ಬೆಂಗಳೂರು:
ವಿಧಾನ ಪರಿಷತ್ನಲ್ಲಿ ‘ಕರ್ನಾಟಕ ಕೈಗಾರಿಕೆ ವಿವಾದಗಳು ಹಾಗೂ ಇತರ ಕಾನೂನುಗಳ ತಿದ್ದುಪಡಿ ವಿಧೇಯಕ-2020’ಕ್ಕೆ ಸೋಲುಂಟಾಗಿ ಸರಕಾರಕ್ಕೆ ಮುಖಭಂಗ ಉಂಟಾಯಿತು. ಮೇಲ್ಮನೆಯಲ್ಲಿ ಆಡಳಿತ ಪಕ್ಷಕ್ಕೆ ಬಹುಮತ ಇಲ್ಲ. ಇದನ್ನು ನಗದಾಗಿಸಿಕೊಳ್ಳಲು ಪ್ರತಿಪಕ್ಷಗಳು ಕಾರ್ಮಿಕರಿಗೆ ಸಂಬಂಧಿಸಿದ ಕಾನೂನುಗಳನ್ನು ಬದಲಿಸದಂತೆ ಆಗ್ರಹಿಸಿದವು.
ಬೇರೆ ವಿಧೇಯಕಗಳನ್ನು ಪಾಸ್ ಮಾಡಿಕೊಟ್ಟ ರೀತಿ ಈ ವಿಧೇಯಕದ ಅನುಮೋದನೆಗೆ ಸಹಕರಿಸುವಂತೆ ಆಡಳಿತ ಪಕ್ಷದ ಸದಸ್ಯರು ಕೋರಿದರು. ಆದರೆ ಪಟ್ಟು ಬಿಡದ ಪ್ರತಿಪಕ್ಷಗಳು ಕೆಲ ತಿದ್ದುಪಡಿಗಳನ್ನು ಮುಂದಿಟ್ಟವು.
