ಗ್ರಾಪಂ ಪಿಡಿಓ ಮತ್ತು ಕಂದಾಯ ಅಧಿಕಾರಿಗಳ ಸಭೆ

ಕೊರಟಗೆರೆ:-

         ಬರ ನಿರ್ವಹಣೆಯದೃಷ್ಟಿಯಿಂದಕಂದಾಯಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಕೊರಟಗೆರೆಕೇಂದ್ರ ಸ್ಥಾನದಲ್ಲಿಯೇಇದ್ದು, ಕುಡಿಯುವ ನೀರು ಹಾಗೂ ಮೇವಿನ ನಿರ್ವಹಣೆಯ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದುಮಧುಗಿರಿಉಪವಿಭಾಗಾಧಿಕಾರಿಚಂದ್ರಶೇಖರಯ್ಯ ಅಧಿಕಾರಿಗಳಿಗೆಖಡಕ್‍ಎಚ್ಚರಿಕೆ ನೀಡಿದರು.

        ಅವರು ಪಟ್ಟಣದ ತಾಪಂ ಸಭಾಂಗಣದಲ್ಲಿ ಮಧುಗಿರಿ ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವಿನ ಮುಂಜಾಗ್ರತೆಯ ಬಗ್ಗೆ ಗ್ರಾಪಂ ಪಿಡಿಓ ಮತ್ತು ಕಂದಾಯ ಅಧಿಕಾರಿಗಳ ಸಭೆಯಲ್ಲಿ ಅಧಿಕಾರಿಗಳಿಗೆ ನಿರ್ವಹಣೆಯಲ್ಲಿ ನಿರ್ಲಕ್ಷ ವಹಿಸಿದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

       ಕೊರಟಗೆರೆ ಕ್ಷೇತ್ರ ಬರಪೀಡಿತವೆಂದು ರಾಜ್ಯ ಸರಕಾರ ಈಗಾಗಲೇ ಘೋಷಣೆಯಾಗಿದೆ . ಗ್ರಾ ಪಂ ಪಿಡಿಓ ಮತ್ತುಗ್ರಾಮ ಲೆಕ್ಕಾಧಿಕಾರಿ ಪ್ರತಿ ದಿನ ಆಯಾ ವ್ಯಾಪ್ತಿಯ ಗ್ರಾಮೀಣ ಪ್ರದೇಶಕ್ಕೆ ಬೇಟಿ ನೀಡಿ ಹದಿನೈದು ದಿನಕ್ಕೊಮ್ಮೆ ತಹಶೀಲ್ದಾರ್ ನೇತೃತ್ವದ ಬರಪೀಡಿತ ಸಮಿತಿಗೆ ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆಯ ಬಗ್ಗೆ ಸಮರ್ಪಕ ಮಾಹಿತಿ ಒದಗಿಸಿ ಬರಗಾಲವನ್ನು ಎದುರಿಸಲು ಸಜ್ಜಾಗ ಬೇಕುಎಂದು ತಿಳಿಸಿದರು.

        ಡಿಸಿಎಂ ಕ್ಷೇತ್ರದಲ್ಲಿ ಕೆಲಸ ಮಾಡುವ ಅಧಿಕಾರಿ ವರ್ಗಎಚ್ಚರಿಕೆಯಿಂದ ಬರಗಾಲವನ್ನುಎದುರಿಸಬೇಕು. ಕುಡಿಯುವ ನೀರಿನ ಬಳಕೆ ಮತ್ತು ಜಾನುವಾರುಗಳಿಗೆ ಮೇವಿನ ಪೂರೈಕೆಯ ವಿಚಾರದಲ್ಲಿ ನಿರ್ಲಕ್ಷ ವಹಿಸುವ ಅಧಿಕಾರಿಗಳ ವಿರುದ್ದ ನಿರ್ಧಾಕ್ಷಿಣ್ಯ ಕ್ರಮಕ್ಕೆ ಸೂಚನೆ ನೀಡುತ್ತೇನೆ. ಕೊರಟಗೆರೆ ಕ್ಷೇತ್ರದಲ್ಲಿ ಪ್ರತಿ ಹದಿನೈದು ದಿನಕ್ಕೂಮ್ಮೆ ಬರಗಾಲದ ಸಭೆಯಲ್ಲಿ ಅಧಿಕಾರಿ ವರ್ಗ ನೀಡುವ ಮಾಹಿತಿ ಮೇಲೆಯೇ ಬರಗಾಲದ ಪರಿಹಾರ ನೀಡಲು ಸಾಧ್ಯ ಎಂದು ಹೇಳಿದರು.

        ಕೊರಟಗೆರೆ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಲಕ್ಷ್ಮಣ್‍ ಕುಮಾರ್ ಗೆ ಕೊರಟಗೆರೆ ಪಟ್ಟಣ ವ್ಯಾಪ್ತಿಗೆ ಬರುವ 15 ವಾರ್ಡುಗಳಲ್ಲಿ ಕುಡಿಯುವ ಪೂರೈಕೆ ವಿಚಾರದಲ್ಲಿ ಯಾವುದೇ ಕೊರತೆ ಬಾರದಂತೆ ನಿಗಾ ವಹಿಸುವಂತೆ ತಿಳಿಸಿದ್ದಲ್ಲದೇ ಕೊರಟಗೆರೆ ಪಟ್ಟಣಕ್ಕೆ ಪೂರೈಕೆಯಾಗುವ ಹೇಮಾವತಿ ನಾಲೆಯ ನೀರನ್ನು ಸಮರ್ಪಕವಾಗಿ ಜೆಟ್ಟಿಅಗ್ರಹಾರ ಕೆರೆಯಲ್ಲಿ ಶೇಖರಿಸಿ ಸರಬರಾಜು ಮಾಡುವ ನಿಟ್ಟಿನಲ್ಲಿ ಹಾಗೂ ಪಟ್ಟಣ ವ್ಯಾಪ್ತಿಯ ಕೊಳವೆ ಬಾವಿಗಳಿಂದ ಯಾವುದೆ ಕೊರತೆ ಬಾರದ ರೀತಿಯಲ್ಲಿ ನಿರ್ವಹಿಸುವಂತೆ ಸೂಚಿಸಿದರು.

         ಬರ ನಿರ್ವಹಣೆ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸುವ ಕೃಷಿ ಇಲಾಖೆ ಹಾಗೂ ಪಶು ಇಲಾಖೆಗಳು ಹೆಚ್ಚು ಜವಾಬ್ದಾರಿ ವಹಿಸಿ ಕೆಲಸ ನಿರ್ವಹಿಸಬೇಕು, ಕೊರಟಗೆರೆ ತಾಲ್ಲೂಕ್  ವ್ಯಾಪ್ತಿಯಲ್ಲಿ ಪ್ರಸಕ್ತವಾಗಿ 13 ವಾರಗಳಿಗಾಗುವಷ್ಟು ಮಾತ್ರ ರೈತರಲ್ಲಿ ಜಾನುವಾರುಗಳಿಗೆ ಮೇವುಗಳಿದ್ದು, ಭೂರಹಿತ ರೈತರಿಗೆ ಈಗಾಗಲೆ ಬರದ ಬಿಸಿ ತಾಟುತ್ತಿದ್ದು, ಮುಂದಿನ ದಿನಗಳಲ್ಲಿ ಜಾಗೃತಿ ವಹಿಸಿ ಮೇವಿನ ಸಮಸ್ಯೆ ಬಂದಾಕ್ಷಣ ಬರ ಪರಿಹಾರ ಸಮೀತಿತಕ್ಷಣ ಮಾಹಿತಿ ನೀಡಿ ಮೇವಿನ ಬ್ಯಾಂಕು ತೆರೆಯುವಂತಹ ಕೆಲಸವಾಗಬೇಕು ಎಂದರು.

         ಸಭೆಯಲ್ಲಿ ತಹಶೀಲ್ದಾರ್ ನಾಗರಾಜು, ತಾಪಂ ಸಹಾಯಕ ನಿರ್ದೇಶಕ ನಾಗರಾಜು, ಕೃಷಿ ಇಲಾಖೆಯ ನಾಗರಾಜು, ಪಶು ಇಲಾಖೆಯ ಸಹಾಯಕ ನಿರ್ದೇಶಕ ಶಶಿಕುಮಾರ್, ಪಪಂ ಮುಖ್ಯಾಧಿಕಾರಿ ಲಕ್ಷ್ಮಣ್‍ಕುಮಾರ್, ಕಂದಾಯ ಅಧಿಕಾರಿ ನರಸಿಂಹಮೂರ್ತಿ ಸೇರಿದಂತೆ 24ಗ್ರಾಪಂ ಪಿಡಿಓ ಮತ್ತು ಕಂದಾಯ ಇಲಾಖೆಯ ಆರ್‍ಐ ಸೇರಿದಂತೆ ಇತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap