ಅದ್ದೂರಿಯಾಗಿ ನೆರವೇರಿದ ಸಂಕೀರ್ತನಾ ಯಾತ್ರೆ.

ಹೊಸಪೇಟೆ :

       ನಗರದಲ್ಲಿ ಹನುಮಾ ಮಾಲಾ ದೀಕ್ಷಾ ಅಂಗವಾಗಿ ಬುಧವಾರ ಸಂಜೆ ಬೃಹತ್ ಸಂಕೀರ್ತನಾ ಯಾತ್ರೆ ಅದ್ದೂರಿಯಾಗಿ ನೆರವೇರಿತು.
ಚಿಂತಾಮಣಿ ಮಠದ ಸ್ವಾಮೀಜಿ ಅವರು ವಡಕರಾಯ ಸ್ವಾಮಿಗೆ ಪೂಜೆ ಸಲ್ಲಿಸಿ, ಮಹಾಮಂಗಳಾರತಿ, ಪುಷ್ಪಾರ್ಚನೆ ಮಾಡುವ ಮೂಲಕ ಸಂಕೀರ್ತನಾ ಯಾತ್ರೆಗೆ ಚಾಲನೆ ನೀಡಿದರು.

         ನಗರದ ವಡಕರಾಯ ದೇವಸ್ಥಾನದಿಂದ ಪ್ರಾರಂಭವಾದ ಸಂಕೀರ್ತನಾ ಯಾತ್ರೆಯು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಯಾತ್ರೆಯಲ್ಲಿ ಸುಮಾರು 25 ಸಾವಿರ ಭಕ್ತರು ಭಾಗವಹಿಸಿದ್ದು ವಿಶೇಷವಾಗಿತ್ತು. ಯಾತ್ರೆಯಲ್ಲಿ ಮಹಿಳಾ ಡೊಳ್ಳು ಕುಣಿತ, ಕೋಲು ಕುಣಿತ, ಕೀಲುಗೊಂಬೆ, ಸರಸ್ವತಿ ವೇಷಧಾರಿಯ ವಿಶೇಷ ಅಲಂಕೃತ ಗೊಂಬೆಗಳು, ವಿವಿಧ ಬಣ್ಣಗಳ ಹೂವಿನಿಂದ ಅಲಂಕೃತಗೊಂಡ ಸುಂದರ ಹೂವಿನ ರಥ, ಮಹಿಳಾ ಸದಸ್ಯರಿಂದ ಭಜನೆ, 30ಕ್ಕೂ ಹೆಚ್ಚು ಕಲಾ ಪ್ರಕಾರಗಳು, ಚಂಡ ಮದ್ದಳೆ ಸೇರಿದಂತೆ ಜಾನಪದ ಕಲಾತಂಡಗಳ ಮೆರವಣಿಗೆ ನೆರೆದಿದ್ದ ಜನರ ಗಮನ ಸೆಳೆಯಿತು.

         ಮೆರವಣಿಗೆಯಲ್ಲಿ ಶಾಸಕ ಆನಂದಸಿಂಗ್, ಆನೆಗುಂದಿ ಸಂಸ್ಥಾನದ ವಂಶಸ್ಥ ಕೃಷ್ಣದೇವರಾಯ, ಹನುಮಾ ಮಾಲಾ ಸಮಿತಿ ಅಧ್ಯಕ್ಷ ಗುದ್ಲಿ ಪರಶುರಾಮ, ಸಂಘ ಪರಿವಾರದ ಮುಖಂಡರಾದ ಕೇಶವ, ಅನಿಲ್ ಜೋಶಿ, ನರಸಿಂಹಮೂರ್ತಿ, ವಿಜಯಲಕ್ಷ್ಮಿ, ಅನಂತ ಪಧ್ಮನಾಭ, ಕಿಶೋರ ಪತ್ತಿಕೊಂಡ ಸೇರಿದಂತೆ ಇತರರು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link