ಚಿತ್ರದುರ್ಗ:
ಗ್ರಾಹಕರ ಪಿಗ್ಮಿ ಹಾಗೂ ಠೇವಣಿ ಹಣ ಪಾವತಿಸದೆ ವಂಚಿಸಿ ತಲೆಮರೆಸಿಕೊಂಡಿರುವ ಗ್ರೇಟ್‍ಫೋರ್ಟ್ ಮೈನಾರಿಟಿ ಮಲ್ಟಿಪರ್ಪಸ್ ಸೌಹಾರ್ಧ ಕೋಆಪರೇಟಿವ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮ್ಯಾನೇಜರ್ ಇವರುಗಳ ಮೇಲೆ ಕಾನೂನು ರೀತಿಯ ಕ್ರಮ ಕೈಗೊಂಡು ನಮ್ಮ ಹಣ ಕೈಸೇರುವಂತೆ ಮಾಡಿ ಎಂದು ರಕ್ಷಣಾಧಿಕಾರಿಗೆ ಗುರುವಾರ ಗ್ರಾಹಕರು ಮನವಿ ಸಲ್ಲಿಸಿದರು.
ಗ್ರೇಟ್‍ಫೋರ್ಟ್ ಮೈನಾರಿಟಿ ಮಲ್ಟಿ ಪರ್ಪಸ್ ಸೌಹಾರ್ಧ ಕೋಆಪರೇಟಿವ್ ಬ್ಯಾಂಕ್‍ಗೆ ಪ್ರತಿನಿತ್ಯ ಪಿಗ್ಮಿ ಕಟ್ಟುವವರು ಹಾಗೂ ಲಕ್ಷಾಂತರ ರೂ.ಠೇವಣಿಯಿಟ್ಟು ಕೈಸುಟ್ಟುಕೊಂಡಿರುವ ನೂರಾರು ಗ್ರಾಹಕರು ಜಿಲ್ಲಾ ರಕ್ಷಣಾಧಿಕಾರಿ ಕಚೇರಿಗೆ ತೆರಳಿ ಕೆಲವು ಪ್ರಮುಖರು ಮಾತ್ರ ರಕ್ಷಣಾಧಿಕಾರಿಯನ್ನು ಭೇಟಿಯಾಗಿ ಸಾವಿರಾರು ಗ್ರಾಹಕರಿಗೆ ವಂಚಿಸಿ ಅಂದಾಜು ಎರಡುವರೆಯಿಂದ ಮೂರು ಕೋಟಿ ರೂ.ಗಳಿಗೆ ವಂಚಿಸಿರುವ ಎಂ.ಡಿ.ಹಾಗೂ ಮ್ಯಾನೇಜರ್ ಮೇಲೆ ಎಫ್.ಐ.ಆರ್.ದಾಖಲಿಸುವಂತೆ ಒತ್ತಾಯಿಸಿದರು.
ಹಣ ಹೂಡಿ ವಂಚನೆಗೊಳಗಾಗಿರುವ ಗ್ರಾಹಕರ ಮನವಿ ಆಲಿಸಿದ ಜಿಲ್ಲಾ ರಕ್ಷಣಾಧಿಕಾರಿ ಡಾ.ಅರುಣ್ ಕೆ.ರವರು ಕಾನೂನು ರೀತಿ ಗ್ರೇಟ್‍ಫೋರ್ಟ್ ಮೈನಾರಿಟಿ ಮಲ್ಟಿಪರ್ಪಸ್ ಸೌಹಾರ್ಧ ಕೋಆಪರೇಟಿವ್ ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮ್ಯಾನೇಜರ್ ಮೇಲೆ ಎಫ್.ಐ.ಆರ್.ದಾಖಲಿಸಲಾಗುವುದಾಗಿ ಗ್ರಾಹಕರಿಗೆ ಭರವಸೆ ನೀಡಿದರು.
ರಕ್ಷಣಾಧಿಕಾರಿಯನ್ನು ಕಂಡ ನೂರಾರು ಗ್ರಾಹಕರು ನಂತರ ನಗರ ಪೊಲೀಸ್ ಠಾಣೆಗೆ ಆಗಮಿಸಿ ಗ್ರೇಟ್‍ಫೋರ್ಟ್ ಮೈನಾರಿಟಿ ಮಲ್ಟಿಪರ್ಪಸ್ ಸೌಹಾರ್ಧ ಕೋಆಪರೇಟಿವ್ ಬ್ಯಾಂಕ್‍ನವರಿಂದ ನಮ್ಮ ಹಣ ಕೊಡಿಸಿಕೊಡಿ ಎಂದು ಪೊಲೀಸರಲ್ಲಿ ಅವಲತ್ತುಕೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
