ಹಿರಿಯೂರು
ತಾಲ್ಲೂಕಿನ ಮ್ಯಾಕ್ಲೂರಹಳ್ಳಿ ಬಾಲದೇವರಹಟ್ಟಿಯಲ್ಲಿ ನೆಲೆಸಿರುವ ಸುಪ್ರಸಿದ್ಧ ಶಕ್ತದೇವತೆ ಶ್ರೀಗೊಲ್ಲಹಳ್ಳಮ್ಮ ದೇವಿ”ಯ ಅಂಬಿನೋತ್ಸವ ವಿಶೇಷ ಪೂಜಾ ಕಾರ್ಯಕ್ರಮಗಳು ವೈಭವದಿಂದ ಜರುಗಿತು, ಇದರ ಅಂಗವಾಗಿ ಗೊಲ್ಲಹಳ್ಳಮ್ಮ ದೇವತೆಯನ್ನು ಪುಷ್ಪಗಳಿಂದ ಅಲಂಕರಿಸಲಾಗಿತ್ತು, ಮಾತೆಯನ್ನು ಗ್ರಾಮದ ಪ್ರಮುಖ ಬೀದಿಗಳ ಮೂಲಕ ಬನ್ನಿ ಮಂಟಪಕ್ಕೆ ಕರೆತಂದು ಪ್ರತೀ ವರ್ಷದಂತೆ ಅಂಬಿನೋತ್ಸವವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಮೆರವಣಿಗೆಯ ಉದ್ದಕ್ಕೂ ಭಕ್ತರ ಮನೆಗಳಲ್ಲಿ ಮಾತೆಗೆ ಪೂಜೆ ಸಲ್ಲಿಸಲಾಯಿತು.
ದೇವಾಲಯವನ್ನು ಹೂವುಗಳಿಂದ ಅಲಂಕರಿಸಿದ್ದು ಕಣ್ಮನ ಸೆಳೆಯುವಂತಿತ್ತು ಹಿರಿಯೂರು ತಾಲ್ಲೂಕು ಸೇರಿದಂತೆ ನಾನಾಕಡೆಗಳಿಂದ ಬಂದಿದ್ದ ಭಕ್ತರು ಉತ್ಸವದಲ್ಲಿ ಭಾಗವಹಿಸಿದ್ದರು ಮಹಾ ಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ಹಾಗೂ ಅನ್ನದಾಸೋಹ ಕಾರ್ಯಕ್ರಮ ನಡೆಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ