ಗೋಹತ್ಯೆ ತಡೆಗೆ ಎಸ್ ಪಿ ಅವರಿಗೆ ಮನವಿ..!!

ಹಾವೇರಿ :

      ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ದಾಖಲಾಗಿರುವ ಸುಳ್ಳು ಪ್ರಕರಣವನ್ನು ರದ್ದುಗೊಳಿಸಿ ಜಿಲ್ಲೆಯಲ್ಲಿ ನಡೆಯುತ್ತಿರುವ ಗೋ ಹತ್ಯೆ ತಡೆಯಬೇಕು ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಶಾಸಕ ಸಿಎಂ ಉದಾಸಿ ನೇತೃತ್ವದ ನಿಯೋಗ ಎಸ್‍ಪಿ ಭೇಟಿ ಮಾಡಿ ಮನವಿ ಸಲ್ಲಿಸಿದರು.

         ನಗರದಲ್ಲಿ ಅನಧಿಕೃತ ಕಸಾಯಿಖಾನೆ ಹಾಗೂ ಅಕ್ರಮ ಗೋ ಹತ್ಯೆ ಕುರಿತು ಹಲವುದಿನಗಳಿಂದ ನಗರಸಭೆಯ ಪೌರಾಯುಕ್ತರಿಗೆ ಹಾಗೂ ಪೋಲಿಸ ಇಲಾಖೆಗೆ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಮನವಿ ಸಲ್ಲಿಸುತ್ತಾ ಬಂದಿದ್ದರು. ಅಕ್ರಮವಾಗಿ ದನ, ಕರುಗಳ ಸಾಗಣಿಕೆ ವಾಹನವನ್ನು ತಡೆದು ವಿಚಾರಿಸುವ ಸಂದರ್ಭದಲ್ಲಿ ಮಾರಕಾಸ್ತ್ರಗಳಿಂದ ಹಿಂದೂಪರ ಸಂಘಟನೆಯ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪ್ರಕರಣ ದಾಖಲಾಗುತ್ತಿದ್ದಂತೆ ತಲೆ ಮರಿಸಿಕೊಂಡಿದ್ದಾರೆ.ಕೊಡಲೇ ಬಂಧಿಸಬೇಕು.

      ಹಿಂದೂಪರ ಸಂಘಟನೆಯ ಕಾರ್ಯಕರ್ತರ ಮೇಲೆ ಸುಳ್ಳು ಮರುಪ್ರಕರಣವನ್ನು ದಾಖಲಿಸಿದ್ದು. ಸಂಘಟನೆಯ ಕಾರ್ಯಕರ್ತರ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ಒಂದು ವೇಳೆ ಪೋಲಿಸ್ ಇಲಾಖೆ ನಮ್ಮ ಕಾರ್ಯಕರ್ತರನ್ನು ಬಂದಿಸಿದರೆ ಜೈಲ್ ಬರೋ ಚಳುವಳಿ ಮಾಡಲಾಗುವುದು ಹಾಗೂ ಹಲ್ಲೆ ಮಾಡಿದ ಎಲ್ಲ ಆರೋಪಿಗಳನ್ನು ಬಂದಿಸದಿದ್ದಲ್ಲಿ ಜಿಲ್ಲೆಯಾದ್ಯಾಂತ ಹೋರಾಟ ಕೈಗೊಂಡ ಜಿಲ್ಲಾ ಬಂದಿಗೆ ಕರೆ ಕೊಟ್ಟು ಪೋಲಿಸ್ ಠಾಣೆಯ ಮುಂದೆ ಧರಣಿ ನಡೆಸಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ನಂತರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು.

         ಈ ಸಂದರ್ಭದಲ್ಲಿ ಶಿವರಾಜ ಸಜ್ಜನರ, ಸಿದ್ದರಾಜ ಕಲಕೋಟಿ, ಎಸ್.ಆರ್. ಹಗಡೆ.ಡಾ. ಸಂತೋಷ ಆಲದಕಟ್ಟಿ, ಪ್ರಶಾಂತ ಗಾಣಗೇರ, ಶ್ರೀಕಾಂತ ಅಯ್ಯಾಂಗಾರ, ಗಿರೀಶ ಶೆಟ್ಟಿ, ಪ್ರಭು ಹಿಟ್ನಳ್ಳಿ, ಮಂಜುನಾಥ ಮಾಳದಕರ,ವಿವೇಕಾನಂದ ಇಂಗಳಗಿ,ಪ್ರಕಾಶ ಉಜನಿಕೊಪ್ಪ, ದೀಪಕ್ ಮಡಿವಾಳರ ಅನೇಕರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link