ಪೂರ್ಣಕುಂಭದೊಂದಿಗೆ ಗಾಂಧಿ ಸ್ಥಬ್ದಚಿತ್ರ ಅದ್ಧೂರಿ ಮೆರವಣಿಗೆ

ಹಾವೇರಿ

      ಮಹಾತ್ಮಾಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ಹಾವೇರಿ ಜಿಲ್ಲೆ ರಾಣೇಬೆನ್ನೂರು ಹಾಗೂ ಹಾವೇರಿ ನಗರಕ್ಕೆ ಆಗಮಿಸಿದ ಗಾಂಧಿ ಸ್ಥಬ್ದಚಿತ್ರಕ್ಕೆ ಪೂರ್ಣಕುಂಭ ಹೊತ್ತ ಮಹಿಳೆಯರು ಹಾಗೂ ಕಲಾ ತಂಡಗಳಿಂದ ಅದ್ಧೂರಿ ಸ್ವಾಗತ ಮಾಡಿಕೊಳ್ಳಲಾಯಿತು.

      ಹಾವೇರಿಯಲ್ಲಿ ಶಾಸಕರಾದ ನೆಹರು ಓಲೇಕಾರ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ , ತಹಶೀಲ್ದಾರ ಶಿವಕುಮಾರ, ಜಿಲ್ಲಾ ವಾರ್ತಾಧಿಕಾರಿ ಬಿ.ಆರ್.ರಂಗನಾಥ್, ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ಚಿನ್ನಿಕಟ್ಟಿ ಹಾಗೂ ರಾಣೇಬೆನ್ನೂರಿನಲ್ಲಿ ಉಪವಿಭಾಗಾಧಿಕಾರಿ ತಿಪ್ಪೇಸ್ವಾಮಿ, ತಹಶೀಲ್ದಾರ ಕುಲಕರ್ಣಿ, ಅವರು ಮಾಲಾರ್ಪಣೆ ಮೂಲಕ ಸ್ವಾಗತಕೋರಿದರು. ಈ ಸಂದರ್ಭದಲ್ಲಿ ವಿವಿಧ ಗಣ್ಯರು ಹಾಗೂ ವಿವಿಧ ಇಲಾಖಾ ಅಧಿಕಾರಿಗಳು, ಶಾಲಾ ಮಕ್ಕಳು ಉಪಸ್ಥಿತರಿದ್ದರು.

       ದಾವಣಗೆರೆ ಪ್ರವಾಸ ಮುಗಿಸಿ ಹರಿಹರ ಮಾರ್ಗವಾಗಿ ರಾಣೇಬೆನ್ನೂರ ಪ್ರವೇಶಮಾಡಿದ ಸ್ಥಬ್ದಚಿತ್ರಕ್ಕೆ ಗುರುವಾರ ಬೆಳಿಗ್ಗೆ ಗಡಿಭಾಗದಲ್ಲಿ ಮಾಗೋಡ ಕ್ರಾಸ್‍ನಲ್ಲಿ ಸ್ವಾಗತಿಸಿ ನಗರದ ವಿವಿಧ ಮಾರ್ಗಗಳಲ್ಲಿ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ಪೂರ್ಣಕುಂಭಹೊತ್ತ ನೂರಾರು ಮಹಿಳೆಯರು ಹಾಗೂ ಎರಡು ಕಿ.ಮೀ.ಅಂತರವರೆಗೆ ಅಂತರದವರೆಗೆ ವಿಸ್ತರಿಸಿದ ಶಾಲಾ ಮಕ್ಕಳು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ವಿವಿಧ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು, ಮಹಿಳಾ ಸಂಘಟಕರು ಭಾಗವಹಿಸಿ ಮೆರವಣಿಗೆಗೆ ಮೆರಗು ತಂದರು.

      ಹಾವೇರಿ ನಗರದ ಕೆ.ಇ.ಬಿ. ವೃತ್ತದಿಂದ ಸ್ವಾಗತಿಸಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಗಾಂಧಿ ವೃತ್ತದಲ್ಲಿ ಸಾರ್ವಜನಿಕ ವೀಕ್ಷಣೆಗೆ ವ್ಯವಸ್ಥೆ ಮಾಡಲಾಯಿತು. ಕಲಾತಂಡದೊಂದಿಗೆ ಮೆರವಣಿಗೆಯಲ್ಲಿ ಶಾಸಕರಾದ ನೆಹರು ಓಲೇಕಾರ ಹಾಗೂ ಸಾಹಿತಿಗಳು,ಮುಖಂಡರು, ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.

    ಶಾಂತಿ ಮಾರ್ಗ ಮತ್ತು ಸತ್ಯ ಮಾರ್ಗ ಹೆಸರಿನಲ್ಲಿ ರಾಜ್ಯಾದ್ಯಂತ ಎರಡು ತಂಡಗಳಾಗಿ ತಲಾ 15 ಜಿಲ್ಲೆಗಳಲ್ಲಿ ಸ್ಥಬ್ಧಚಿತ್ರ ಸಂಚರಿಸಿ ಗಾಂಧೀಜಿ ಅವರ ಜೀವನದ ವಿವಿಧ ಘಟನಾವಳಿಗಳು, ಸ್ವಾತಂತ್ರ್ಯ ಹೋರಾಟದ ಪ್ರತಿಕೃತಿಗಳಿಂದ ಗಮನಸೆಳೆಯುತ್ತಿರುವ ಸ್ಥಬ್ದಚಿತ್ರ, ಹಿನ್ನೆಲೆ ಸಂಗೀತವಾಗಿ ಗಾಂಧಿ ಪ್ರೀಯ ಗೀತೆಗಳ ಗಾಯನದೊಂದಿಗೆ ಸತ್ಯ, ಅಹಿಂಸೆಯ, ಬ್ರಾತೃತ್ವದ ಸಂದೇಶ ಹಾಗೂ ಗಾಂಧೀಜಿ ಅವರ ಧ್ವನಿಯ ಭಾಷಣದ ಧ್ವನಿಸುರುಳಿ ಪ್ರಸಾರ ಎಲ್ಲರ ಗಮನಕ್ಕೆ ಕಾರಣವಾಗಿದೆ.

     ಹಾವೇರಿಗೆ ಆಗಮಿಸಿರುವ ಶಾಂತಿಮಾರ್ಗ ಹೆಸರಿನ ಸ್ಥಬ್ಧಚಿತ್ರ ಅಕ್ಟೋಬರ್ 2 ರಂದು ಮಾನ್ಯ ಮುಖ್ಯಮಂತ್ರಿಗಳಿಂದ ಉದ್ಘಾಟನೆಗೊಂಡು ಬೆಂಗಳೂರು ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಬಳ್ಳಾರಿ, ಕೊಪ್ಪಳ, ಗದಗ, ಬಾಗಲಕೋಟೆ, ರಾಯಚೂರು, ಯಾದರಗಿರಿ , ಕಲ್ಬುರ್ಗಿ, ಬೀದರ ಜಿಲ್ಲೆ ಒಳಗೊಂಡಂತೆ 15 ಜಿಲ್ಲೆಯ 34 ತಾಲೂಕುಗಳ ಸಂಚಾರಕೈಗೊಂಡು ಜಾಗೃತಿ ಮೂಡಿಸಲಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link