ಹಾವೇರಿ:
ರಾಜ್ಯ ಮೈತ್ರಿ ಸರಕಾರವು ಕಳೆದ ಎರಡು ದಿನಗಳ ಹಿಂದೆ ನೂತನ ಸಚಿವ ಸಂಪುಟದ ಖಾತೆ ಹಂಚಿಕೆ ಮಾಡಿದ್ದು, ಕುಂದಗೋಳ ಶಾಸಕರಾದ ಸಿ.ಎಸ್ ಶಿವಳ್ಳಿಯವರನ್ನು ಸಚಿವರಾಗಿ ನೇಮಕವಾಗಿದ್ದಾರೆ. ಬೆಂಗಳೂರಿನಿಂದ ತಮ್ಮ ಸ್ವ ಕ್ಷೇತ್ರಕ್ಕೆ ಮರಳಿ ಬುಧವಾರ ರಾತ್ರಿ ಹಾವೇರಿ ನಗರಕ್ಕೆ ಭೇಟಿ ನೀಡಿದಾಗ ಇವರನ್ನು ಜಿಲ್ಲೆಯ ಸಾಕಷ್ಟು ಅಭಿಮಾನಿಗಳು ಹಾಗೂ ಜಿಲ್ಲೆಯ ಕಾಂಗ್ರೇಸ್ ಪಕ್ಷ ಗಣ್ಯರು, ಮುಖಂಡರು, ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿ ಸನ್ಮಾನ ಮಾಡಿದರು.
ನಗರದಲ್ಲಿರುವ ತಮ್ಮ ಸಹೋದರನ ಟ್ರಾಕ್ಟರ ಶೋ ರೂಮಂ ನಲ್ಲಿ ಹೊಸ ಟ್ರಾಕ್ಟರನ್ನು ಖರೀದಿ ಮಾಡಿದ ರೈತರಿಗೆ ನೂತನ ಕೀ ನೀಡಿ ರೈತರನ್ನು ಪೋತ್ಸಹಿಸಿದರು. ಈ ಸಮಯದಲ್ಲಿ ಹರಿಜನ ಸಮಾಜದ ರಾಜ್ಯ ಮುಖಂಡ ಹಿರಿಯ ನಾಯಕ ಡಿ.ಎಸ್ ಮಾಳಗಿಯವರು ಸಚಿವರಾದ ಶಿ.ಎಸ್ ಶಿವಳ್ಳಿಯವರಿಗೆ ಸನ್ಮಾನಿಸಿ ಅಭಿನಂದನೆ ತಿಳಿಸಿದರು.ಮಾಜಿ. ಜಿ.ಪಂ ಸದಸ್ಯ ಮಾಲಿಂಗಪ್ಪ ಹಳವಳ್ಳಿ,ಮಾದೇವಪ್ಪ ವಡ್ಡರ, ಭೀರಪ್ಪ ಸಣ್ಣತಮ್ಮನವರ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ