ವಿಜೃಂಭಣೆಯಿಂದ ಜರುಗಿದ ತಿಮ್ಮಪ್ಪನ ರಥೋತ್ಸವ

ಸಿರಿಗೇರಿ

         ವಿಜಯ ದಶಮಿ ನಿಮಿತ್ತ ಪ್ರತಿ ವರ್ಷದಂತೆ ಇಲ್ಲಿನ ತಿರುಪತಿ ತಿಮ್ಮಪ್ಪನ ರಥೋತ್ಸವ ಶುಕ್ರವಾರ ಗ್ರಾಮಸ್ತರಿಂದ ವಿಜೃಂಭಣೆಯಿಂದ ಆಚರಿಸಲಾಯಿತು. ಪ್ರಾರಂಭದಲ್ಲಿ ಗ್ರಾಮದ ತೇರುಬೀದಿಯಿಂದ ಡೊಳ್ಳು ವಾದ್ಯ ಮೇಳಗಳೊಂದಿಗೆ ಹೊರಟ ರಥೋತ್ಸವ ತಿಮ್ಮಪ್ಪನ ಬೆಟ್ಟ ತಲುಪಿತು. ಆ ನಂತರ ಸುಮಾರು ಸಾವಿರಾರು ಜನ ಭಕ್ತಾಧಿಗಳು ತಿಮ್ಮಪ್ಪನ ದರ್ಶನ ಪಡೆದು ಹಿರಿಯರಿಗೆ ಬನ್ನಿ ಸೊಪ್ಪು ನೀಡಿ “ಬನ್ನಿ ತೊಗೊಂಡ್ ಬಂಗಾರ್ದಂಗ ಇರಿ” ಎಂದು ಪರಸ್ಪರ ಶುಭಾಷಯ ವಿನಿಯೋಗಿಸಿಕೊಂಡರು. ವಿಶೇಷವೆಂದರೆ ನೂತನ ವಧೂವರರ ಸಂಖ್ಯೆ ಹೆಚ್ಚಾಗಿದ್ದರಿಂದ ಈ ಬಾರಿಯ ರಥೋತ್ಸವಕ್ಕೆ ಹೊಸ ಕಳೆ ತಂದು ಕೊಟ್ಟಿತು. ಇದೇ ವೇಳೆ ವೈಶ್ಯ ಸಮಾಜದವರಿಂದ ಪ್ರಸಾದ ವಿತರಣೆ ನಡೆಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link