ಚೇಳೂರು
ಶಾಲೆಗಳಿಗೆ ಮಕ್ಕಳು ಹೋಗುವಾಗ ಇದು ಜ್ಞಾನ ದೇಗುಲವಿದ್ದು ಕೈ ಮುಗಿದು ಒಳೆಗೆ ಬಂದು ಅಲ್ಲಿ ತಮ್ಮ ಜ್ಞಾನದ ಬುತ್ತಿಯನ್ನು ಹೆಚ್ಚಿಸಿಕೊಂಡು ಒಳ್ಳೆಯ ಸುಸಂಸ್ಕತನಾಗಿ ಹೊರ ಬರಬೇಕಾಗಿದೆ. ಅದರೆ ಈಗ ಶಾಲೆಗೆ ಮಕ್ಕಳು ಹೋಗಿ ಅಂಕವನ್ನು ಪಡೆದು ಆ ಶಾಲೆಗೆ ಕೈ ಮುಗಿದು ಹೊರೆಗೆ ಬಾ ಏನ್ನುವ ಮಟ್ಟಕ್ಕೆ ನಮ್ಮ ಶಿಕ್ಷಣ ಬೆಳೆದಿದೆ ಇದು ಒಳ್ಳೆಯ ಬೆಳವಣಿಗೆಯಾಗಿ ಕಾಣುತ್ತಿಲ್ಲ ಇದು ಬದಲಾಗ ಬೇಕಾಗಿದೆ ಎಂದು ಸಿದ್ದರಬೆಟ್ಟದ ಶ್ರೀವೀರಭದ್ರಶಿವಾಚಾರ್ಯಸ್ವಾಮಿಗಳು ಹೇಳಿದರು.
ಇವರು ಚೇಳೂರು ಹೋಬಳಿ ಸಿ.ನಂದಿಹಳ್ಳಿ ಗೇಟ್‍ನ್ನ ಗೋಮ್ಜ್ ಆಂಗ್ಲ ಮಾಧ್ಯಮದ ಕಿರಿಯ.ಹಿರಿಯ ಮತ್ತು ಪ್ರೌಡಶಾಲೆಗಳ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತ ಈಗ ಮಕ್ಕಳು ಉದ್ಯೋಗಕ್ಕೆ.ತಮ್ಮ ಮುಂದಿನ ಜೀವನಕ್ಕೆ ಅಂಕವನ್ನು ಪಡೆಯಲು ಶಾಲೆಗೆ ಹೋಗುವ ಮಟ್ಟಕ್ಕೆ ತಲುಪುತ್ತಿದೆ. ಅಂಕಗಳ ಜೊತೆಗೆ ಒಳ್ಳೆಯ ಗುಣ,ಜ್ಞಾನ. ನಾಡಿಗೆ ಉತ್ತಮ ಪ್ರಜೆಯಾಗಿ ಕಲಿತು ಶಾಲೆಯಿಂದ ಬರಬೇಕಾಗಿದೆ.
ಮಕ್ಕಳು ಈ ಸಮಾಜದಲ್ಲಿ ಒಳ್ಳೆಯ ಕೆಲಸವನ್ನು ಮಾಡಿ ಸಾಧನೆ ಮಾಡಿದರೆ ಆ ಮಗುವೂ ಯಾವ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದು. ಆ ಮಗುವಿಗೆ ಒಳ್ಳೆಯ ವಿದ್ಯೆಯನ್ನು ಹೇಳಿಕೊಟ್ಟಿದ್ದರೆ ಅವರ ಗುರುಗಳು ಎಂದು ಸಮಾಜ ಹೆಮ್ಮೆಯಿಂದ ಕೈ ತೋರಿಸುತ್ತದೆ.ಆದರೆ ಈ ಸಮಾಜಕ್ಕೆ ಕೆಟ್ಟ ಕೆಲಸವನ್ನು ಮಾಡುವಂತಹ ಮಕ್ಕಳ ಬಗ್ಗೆ ಯಾವ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದು. ವಿದ್ಯೆಯನ್ನು ಕಲಿಸಿದ ಗುರುಗಳು ಯಾರೂ. ಹೆತ್ತ ತಂದೆ-ತಾಯಿ ಯಾರು ಹೇಳುವ ಮಟ್ಟಕ್ಕೆ ಮಕ್ಕಳು ಬೆಳೆಯಬಾರದು. ಆ ಮಕ್ಕಳು ಶಾಲೆಯಲ್ಲಿ ಉತ್ತಮವಾದ ಅಂಕವನ್ನು ಪಡೆದರು ಸಹ ಸಾರ್ಥಕವಾಗುವುದಿಲ್ಲ ಈ ಸಮಾಜಕ್ಕೆ.
ಶಾಲೆಯಲ್ಲಿ ವ್ಯಾಸಂಗದ ಜೊತೆಗೆ ಹಲವಾರು ನೀತಿ ಕಥೆಗಳನ್ನು ಶಿಕ್ಷಕ-ಶಿಕ್ಷಕಿಯರು ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುವಂತಹ ರೀತಿಯಲ್ಲಿ ಮಕ್ಕಳಿಗೆ ಹೇಳುವುದರಿಂದ ಮಕ್ಕಳಲ್ಲಿ ಒಳ್ಳೆಯ ಗುಣ.ಜ್ಞಾನ ತುಂಬಿಕೊಳ್ಳುತ್ತದೆ. ಜೊತೆಯಲ್ಲಿ ಪೋಷಕರು ಸಹ ಒಳ್ಳೆಯ ನೆಡೆತೆಯ ಗುಣ.ಜ್ಞಾನದ ಬಗ್ಗೆ ಮನೆಯಲ್ಲಿ ಮಕ್ಕಳಿಗೆ ತಿಳಿಸುವುದರೊಂದಿಗೆ ಅವರ ಚಲನ ವಲನಗಳ ಬಗ್ಗೆಯೊ ಸಹ ಗಮನ ಹಾರಿಸ ಬೇಕಾಗಿದೆ.
ಶಾಲೆಯಲ್ಲಿ ತಮ್ಮ ಮಕ್ಕಳು ಹೆಚ್ಚಿಗೆ ಅಂಕವನ್ನು ಪಡೆದ ಮಾತ್ರಕ್ಕೆ ಅದು ಸಾಧನೆ ಅಲ್ಲ ಅದಕ್ಕೆ ತಕ್ಕಂತೆ ಒಳ್ಳೆಯ ಗುಣದ ಜ್ಞಾನ ಇರ ಬೇಕಾಗಿದೆ ಅದಕ್ಕೆ ಶಿಕ್ಷಕ-ಶಿಕ್ಷಕಿಯರ ಜೊತೆಗೆ ಪೋಷಕರ ಶ್ರಮವೂ ಸಹ ಮುಖ್ಯವಾಗಿದೆ ಎಂದರು.
ವಕೀಲ ಎಂ.ಸಿ.ಚಂದ್ರಯ್ಯ,ಹೇಮಕಲ್ಪ ತೆಂಗು ಉತ್ಪಾದಕ ಕಂಪನಿಯ ಛೇರ್ಮನ್ ಎನ್.ಮೃತ್ಯುಂಜಯಪ್ಪ.ತಾಲೂಕು ದೈಹಿಕ ಪರಿವಿಕ್ಷಕ ಎನ್.ರಾಜಣ್ಣ ಸಂಸ್ಥೆಯ ಪರಮೇಶ್ವರ್,ಇವರುಗಳು ಯಾರಿಂದಲ್ಲೂ ಕದಿಯಲಾಗದ ವಿದ್ಯೆಯನ್ನು ಮಕ್ಕಳು ಶ್ರದ್ದಾ ಭಕ್ತಿಯಿಂದ ಕಲಿತರೆ ಅದು ಮುಂದೆ ತಮ್ಮ ಉತ್ತಮವಾದ ಜೀವನವನ್ನು ರೂಪಿಸುತ್ತದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕಿ ಪುಷ್ಪಲತಾ ಶಾಲಾ ವರದಿಯನ್ನು ಹೇಳಿದರು.ಉತ್ತಮ ಸಾಧನೆ ಮಾಡಿದ ಮಕ್ಕಳಿಗೆ, ಶಿಕ್ಷಕ-ಶಿಕ್ಷಕಿಯರಿಗೆ, ಚಾಲಕರಿಗೆ ಸಂಸ್ಥೆಯ ಅಧ್ಯಕ್ಷೆ ಎಂ.ಜಿ.ಪ್ರೀತಿಯವರ ಪರವಾಗಿ ಅತಿಥಿಗಳಿಂದ ಸನ್ಮಾನಿಸಲಾಯಿತು. ನಂತರ ಶಾಲಾ ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನೆಡೆಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ