ನಾಟಕಗಳ ಬೆಳವಣಿಗೆಗೆ ಸರ್ಕಾರದ ಅಸಹಕಾರ .!

ದಾವಣಗೆರೆ:

     ನಾಟಕಗಳ ಬೆಳವಣಿಗೆಗೆ ಸರ್ಕಾರದ ಯಾವುದೇ ಯೋಜನೆಗಳು ಸಹಕಾರಿಯಾಗಿಲ್ಲ ಎಂದು ನಗರಸಭಾ ಮಾಜಿ ಸದಸ್ಯ ಎಸ್.ಮಲ್ಲಿಕಾರ್ಜುನ ವಿಷಾದ ವ್ಯಕ್ತಪಡಿಸಿದರು.

     ನಗರದ ಪಿ.ಬಿ.ರಸ್ತೆಯಲ್ಲಿರುವ ಗುಬ್ಬಿ ಬಿ.ಎಸ್.ಆರ್. ಡ್ರಾಮಾ ಕಂಪನಿಯಲ್ಲಿ ಶನಿವಾರ ಶ್ರೀದುರ್ಗಾಂಭಿಕ ನಾಟಕ ಸಂಘ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ಏರ್ಪಡಿಸಿದ್ದ ಎನ್.ಎಸ್.ರಾವ್ ವಿರಚಿತ ‘ವಿಷಜ್ವಾಲೆ’ ಐತಿಹಾಸಿಕ ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಯೋಜನೆಗಳು ಸೇರಿದಂತೆ ಸರ್ಕಾರದ ಯಾವುದೇ ಯೋಜನೆಗಳು ಸಹ ನಾಟಕ ಅಥವಾ ರಂಗಭೂಮಿಯ ಬೆಳವಣಿಗೆಗೆ ಸಹಕಾರಿಯಾಗಿಲ್ಲ. ಹೀಗಾಗಿ ನಾಟಕ ಪ್ರದರ್ಶನ ಆಯೋಜಿಸುವುದೇ ಇಂದು ಕಷ್ಟಕರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

     ದೃಶ್ಯ ಮಾಧ್ಯಮಗಳ ಹಾವಳಿಯಿಂದಾಗಿ ಇಂದು ನಾಟಕಗಳು ಸಂಕಷ್ಟದಲ್ಲಿವೆ. ಹೀಗಾಗಿ ಸಾರ್ವಜನಿಕರು, ಕಲಾಸಕ್ತರು ನಾಟಕಗಳನ್ನು ವೀಕ್ಷಿಸುವ ಮೂಲಕ ನಾಟಕ ಕ್ಷೇತ್ರ ಹಾಗೂ ಅದನ್ನೆ ನೆಚ್ಚಿಕೊಂಡಿರುವ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಸಲಹೆ ನೀಡಿದರು.

     ಮಹಾನಗರ ಪಾಲಿಕೆಯಲ್ಲಿ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ವಿಜೃಂಭಣೆಯಿಂದ ರಾಜ್ಯೋತ್ಸವ ಆಚರಿಸಲಾಗುತ್ತದೆ. ಆದರೆ, ಅಲ್ಲಿ ಕೆಲಸಕ್ಕೆ ಬಾರದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಬದಲು, ನಾಟಕ ಪ್ರದರ್ಶನಗಳನ್ನು ಏರ್ಪಡಿಸುವ ಮೂಲಕ ವಿನಾಶದ ಅಂಚಿಗೆ ತಲುಪಿರುವ ರಂಗ ಕಲೆಯನ್ನು ಉಳಿಸಿ ಬೆಳೆಸುವತ್ತ ಪಾಲಿಕೆ ಗಮನ ಹರಿಸಬೇಕೆಂದು ಆಗ್ರಹಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಕೆ.ಜಿ.ಶಿವಕುಮಾರ್ ಮಾತನಾಡಿ, ನಗರದಲ್ಲಿ ಈಗಾಗಲೇ ಸಾವಿರಾರು ಪ್ರದರ್ಶನ ಕಂಡಿರುವ ವಿಷಜ್ವಾಲೆ ಐತಿಹಾಸಿಕ ನಾಟಕದ ಪ್ರದರ್ಶನ ಈಗ ಮತ್ತೊಮ್ಮೆ ಆಯೋಜಿಸಿರುವುದು ನಿಜಕ್ಕೂ ಸಂತೋಷದ ಸಂಗತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

      ಡಾ.ರಾಜಕುಮಾರ್, ವಿಷ್ಣುವರ್ಧನ, ಅಂಬರೀಶ್, ಶಂಕರ್‍ನಾಗ್ ಸೇರಿದಂತೆ ಹಲವು ಸಿನಿಮಾ ಕಲಾವಿದರು ಮೂಲತಹ ರಂಗಭೂಮಿಯಿಂದಲೇ ಬಂದವರಾಗಿದ್ದಾರೆ. ಪ್ರೇಕ್ಷರ ಮನಸ್ಸುಗಳನ್ನು ಒಂದೆಡೆ ಕ್ರೊಢೀಕರಿಸಿ, ಒಂದು ಉತ್ತಮ ಸಂದೇಶ ನೀಡುವ ಶಕ್ತಿ ರಂಗಭೂಮಿಗೆ ಇದೆ ಎಂದರು.

      ಒಂದು ಕಾಲದಲ್ಲಿ ದಾವಣಗೆರೆಯಲ್ಲಿ ಏಕಕಾಲದಲ್ಲಿಯೇ ಐದೈದು ನಾಟಕ ಕಂಪನಿಗಳು ಯಶಸ್ವಿ ಪ್ರದರ್ಶನ ನೀಡುತ್ತಿದ್ದವು. ಆದರೆ, ಕಾಲ ಕ್ರಮೇಣ ಅದು ಮರೆಯಾಗಿತ್ತು. ಈಗ ಮತ್ತೆ ಜನರಲ್ಲಿ ನಾಟಕ ನೋಡುವ ಅಭಿರುಚಿ ಬಂದಿರುವ ಕಾರಣ ರಂಗಭೂಮಿಯ ಗತವೈಭವ ಮರುಕಳಿಸುತ್ತಿದ್ದು, ಕಲಾ ಪೋಷಕರು, ಕಲಾಸಕ್ತರು ನಾಟಕಗಳನ್ನು ನೋಡುವ ಮೂಲಕ ರಂಗಭೂಮಿಯ ಬೆಳವಣಿಗೆಗೆ ಸಹಕರಿಸಬೇಕೆಂದು ಮನವಿ ಮಾಡಿದರು.

      ಕಾರ್ಯಕ್ರಮದಲ್ಲಿ ವಿನೋಬನಗರ ಶ್ರೀಚೌಡೇಶ್ವರಿ ದೇವಸ್ಥಾನದ ಅಧ್ಯಕ್ಷ ಎಸ್.ನೀಲಕಂಠಪ್ಪ, ರಾಜ್ಯ ವೃತ್ತಿ ರಂಗಭೂಮಿ ಕಲಾವಿದರ ಸಂಘದ ಗೌರವಾಧ್ಯಕ್ಷ ತಿಪ್ಪೇಸ್ವಾಮಿ ಚೌಹ್ಹಾಣ್, ವಿಶ್ವಜ್ಯೋತಿ ಪಂಚಾಕ್ಷರಿ ನಾಟ್ಯ ಸಂಘದ ಮಹಾದೇವಪ್ಪ, ಕನ್ನಡ ಚಳವಳಿಯ ಟಿ.ಶಿವಕುಮಾರ್, ಜಿ.ಕೆ.ಕೊಟ್ರಬಸಪ್ಪ ಮತ್ತಿತರರು ಉಪಸ್ಥಿತರಿದ್ದರು. ಉಮಾದೇವಿ ಪ್ರಾರ್ಥಿಸಿದರು. ಡಿ.ಮಹೇಶ್ವರಪ್ಪ ಸ್ವಾಗತಿಸಿ, ವಂದಿಸಿದರು. ನಾಟಕ ವೀಕ್ಷಣೆಗೆ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಆಗಮಿಸಿದ್ದರು.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link