್.ಮಹೇಶ್, ಖಜಾಂಚಿ ಎಲ್.ವಿಜಯಕುಮಾರ್ ಮುಂತಾದವರು ಪಾಲ್ಗೊಂಡಿದ್ದರು.

       ಮೆರವಣಿಗೆಯು ಟಾನ್ ಹಾಲ್ ವೃತ್ತದಿಂದ ಪ್ರಾರಂಭಗೊಂಡು ಬಿ.ಎಚ್.ರಸ್ತೆ, ಮಹಾತ್ಮಗಾಂಧಿ ರಸ್ತೆ, ಗುಂಚಿಚೌಕ, ಹೊರಪೇಟೆ ವೃತ್ತ, ಜನರಲ್ ಕಾರ್ಯಪ್ಪ ರಸ್ತೆ ಮೂಲಕ ಸಂಜೆ ಜೂನಿಯರ್ ಕಾಲೇಜು ಮೈದಾನ ಸೇರಿತು.

       ಉದ್ಘಾಟನೆ: ತುಮಕೂರು ದಸರಾ ಸಮಿತಿಯಿಂದ. ಅ.18 ಮತ್ತು 19ರ ಎರಡು ದಿನಗಳ ಕಾಲ ಆಯೋಜನೆಗೊಂಡಿದ್ದ ಸಾಂಸ್ಕತಿಕ ನಾಡಹಬ್ಬವು ಅ.18ರಂದು ಮದ್ಯಾಹ್ನ 1 ಗಂಟೆಗೆ ಜಾನಪದ ಗೀತೆಗಳ ಸ್ಪರ್ಧೆಯ ಮೂಲಕ ಉದ್ಘಾಟನೆಗೊಂಡಿತು. ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಾಡಹಬ್ಬದ ಉದ್ಘಾಟನೆಯನ್ನು ಚಿತ್ರನಟ ಟಿ.ಎಸ್.ಹನುಮಂತೇಗೌಡ ಉದ್ಘಾಟಿಸಿದರು. ಸಿ.ವಿ.ಮಹದೇವಯ್ಯ ಅಧ್ಯಕ್ಷತೆ ವಹಿಸಿದ್ದರು. ಮಧ್ಯಾಹ್ನ 3 ಗಂಟೆಯಿಂದ ಮಕ್ಕಳಿಂದ ವಿವಿಧ ಸಾಂಸ್ಕತಿಕ ಕಾರ್ಯಕ್ರಮ ಜರುಗಿದವು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap