ಪಾವಗಡ
ಪಾವಗಡ ಪಟ್ಟಣದಲ್ಲಿ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಸುಮಾರು ಎಂಟು ಎಟಿಎಂಗಳು ಇದ್ದರೂ ಒಂದರಲ್ಲಿಯೂ ಕೂಡ ಸಮರ್ಪಕವಾಗಿ ಹಣವಿಲ್ಲದೆ ಶನಿವಾರ ಜನರು ಪರದಾಡುತ್ತಿರುವ ದೃಶ್ಯ ಕಂಡುಬಂದಿದೆ.
ಹಬ್ಬದ ಹಿಂದಿನ ದಿನ ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳುವಲ್ಲಿ ಎಲ್ಲಾ ಬ್ಯಾಂಕ್ ನ ವ್ಯವಸ್ಥಾಪಕರು ವಿಫಲವಾಗಿದ್ದಾರೆ ಗ್ರಾಹಕರು ತಮ್ಮ ಖಾತೆಯಲ್ಲಿ ಇರುವ ಹಣವನ್ನು ತಾವು ತೆಗೆದುಕೊಳ್ಳಲು ಆಗುತ್ತಿಲ್ಲ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ
ನಾಳೆ ಇದೆ ರೀತಿಯ ಸಮಸ್ಯೆ ಮುಂದುವರೆದರೆ ಬ್ಯಾಂಕ್‍ಗಳಿಗೆ ಬೀಗ ಜಡಿಯಾಬೇಕಾಗುತ್ತೆ ಎಂದು ಸಮಸ್ಥ ಪಾವಗಡ ಜನರ ಪರವಾಗಿ ಪಾವಗಡ ಯುವಕರ ವೇದಿಕೆ ಅಧ್ಯಕ್ಷ ಮೀನಕುಂಟೆಹಳ್ಳಿ ಶ್ರೀನಿವಾಸ್ ಎಚ್ಚರಿಸಿದ್ದಾರೆ..ಗ್ರಾಹಕರಾದ ರಾಮಚಂದ್ರ ರೆಡ್ಡಿ ನವೀನ್, ಸರಸ್ವತಿ, ಶ್ರೀರಾಮ, ವೆಂಕಟೇಶ್ ನಾಯಕ, ರಾಜಶೇಖರ್, ಮಹಮದ್ ನಬಿ, ವೆಂಕಟತಿಮ್ಮಾರೆಡ್ಡಿ ಉಪಸ್ಥಿತರಿದ್ದರು