ಶಿಗ್ಗಾವಿ :
ಸತತ ಬರಗಾಲದಿಂದ ತತ್ತರಿಸಿದ ರೈತ ಸಮುದಾಯ ಬಹಳ ಚಿಂತಾಕ್ರಾಂತವಾಗಿದ್ದು, ರೈತ ತನ್ನ ಚೈತನ್ಯವನ್ನೇ ಕಳೆದುಕೊಂಡಿದ್ದಾನೆ. ಮುಂಗಾರು ಪ್ರವೇಶ ಮಾಡದಿರುವುದರಿಂದ ರೈತ ವರ್ಗಕ್ಕೆ ಬರ ಸಿಡಲು ಬಡಿದಂತಾಗಿದೆ ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಸಂಕಷ್ಠಗಳಿಗೆ ಸ್ಪಂಧಿಸುವಂತೆ ಮಾಜಿ ಜಿ.ಪಂ ಸದಸ್ಯ ಶಶಿಧರ ಹೊನ್ನಣ್ಣವರ ರೈತರ ಪರವಾಗಿ ಆಗ್ರಹಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ರೈತಾಪಿ ವರ್ಗ ಈಗಾಗಲೇ ಜಮೀನುಗಳನ್ನು ಹಸನು ಮಾಡಿ ಮಳೆಗಾಗಿ ಕಾಯುವಂತಾಗಿದೆ. ಈಗಾಗಲೇ ಕೆಲ ರೈತರು ಬಿತ್ತನೆ ಸಹ ಮಾಡಿದ್ದು, ರೈತ ಸಂಕಷ್ಠದಲ್ಲಿದ್ದಾನೆ ಇಂತಹ ಸಂದರ್ಭದಲ್ಲಿ ಮಳೆ ಅವಶ್ಯವಾಗಿದ್ದು ಮಳೆ ಬಾರದಿರುವುದರಿಂದ ರೈತ ಕಂಗಾಲಾಗಿದ್ದಾನೆ ಜೊತೆಗೆ ಬಡ ರೈತರು, ಕೂಲಿ ಕಾರ್ಮಿಕರು, ದೊಡ್ಡ ರೈತರ ಹೊಲವನ್ನು ಇಂತಿಷ್ಠು ದುಡ್ಡನ್ನು ನೀಡಿ (ಲಾವಣಿ) ಜಮೀನು ಮಾಡುವ ರೈತ ಕಾರ್ಮಿಕನ ಗೋಳು ಹೇಳತೀರದಾಗಿದೆ.
ಈಗಾಗಲೇ ಬೀಜ, ಗೊಬ್ಬರ ತಂದಿಟ್ಟುಕೊಂಡ ರೈತ ಮಳೆಯಾಗದೇ ಹೋದರೆ ಏನು ಗತಿಯೆಂಬ ಸ್ಥಿತಿಯಲ್ಲಿ ನಿಂತಿದ್ದಾನೆ. ಇಂತಹ ಕೆಟ್ಟ ಪರಿಸ್ಥಿತಿಯನ್ನು ನೋಡಿದರೂ ಸರಕಾರಗಳು ಇಲ್ಲಿಯವರೆಗೂ ರೈತ ಸಮುದಾಯಕ್ಕೆ ನೆರವಿಗೆ ದಾವಿಸುತ್ತಿಲ್ಲ ಕೂಡಲೇ ಸರಕಾರಗಳು ಮೋಡ ಬಿತ್ತನೆಗೆ ಕ್ರಮ, ರೈತಾಪಿ ವರ್ಗಕ್ಕೆ ದೈರ್ಯ ತುಂಬವ ಕೆಲಸಕ್ಕೆ ಸರ್ಕಾರ ಮುಂದಾಗುವುದು, ರೈತ ಆತ್ಮಹತ್ಯ ಮಾಡಿಕೊಳ್ಳದ ಹಾಗೆ ತಾಲೂಕಾ ಮತ್ತು ಜಿಲ್ಲಾ ಆಡಳಿತ ಕ್ರಮ ಕೈಗೊಳ್ಳವುದು,
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಾರತಮ್ಯ ನೀತಿ ಅನುಸರಿಸದೇ ರೈತಾಪಿ ವರ್ಗದವರಿಗೆ ನೆರವಾಗುವುದು, ಗೂಳೆ ಹೋಗುವುದನ್ನು ತಡೆಗಟ್ಟಬೇಕು ಜೊತೆಗೆ ತೋಟಗಾರಿಕಾ ಬೆಳೆಗಳು ಸಂಪೂರ್ಣ ಹಾನಿಯಾಗಿದ್ದು, ಬೋರವೆಲ್ಗಳು ಸಹ ಬತ್ತಿ ಹೋಗಿದ್ದು, ತೋಟಗಾರಿಕಾ ಇಲಾಖೆಗೆ ವಿಶೇಷ ಪ್ಯಾಕೇಜ ಘೋಷಣೆ ಮಾಡಬೇಕು, ದುಡಿಯುವ ಕೈಗಳಿಗೆ ನಿರ್ಭಂದವಿಲ್ಲದೇ ಕೆಲಸ ನೀಡಬೇಕು,
ರೈತರ ಜಾನುವಾರುಗಳಿಗೆ ನೀರು ಮತ್ತು ಮೇವಿನ ಸಂಗ್ರಹ ಮಾಡಬೇಕು, ಇವೆಲ್ಲ ಸಮಸ್ಯೆಗಳಿಗೆ ಸರ್ಕಾರ ಸಮಗ್ರ ಕ್ರಿಯಾಯೋಜನೆಯನ್ನು ಮಾಡಿ ಯಾವುದೇ ಕರಾರುಗಳನ್ನು ಹಾಕದೇ ಕೇಂದ್ರ ಮತ್ತು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಇವೆಲ್ಲ ಯೋಜನೆಗಳು ರೈತಾಪಿ ವರ್ಗದವರಿಗೆ ಮುಟ್ಟುವಹಾಗೆ ಮಾಡಬೇಕಾಗಿದೆ ಎಂದರು.ಸುದ್ದಿಗೋಷ್ಟಿಯಲ್ಲಿ ಎಪಿಎಮ್ಸಿ ನಿರ್ದೇಶಕ ರುದ್ರಗೌಡ್ರ ಪಾಟೀಲ, ರೈತರಾದ ಮಹಾದೇವಪ್ಪ ಮಾಸನಕಟ್ಟಿ, ಮೌನೇಶ ವಾಲ್ಮೀಕಿ, ಬಸವರಾಜ ಕುರಗೋಡಿ ಇದ್ದರು.