ಗ್ರಾ.ಪಂ ನೌಕರರ ವಿವಿಧ ಬೇಡಿಕೆಗೆ ಒತ್ತಾಯಿಸಿ ಪ್ರತಿಭಟನೆ

ಹೂವಿನಹಡಗಲಿ :

            ಗ್ರಾಮ ಪಂಚಾಯಿತಿಯ ನೌಕರರು ಗ್ರಾಮ ಪಂಚಾಯ್ತಿಗಳಲ್ಲಿ ಕೈಬಿಟ್ಟಿರುವ 18 ಸಾವಿರ ಸಿಬ್ಬಂದಿಗಳಿಗೆ ಇ.ಎಫ್.ಎಂ.ಎಸ್. ತಂತ್ರಾಂಶದಲ್ಲಿ ಸೇರಿಸಲು 05-10-2018ರಂದು ಆದೇಶ ಹೊರಡಿಸಿರುವುದಕ್ಕೆ ಅಭಿನಂದನೆಗಳು ಎಂದು ಗ್ರಾ.ಪಂ.ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಆರ್.ಎಸ್.ಬಸವರಾಜ್ ಹೇಳಿದರು.

          ಅಲ್ಲದೇ, ಎಲೆಕ್ಷ್ಟ್ರಾನಿಕ್ ಫಂಡ್ ಮ್ಯಾನೇಜ್‍ಮೆಂಟ್ ಸಿಸ್ಟಮ್ ಸೇರದೆ ಬಾಕಿ ಉಳಿದ 18 ಸಾವಿರ ನೌಕರರ ವಿವರಗಳನ್ನು ಪಿಡಿಓ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು ಕೂಡಲೇ ಸರ್ಕಾರಕ್ಕೆ ವರದಿ ಕಳಿಸುವಂತೆ ಒತ್ತಾಯಿಸುವುದರೊಂದಿಗೆ ಅಪರ ಕಾರ್ಯದರ್ಶಿ ಎಂ.ಎಸ್.ಸ್ವಾಮಿಯವರ ವರದಿಯಂತೆ 5998 ಬಿಲ್‍ಕಲೆಕ್ಟರ್‍ಗಳ ಹುದ್ದೆಗಳ ಸೃಷ್ಟಿಗಾಗಿ ಕಿರು ನೀರು ಪೂರೈಕೆ ಹಾಗೂ ಕೊಳವೆ ಬಾವಿ ನೀರು ಪೂರೈಕೆ ಸ್ಥಾವರಗಳಿಗೆ ಅನುಗುಣವಾಗಿ 1600 ಹುದ್ದೆಗಳನ್ನು ಸೃಷ್ಟಿಸಿ ಹಾಗೂ ಐ.ಪಿ.ಡಿ. ಸಾಲಪ್ಪನವರ ವರದಿಯಂತೆ ಕಸಗುಡಿಸುವ ಹುದ್ದೆ ಒಂದು ಸಾವಿರ ಜನಕ್ಕೆ ಒಬ್ಬರಂತೆ ಸೃಷ್ಟಿಸಬೇಕು ಎನ್ನುವ ಬೇಡಿಕೆ ಸೇರಿ 12 ಬೇಡಿಕೆಗಳ ಮನವಿ ಪತ್ರವನ್ನು ತಾ.ಪಂ.ಇ.ಓ. ಸೋಮಶೇಖರರವರಿಗೆ ಸಲ್ಲಿಸಿದರು

        ಸಂಘದ ತಾಲೂಕು ಅಧ್ಯಕ್ಷರಾದ ನಾಗಭೂಷಣರೆಡ್ಡಿ, ಗೌರವಾಧ್ಯಕ್ಷ ಎಸ್.ಕೋಟೆಪ್ಪ, ಕಾರ್ಯದರ್ಶಿ ಈ.ಶೇಖನಗೌಡ, ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link