ಹಾವೇರಿ :
ಹಳ್ಳಿ ಉದ್ದಾರವಾದರೇ ದೇಶ ಉದ್ದಾರವಾಗಲು ಸಾಧ್ಯ ಎನ್ನುವ ಹಿರಿಯರ ಮಾತು ಕಟು ಸತ್ಯ, ಗ್ರಾಮೀಣ ಭಾಗದ ಜನರ ಪ್ರತಿಭೆಗಳು ಜಗತ್ ವಿಖ್ಯಾತಿಯಾಗಿ ಬೆಳೆದು ನಿಂತಿವೆ. ಈ ಭೂಮಂಡಲದಲ್ಲಿ ಬಹಳಷ್ಟು ಅಭಾವಗಳು ಕಂಡು ಬಂದಿರುವುದನ್ನು ನಾವು ನೋಡುತ್ತಲೇ ಬಂದಿದ್ದೇವೆ. ಅದರಲ್ಲಿಯೂ ಪರಿಸರ ಅಭಾವ ಇತ್ತಿಚ್ಚಿಗೆ ಹೆಚ್ಚಾಗಿದೆ.
ಇಂತಹ ಅರಿವು ಪ್ರತಿ ಭಾರತೀಯ ನಾಗರಿಕರಲ್ಲಿ ಮೂಡಬೇಕಾಗಿದೆ. ಪರಿಸರ ಉಳಿಯಬೇಕಾದರೆ ಗಿಡಮರಗಳನ್ನು ನಾವು ಬೆಳಿಸಲು ಮುಂದಾಗಬೇಕಾಗಿದೆ. ಇದಕ್ಕೆ ಒಂದು ಒಳ್ಳೆಯ ಉದಾಹರಣೆಯಾಗಿ ಹಾವೇರಿ ತಾಲೂಕಿನ ನಜೀಕಲಕ್ಮಾಪೂರ ಗ್ರಾಮದ ಚಿತ್ರಕಲಾವಿದ ಫಕ್ಕೀರೇಶ ಸಿದ್ಧಪ್ಪ ಹುರಳಿಕುಪ್ಪಿ ತಮ್ಮೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಟ್ಟು ಅವುಗಳ ಲಾಲನೆ,ಪಾಲನೆ ಮಾಡುತ್ತಾ ಹಚ್ಚು ಹಸಿರಾದ ವಾತಾವರಣವನ್ನು ಶಾಲಾ ಆವರಣದಲ್ಲಿ ನಿರ್ಮಾಣ ಮಾಡಿ ಗ್ರಾಮದ ಜನರಿಗೆ ಮಾದರಿಯಾಗಿದ್ದಾರೆ.
ಶಾಲಾ ಆವರಣದಲ್ಲಿ ಕಳೆದ ಮೂರು ವರ್ಷದಿಂದ ಈ ಒಂದು ದಿಟ್ಟ ನಿರ್ಧಾರ ಮಾಡಿ ಏಕಕಾಲದಲ್ಲಿ ನೂರಾರು ಗಿಡಗಳನ್ನು ನೆಟ್ಟು ಅವಗಳನ್ನು ಉಪಚಾರ ಮಾಡಿ ಆ ಗಿಡಗಳಿಗೆ ಬೇಸಿಗೆ ಸಮಯದಲ್ಲಿ ತಾವೇ ಸ್ವಂತ ನೀರನ್ನು ಹೊತ್ತು ನಂತರ ಪಕ್ಕದ ಬೊರವೇಲ್ ಮೂಲಕ ಹನಿ ನೀರಾವರಿ ಮಾಡಿ ಗಿಡಗಳು ದಷ್ಟಪುಷ್ಟವಾಗಿ ಬೆಳೆಯುವಂತೆ ಕಸಯನ್ನು ತಗೆದು ಗೊಬ್ಬರ ಹಾಕಿ ಪರಿಸರ ಉಳಿಸಲು ಪಣತೊಟ್ಟಿರುವ ಈ ಖಾಳಜಿಯನ್ನು ಎಲ್ಲರೂ ಮೆಚ್ಚಲೇಬೇಕಾಗಿದೆ.
ಈ ಪರಿಸರ ಪ್ರಜ್ಞೆ ಬಗ್ಗೆ ಹಾವೇರಿಯಲ್ಲಿ ಅಗಡಿ ಅಕ್ಕಿಮಠದ ಗುರುಲಿಂಗ ಮಹಾಸ್ವಾಮಿಜಿ ಪರಿಸರ ಜಾತ್ರೆ ಎನ್ನು ಮಹಾಸಮಾವೇಶ ಮೂಲಕ ಏಕಕಾಲದಲ್ಲಿ ಜಿಲ್ಲೆಯಲ್ಲಿ ಐದು ಲಕ್ಷ ಸಸಿಗಳು ನೆಟ್ಟರು. ಅವುಗಳಲ್ಲಿ ನಜೀಕಲಕ್ಮಾಪೂರ ಶಾಲೆ ಆವರಣದ ಗಿಡಗಳು ಸೇರಿದ್ದವು ಅವುಗಳನ್ನು ಸಂರಕ್ಷಣೆ ಮಾಡಲು ಮುಂದಾದ ಫಕ್ಕೀರೇಶ ನಂತರ ಅವರೂ ಕೂಡಾ ನೂರಾರು ಸಸಿಗಳನ್ನು ತಮ್ಮ ಸ್ವಖರ್ಚಿನಲ್ಲಿ ತಂದು ಸಸಿಗಳನ್ನು ನೆಟ್ಟರಲ್ಲದೇ ಅವುಗಳು ಮುಂದಿನ ಪೀಳಿಗೆಗೆ ನೆರಳಾಗಬೇಕು. ಪ್ರತಿ ಊರಲ್ಲಿ ಪರಿಸರ ರಕ್ಷಣೆ ಮಾಡಲು ನಾವು ಮುಂದಾಗದಿದ್ದರೇ, ಈಗಿನ ಬೀಕರ ಬರಗಾಲಗಳು ಮುಂದಿನ ದಿನಮಾನದಲ್ಲಿ ಪರಿಸರ ಹಾನಿಯಾಗಿ ಇದಕ್ಕಿಂತಲೂ ಕೆಟ್ಟ ಕಾಲ ಬರಬಹುದುದೆಂದು ಅವರ ಮುಂದಾಲೋಚನೆಯೇ ಈ ಪರಿಸರ ಬೆಳಿಸಲು ಪ್ರೇರಣೆಯಾಗಿದೆ.
ಈ ಗ್ರಾಮಕ್ಕೆ ಹೊಂದಿಕೊಂಡಿರುವ ಬಹುದೊಡ್ಡ ಗುಡ್ಡಗಾಡು ಪ್ರದೇಶವಿದ್ದರೂ ಅರಣ್ಯ ಇಲಾಖೆ ಇಂತಹ ಕೆಲಸ ಮಾಡಲು ಸರಕಾರ ಸಾಕಷ್ಟು ಸೌಕರ್ಯ ನೀಡಿದರೂ ಅಲ್ಲಿ ಕಣ್ಣಿಗೆ ಕಾಣುವವರೆಗೂ ಬೋಳಾದ ಗುಡ್ಡ ನಮಗೆ ದರ್ಶನವಾಗುತ್ತದೆ. ಆ ಗುಡ್ಡದ ಎದುರಿಗೆ ದರ್ಶನವಾಗುವ ಈ ಪಕ್ಕೀರೇಶ ಸಂರಕ್ಷಣೆ ಮಾಡಿರುವ ಶಾಲಾ ಆವರಣದ ಗಿಡಗಳು ನಮ್ಮನ್ನು ತಮ್ಮ ಅಂದಚೆಂದವನ್ನು ತೋರಿಸಿ ಕೈಬೀಸಿ ಕರೆಯುತ್ತೇವೆ. ಇಂದಿನ ದಿನದಲ್ಲಿ ಯಾವುದೇ ಕೆಲಸ ಕಡಿಮೆಯಾದರೂ ಪರವಾಗಿಲ್ಲ, ಪರಿಸರ ಸ್ವಚ್ಚತೆ ಗಿಡಮರ ಬೆಳೆಸುವ ಕೆಲಸ ಸಕಾಲಕ್ಕೆ ನಡೆಯಬೇಕು. ಅಂದಾಗ ಆ ಊರಿನ ಅಂದಚೆಂದ ನೆಮ್ಮದಿ ಉತ್ತಮ ಗಾಳಿ, ಅಂತರ್ಜಲ ಹೆಚ್ಚಳಕ್ಕೆ ಸಾಕ್ಷಿಯಾಗುವುದು. ಎನ್ನುವ ಆಶಯ ಅವರದಾಗಿದೆ. ಪರಿಸರ ರಕ್ಷಣೆ ನಮ್ಮೇಲರ ಕರ್ತವ್ಯವಾಗಬೇಕು. ಕಾಟಾಚಾರದ ಕೆಲಸಕ್ಕಿಂತ ಸ್ವಯಂ ಪ್ರೇರಣೆ ಪ್ರತಿಯೊಬ್ಬ ಭಾರತೀಯನಲ್ಲಿ ಬರಬೇಕಾಗಿದೆ.