ತಿಪಟೂರು : ಕಳ್ಳರ ಪಾಲಾದ ಭಕ್ತರ ಕಾಣಿಕೆ

ತಿಪಟೂರು :

     ನಗರದ ದ್ವಾರಬಾಗಿಲಿನಲ್ಲಿರುವ ಗ್ರಾಮದೇವತೆ ಕೆಂಪಮ್ಮದೇವಿ ದೇವಾಲಯದ ಪಕ್ಕದಲ್ಲಿರುವ ಶ್ರೀ ಕಲ್ಲೇಶ್ವರ ಸ್ವಾಮಿ ದೇವಾಲಯದ ಬಾಗಿಲು ಮುರಿದು ಸೋಮವಾರ ರಾತ್ರಿ ಕಳ್ಳತನ ಮಾಡಲಾಗಿದೆ.

      ಮುಜರಾಯಿ ಇಲಾಖೆಗೆ ಸೇರಿದ ದೇವಾಲಯವು ತುಂಬಾ ಪ್ರಾಚೀನವಾಗಿದ್ದು, ಕಳೆದ 2 ವರ್ಷಗಳ ಹಿಂದ ಜೋರ್ಣದ್ಧಾರ ಮಾಡಲಾಗಿತ್ತು. ದೇವಾಲಯದಲ್ಲಿ ಶ್ರೀ ಕಲ್ಲೇಶ್ವರ, ಶ್ರೀ ಸೋಮನಾಥೇಶ್ವರ ಹಾಗೂ ಶ್ರೀ ಗಂಗಾಧರೇಶ್ವರ ವಿಗ್ರಹಗಳನ್ನು ಪುನಃ ಪ್ರತಿಷ್ಠಾಪಿಸಲಾಗಿ ಪೂಜಾ ಕಾರ್ಯಗಳು ಸಾಂಗೋಪವಾಗಿ ಜರುಗುತ್ತಿದ್ದವು. ಆದರೇ ಈಗ ದೇವಾಲದ ಬಾಗಿಲನ್ನು ಹೊಡೆದು ದ್ವಾರದಲ್ಲೆ ಇದ್ದ ಕಾಣಿಕೆ ಹುಂಡಿಯನ್ನು ಕಳ್ಳರು ಹೊತ್ತೊಯ್ದ, ದೇವಾಲಯದ ಪಕ್ಕದಲ್ಲೆ ಹುಂಡಿಯನ್ನು ಹೊಡೆದು ಹಣವನ್ನು ದೋಚಿ ಹುಂಡಿಯನ್ನು ಅಲ್ಲೆ ಎಸೆದು ಹೋಗಿದ್ದಾರೆ.

      ಶಿವರಾತ್ರಿ ಸಂದರ್ಭದಲ್ಲಿ ದೇವಾಲಯಕ್ಕೆ ಹೆಚ್ಚಿನ ಭಕ್ತರು ಆಗಮಿಸಿದ್ದು ಹುಂಡಿಯಲ್ಲಿ ಹೆಚ್ಚಿನ ಹಣ ಸಂಗ್ರಹವಾಗಿತ್ತು. ಮುಜಾರಾಯಿ ಇಲಾಖೆವರು ಹುಂಡಿಯನ್ನು ತೆರೆದು ಹಣ ವಿಲೇವಾರಿ ಮಾಡಿದ್ದರೇ ಹೆಚ್ಚಿನ ಹಣ ಕಳ್ಳರ ಪಾಲಾಗುತ್ತಿರಲಿಲ್ಲ ಎಂದು ಭಕ್ತಾಧಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

      ದೇವಾಲಯಕ್ಕೆ ಸಿಸಿಟಿವಿ ಮತ್ತು ಭದ್ರತೆ ಇಲ್ಲದಿರುವುದನ್ನು ಮನಗಂಡ ಕಳ್ಳರು ಇಲ್ಲಿ ಕಳ್ಳತನ ಮಾಡಿದರೆ ಸಿಲುಕಿ ಹಾಕಿಕೊಳ್ಳುವ ಪ್ರಸಂಗ ಎದುರಾಗುವುದಿಲ್ಲವೆಂದು ಕಳ್ಳತನ ಮಾಡಿದ್ದಾರೆ ಎಂದೆನಿಸುತ್ತದೆ.
ಕಳ್ಳತನದ ಬಗ್ಗೆ ಕಂದಾಯಾಧಿಕಾರಿಗಳು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಲಾಗಿ ತನಿಖೆ ನಡೆಯುತ್ತಿದೆ.

     ದೇವಾಲಯ ಆಡಳಿತವು ಮುಜರಾಯಿ ಇಲಾಖೆಗೆ ಕಳ್ಳತನದ ಬಗ್ಗೆ ದೂರು ನೀಡಿದೆ, ಹುಂಡಿಯು ಪೂರ್ಣ ತುಂಬಿಲ್ಲದೇ ಇದ್ದರಿಂದ ತೆಗೆದಿರಲಿಲ್ಲ.

-ಆರ್.ಜಿ.ಚಂದ್ರಶೇಖರ್, ತಹಶೀಲ್ದಾರ್

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link