ಬೆಂಗಳೂರು
ವಿಚಾರವಾದಿಗಳ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಫೋಟಕ ಮಾಹಿತಿಯೊಂದು ಇದೀಗ ಹೊರಬಿದ್ದಿದೆ. ದೇಶದ ನಾಲ್ಕು ಹೈ ಪ್ರೊಫೈಲ್ ಕೊಲೆ ಕೇಸ್‍ಗಳಿಗೆ ಬೈಕ್ ನೀಡಿರುವುದು ಒಬ್ಬನೇ ಎನ್ನುವ ಅಂಶ ಎಸ್‍ಐಟಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಕಲಬುರ್ಗಿ ಹತ್ಯೆ ಸಂಬಂಧ ವಾಸುದೇವ್ ಎಂಬ ಆರೋಪಿಯನ್ನ ಎಸ್‍ಐಟಿ ಬಂಧಿಸಿದ್ದಾರೆ. ಆರೋಪಿ ವಾಸುದೇವ್ ತನಿಖಾಧಿಕಾರಿಗಳ ಎದುರು ಪನ್ಸಾರೆ, ದಾಬೋಲ್ಕರ್, ಕಲಬುರ್ಗಿ ಹಾಗೂ ಗೌರಿ ಹತ್ಯೆ ಪ್ರಕರಣಗಳಿಗೆ ಬೈಕ್ ಸಪ್ಲೈ ಮಾಡಿರುವ ವಿಚಾರವನ್ನ ಬಾಯ್ಬಿಟ್ಟಿದ್ದಾನೆ.
ಗೌರಿ ಹಾಗೂ ಕಲಬುರ್ಗಿ ಹತ್ಯೆಯ ಪ್ರಮುಖ ಆರೋಪಿ ಅಮೂಲ್ ಕಾಳೆ ಸೂಚನೆಯಂತೆ ತಾನು ಗೆ ಬೈಕ್ ನೀಡಿದ್ದೇನು ಎಂದು ಎಸ್ಐಟಿ ಅಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಉನ್ನತ ಮೂಲಗಳು ತಿಳಿಸಿವೆ
ವಾಸುದೇವ್ ಭಗವಾನ್ ಸೂರ್ಯವಂಶಿ ಮಹಾರಾಷ್ಟ್ರ ಮೂಲದವನಾಗಿದ್ದು ಮಹಾರಾಷ್ಟ್ರದಲ್ಲೇ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸ್ತಿದ್ದ. ಸದ್ಯ ಕಲಬುರ್ಗಿ ಕೊಲೆ ಪ್ರಕರಣದ ವಿಚಾರವಾಗಿ ಎಸ್‍ಐಟಿ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ.