ಸೋಂಕಿತರ ಬೆನ್ನಲ್ಲೇ ಸಾವಿನ ಸಂಖ್ಯೆಯೂ ತುಸು ಹೆಚ್ಚಾಗಿದೆ. ಈ ಮಧ್ಯೆ RT-PCR ಬದಲಿಗೆ ಕೊರೊನಾ ಪರೀಕ್ಷೆಗೆ ಮತ್ತೊಂದು ಹೊಸ ವಿಧಾನವನ್ನ ಸಂಶೋಧಿಸಲಾಗಿದೆ.
ಮರುಕಳಿಸುತ್ತಾ ಹಳೆಯ ಕರಾಳ ಅಧ್ಯಾಯ?
ನಾಗಾಲೋಟ.. ದೇಶಾದ್ಯಂತ ಕೊರೊನಾ ನಾಗಾಲೋಟ ಪಡೆದುಕೊಳ್ತಿದೆ. ಮೂರನೇ ಅಲೆ ಮಿಂಚಿನ ವೇಗ ಪಡೆದುಕೊಳ್ತಿದೆ. ಟೆಸ್ಟಿಂಗ್ ಸಂಖ್ಯೆ ಹೆಚ್ಚಿಸುತ್ತಿದ್ದಂತೆ ದೇಶಾದ್ಯಂತ ಕೊರೊನಾ ಸ್ಫೋಟವಾಗಿದೆ.
ಇಷ್ಟು ದಿನ 2 ಲಕ್ಷದತ್ತ ಗಿರಕಿ ಹೊಡೀತ್ತಿದ್ದ ಕೇಸ್ಗಳು ಇವತ್ತು ಬರೊಬ್ಬರಿ ಮೂರು ಲಕ್ಷ ಗಡಿ ದಾಟಿದೆ. ಆತಂಕದ ವಿಷಯ ಅಂದ್ರೆ ಕೊರೊನಾದಿಂದ ಸಾವನಪ್ಪಿದವರ ಸಂಖ್ಯೆಯೂ ತುಸು ಹಿಗ್ಗಿದೆ.
ಮೂರು ಲಕ್ಷ ಗಡಿ ದಾಟಿ ಮುನ್ನುಗಿದ ಹೆಮ್ಮಾರಿ
ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಬರೊಬ್ಬರಿ 3,17,532 ಕೊರೊನಾ ಕೇಸ್ಗಳು ಪತ್ತೆಯಾಗಿದ್ರೆ, ಇದೇ ಅವಧಿಯಲ್ಲಿ ಬರೊಬ್ಬರಿ 491 ಮಂದಿ ಉಸಿರು ಚೆಲ್ಲಿದ್ದಾರೆ. ಸದ್ಯ ಕೊರೊನಾ ಪಾಸಿಟಿವಿಟಿ ದರ ಶೇಕಡಾ 16.41ರಷ್ಟು ದಾಖಲಾಗಿದೆ. ಈ ಮಧ್ಯೆ ಒಮಿಕ್ರಾನ್ ಸೋಂಕಿತರ ಸಂಖ್ಯೆ 9,287ಕ್ಕೆ ಏರಿಕೆಯಾಗಿದೆ.
ಕಳೆದ ಐದು ದಿನಗಳ ಕೊರೊನಾ ಅಬ್ಬರವನ್ನ ನೋಡೋದಾದ್ರೆ..
ಜನವರಿ 15ರಂದು 2,71,202 ಕೇಸ್ಗಳು ಪತ್ತೆಯಾಗಿದ್ರೆ, ಜನವರಿ 16ರಂದು 2,58,089 ಕೇಸ್ಗಳು ದಾಖಲಾಗಿತ್ತು. ಬಳಿಕ ಜನವರಿ 17ರಂದು 2,38,018 ಕೇಸ್ ದಾಖಲಾಗುವ ಮೂಲಕ ಕೊರೊನಾ ತಗ್ಗುವ ಮುನ್ಸೂಚನೆ ಕೊಟ್ಟಿತ್ತು.
ಆದ್ರೆ ಜನವರಿ 18ರಂದು 2,82,970 ಕೇಸ್ಗಳು ಪತ್ತೆಯಾಗುವ ಮೂಲಕ ಹೆಮ್ಮಾರಿ ಅಬ್ಬರಿಸಿತ್ತು. ಇನ್ನು ಕಳೆದ 24 ಗಂಟೆಯಲ್ಲಿ ಬರೊಬ್ಬರಿ 3,17,532 ಕೇಸ್ ಪತ್ತೆಯಾಗುವ ಮೂಲಕ ಮತ್ತೆ ಕೊರೊನಾ ಅಬ್ಬರಿಸಿದೆ.
ಕೇವಲ ಭಾರತವಲ್ಲದೆ ಇಡೀ ಜಗತ್ತಿನಾದ್ಯಂತ ಕೊರೊನಾ ಅಬ್ಬರಿಸ್ತಿದೆ. ಹಲವು ದೇಶಗಳಲ್ಲಿ ಹೆಮ್ಮಾರಿ ನಾಗಾಲೋಟ ಪಡೆದುಕೊಳ್ತಿದೆ. ಹೀಗೆ ಕೊರೊನಾ ಮಿಂಚಿನ ವೇಗ ಪಡೆದುಕೊಳ್ತಿದ್ದಂತೆ, ಕೊರೊನಾ ಪರೀಕ್ಷೆಯ ವಿಧಾನವೂ ಬದಲಾಗ್ತಿದೆ. RT-PCR ಬದಲಿಗೆ ಎಕ್ಸ್-ರೇ ಬಳಸಿಯೇ ಕೊರೊನಾ ಟೆಸ್ಟ್ ಮಾಡುವ ವಿಧಾನವನ್ನೂ ಸಂಶೋಧಿಸಲಾಗಿದೆ.
RT-PCR ಬದಲಿಗೆ ಎಕ್ಸ್-ರೇ ಬಳಸಿ ಕೊರೊನಾ ಪರೀಕ್ಷೆ
RT-PCR ಬದಲಿಗೆ ಎಕ್ಸ್-ರೇ ಬಳಸಿ ಕೊರೊನಾ ಪರೀಕ್ಷೆ ಮಾಡುವ ವಿಧಾನ ಸಂಶೋಧಿಸಲಾಗಿದ್ದು, ಕಡಿಮೆ ಸಮಯದಲ್ಲಿ ಶೇ.98ರಷ್ಟು ನಿಖರ ಫಲಿತಾಂಶ ಸಿಗಲಿದೆ. ಕೇವಲ 2 ಗಂಟೆಗಳ ಅವಧಿಯಲ್ಲಿ ಸೋಂಕು ಇದಿಯೋ ಇಲ್ವೋ ಎಂಬುದು ಗೊತ್ತಾಗಲಿದೆ.
3 ಸಾವಿರ ಜನರಿಗೆ ಎಕ್ಸ್-ರೇ ಸ್ಕ್ಯಾನ್ ಮಾಡಿ ಸ್ಕಾಟ್ಲ್ಯಾಂಡ್ನಲ್ಲಿ ವಿಜ್ಞಾನಿಗಳು ಈ ವಿಧಾನವನ್ನ ಸಂಶೋಧಿಸಿದ್ದಾರೆ. ಕೊರೊನಾ ಹಾಗೂ ನ್ಯೂಮೋನಿಯಾ ಸೋಂಕಿತರಿಗೆ ಎಕ್ಸ್ರೇ ಸ್ಕ್ಯಾನ್ ಮಾಡಿ ಈ ನೂತನ ವಿಧಾನವನ್ನ ಕಂಡು ಹಿಡಿದಿದ್ದಾರೆ.
ಹೊಸ ಹೊಸ ತಳಿಗಳು ಪತ್ತೆಯಾಗ್ತಿದ್ದಂತೆ ಚಿಕಿತ್ಸಾ ವಿಧಾನವೂ ಬದಲಾಗ್ತಿದೆ. ಇದೀಗ ಹೊಸ ಕೊರೊನಾ ಪರೀಕ್ಷೆಯ ವಿಧಾನವನ್ನೂ ಕಂಡು ಹಿಡಿಯಲಾಗಿದೆ. ಆರ್ಟಿಪಿಸಿಆರ್ ಬದಲಿಗೆ ಎಕ್ಸ್ರೇ ಮೂಲಕವೇ ಕೊರೊನಾ ಟೆಸ್ಟ್ ಮಾಡಬಹುದಾಗಿದೆ. ಆದ್ರೆ ಇದು ಎಷ್ಟರ ಮಟ್ಟಿಗೆ ಸುರಕ್ಷಿತ ಅನ್ನೋದೆ ಸದ್ಯದ ಪ್ರಶ್ನೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ