ಕುಣಿಗಲ್
ಜಮೀನಿಗೆ ಸಂಬಂಧಿಸಿದಂತೆ ದಾಯಾದಿಗಳ ಕಲಹದಿಂದ ಕಿಡಿಗೇಡಿಗಳು ಅಡಿಕೆ ಹಾಗೂ ತೆಂಗಿನ ಸಸಿಗಳನ್ನು ಕಡಿದು ನಾಶ ಮಾಡಿರುವ ಘಟನೆ ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಾಲ್ಲೂಕಿನ ಕಸಬಾ ಹೋಬಳಿ ಹೇರೂರು ಗ್ರಾಮದ ರೃತ ನಾಗರಾಜು ಎಂಬುವರಿಗೆ ಸೇರಿದ್ದ 2 ಎಕರೆ ಜಮೀನಿನಲ್ಲಿ ಬೆಳೆದಿದ್ಧ 700 ಅಡಿಕೆ 200 ತೆಂಗಿನ ಸಸಿ ಹಾಗು ಬಾಳೆಗಿಡಗಳನ್ನು ನೆನ್ನೆ ತಡ ರಾತ್ರಿಯಲ್ಲಿ ದುಷ್ಕರ್ಮಿಗಳು ನಾಶ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.
ಈ ಸಂಬಂಧ ನಾಗರಾಜುವಿನ ಚಿಕ್ಕಪ್ಪನ ಮಗ ಸಂಜೀವ ಎಂಬಾತನು ಈ ಕೃತ್ಯ ನಡೆಸಿದ್ದಾನೆ ಎಂದು ತಿಳಿದು ಈ ಜಮೀನಿನ ಪಕ್ಕದಲ್ಲಿ ಪಿತ್ರಾರ್ಜಿತ ಆಸ್ತಿಯ 20 ಕುಂಟೆ ಜಮೀನಿನ ಬಗ್ಗೆ ಆಗಾಗ ಜಗಳವಾಡುತ್ತಿದ್ದ ಅದಕ್ಕಾಗಿ 2 ಲಕ್ಷ ನೀಡುತ್ತೇನೆ ಸಹಿ ಹಾಕಿ ಎಂದು ಒತ್ತಾಯಿಸುತ್ತಿದ್ದ ನಾವು ಇದಕ್ಕೆ ತಡಮಾಡಿದ ಹಿನ್ನೆಲೆಯಲ್ಲಿ ಇಂತಹ ದುಷ್ಕೃತ್ಯ ನಡೆಸಿದ್ದಾನೆ ಎಂದು ನಾಗರಾಜು ಕುಟುಂಬದವರು ಆರೋಪಿಸಿದ್ದಾರೆ.
ಈ ಬಗ್ಗೆ ದೂರು ಕುಣಿಗಲ್ ಠಾಣೆಯಲ್ಲಿ ದಾಖಲಾಗಿದ್ದು ಈ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆ ಕೈ ಗೊಂಡಿದ್ದಾರೆ. ಇಂತಹ ಕಿಡಿಗೇಡಿತನದ ಕೃತ್ಯವನ್ನು ಹಲವು ರೈತಾಪಿಜನ ಖಂಡಿಸಿದ್ದು ರೈತ ಸಾಲ ಮಾಡಿ ಬೆಳೆದು ಫಲ ಕೊಡುವ ಸಸಿಗಳನ್ನು ಕಡಿದು ಹಾಕಿರುವ ಕಿರಾತಕರನ್ನು ಕೂಡಲೆ ಬಂಧಿಸಿ ಅವರಿಗೆ ತಕ್ಕ ಶೀಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
