ಮಿಡಿಗೇಶಿ
ತಾಲ್ಲೂಕಿನ ಮಿಡಿಗೇಶಿ ಹೋಬಳಿಯು ರಾಜಕೀಯ ಕ್ಷೇತ್ರದಲ್ಲೂ ರಾಜ್ಯಮಟ್ಟ ಹಾಗೂ ಜಿಲ್ಲಾಮಟ್ಟ, ತಾಲ್ಲೂಕು ಮಟ್ಟದಲ್ಲಿ ಗುರ್ತಿಸಿಕೊಂಡಿರುವಂತಹ ಹಾಗೂ ಸದರಿ ಹೋಬಳಿಯಲ್ಲಿನವರು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಅಧಿಕಾರವನ್ನು ಸವಿದು ಬಂದಿರುವಂತಹ ಮಿಡಿಗೇಶಿ ಗ್ರಾಮ ಪಂಚಾಯಿತಿ `ಎ’ ಗ್ರೇಡ್ ಪಂಚಾಯಿತಿ ಆಗಿದ್ದು ಸದರಿ ಗ್ರಾಮ ಪಂಚಾಯಿತಿಗೆ ಸಾಕಷ್ಠು ವರಮಾನಗಳಿರುತ್ತದೆ.
17 ಜನ ಸದಸ್ಯರನ್ನೊಳಗೊಂಡ ಗ್ರಾಮ ಪಂಚಾಯಿತಿ ಎಂಟು ಗ್ರಾಮಗಳನ್ನು ಒಳಗೊಂಡಿರುತ್ತದೆ. ಇಂತಹ ಪಂಚಾಯಿತಿಯಲ್ಲಿನ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಹಾಲಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಹಾಲಿ ಗ್ರಾಮ ಪಂಚಾಯಿತಿ ಸದಸ್ಯರುಗಳವರಿಗೆ ಪಂಚಾಯಿತಿ ವ್ಯಾಪ್ತಿಯಲ್ಲಿ ಬಗ್ಗೆ ಸ್ವಲ್ಪ ಮಟ್ಟಿನ ಜವಾಬ್ದಾರಿಯ ಬಗ್ಗೆ ನೋಡಿಕೊಳ್ಳುವ ಗಮನಿಸುವ ಗೋಜಿಗೆ ಹೋಗದಿರುವುದು ಎಷ್ಠು ಸರಿ? ಎಂಬುದು ಇಲ್ಲಿನ ಪ್ರಜ್ಞಾವಂತ ನಾಗರೀಕರ ಯಕ್ಷ ಪ್ರಶ್ನೆಯಾಗಿರುತ್ತದೆ.
ಇದಕ್ಕೆ ತಾಜಾ ಉದಾಹರಣೆ ಮಿಡಿಗೇಶಿ ಗ್ರಾಮ ಸೇರಿದಂತೆ ಈ ಗ್ರಾಮ ಪಂಚಾಯಿತಿಗೆ ಸೇರಿದ ಬಹುತೇಕ ಗ್ರಾಮಗಳಲ್ಲಿ ಹಗಲಿರುಳೆನ್ನದೆ ಬೀದಿ ದೀಪಗಳು ಬೆಳಗುತ್ತಲಿರುತ್ತವೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಪಿ.ಡಿ.ಒ, ಕಾರ್ಯದರ್ಶಿ, ಬಿಲ್ ಕಲೆಕ್ಟರ್, ಕಂಪ್ಯೂಟರ್ ಆಪರೇಟರ್, ಪಂಚಾಯಿತಿ ಅಟೆಂಡರ್/ಜವಾನರ ಗಮನಕ್ಕೆ ಬಂದಿರುವುದಿಲ್ಲವೇ? ಗಮನಕ್ಕೆ ಬಂದಿದ್ದರೂ ನಮ್ಮ ಮನೆಯ ವಿದ್ಯುತ್ ದೀಪಗಳಲ್ಲವೇನು ಎಂಬ ತಾತ್ಸಾರ ಮನೋಭಾವನೆಯೇ ? ಗ್ರಾಮ ಪಂಚಾಯಿತಿ ವತಿಯಿಂದ ಪಾವತಿಸುವಂತಹ ವಿದ್ಯುತ್ ಬಿಲ್, ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಪ್ರತಿಯೊಬ್ಬ ಪ್ರಜೆಗೂ ಅನ್ವಯವಾಗುತ್ತದೆ.
ತಲಾ ಇಂತಿಷ್ಟು ಜನ ಸಾಮಾನ್ಯರಿಂದಲೇ ಬರುತ್ತಿರುವಂತಹ ಹಣ ಎಂಬುದನ್ನು ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಮರೆಯಬಾರದು.
ಗ್ರಾಮ ಪಂಚಾಯಿತಿಯ ಅಧಿಕಾರಿವರ್ಗ ಹಾಗೂ ಚುನಾಯಿತ ಜನ ಪ್ರತಿನಿಧಿಗಳವರಿಗೆ ಈ ಗ್ರಾಮದ ಹೊರವಲಯದ ಐ.ಡಿ.ಹಳ್ಳಿ ಗ್ರಾಮಕ್ಕೆ ಹಾದುಹೋಗುವ ರಸ್ತೆಯ ಬದಿಯಲ್ಲಿ ಎರಡು ಮನೆಗಳಿರುತ್ತವೆ. ಇತ್ತೀಚಿನ ದಿನಗಳಲ್ಲಿ ಈ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.
ರಸ್ತೆ ಬದಿಯಲ್ಲಿನ ತಿರುಮಲ ವೈನ್ಸ್ ಸ್ಟೋರ್ ಪ್ರಾರಂಭಗೊಂಡಾಗನಿಂದಲೂ ಐ.ಡಿ.ಹಳ್ಳಿಗೆ ಹೋಗುವ ಮಿಡಿಗೇಶಿಯ ಕ್ರಾಸ್ (ತಿರುವು) ನಿಂದ ನಾಲ್ಕು ಬೀದಿ ದೀಪಗಳನ್ನು ಬಹಳ ಮುತುವರ್ಜಿಯಿಂದ ಹಾಕಿದ್ದು, ಆ ದೀಪಗಳು ಅಂದಿನಿಂದ ಇಂದಿನವರೆಗು ಹಗಲಿರುಳೆನ್ನದೆ ಬೆಳಗುತ್ತಿರುತ್ತವೆ. ಈ ಸಂಬಂಧಪಟ್ಟಂತೆ ಗ್ರಾಮ ಪಂಚಾಯತಿಯವರ ನಿರ್ಲಕ್ಷ್ಯತನ ಕೊನೆಗೊಳ್ಳುವುದೆಂದು ? ಈ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಗಮನಿಸುವ ಮೂಲಕ ಗಾಢ ನಿದ್ರೆಯಲ್ಲಿರುವ ಮಿಡಿಗೇಶಿ ಗ್ರಾಮ ಪಂಚಾಯಿತಿಯವರನ್ನು ಬಡಿದೆಬ್ಬಿಸಲು ಮುಂದಾಗುವರೇ ?.