ದುರಾಸೆ ಹೆಚ್ವಿರುವುದರಿಂದಲ್ಲೇ ಭ್ರಷ್ಟಾಚಾರ ನಿಯಂತ್ರಣವಾಗುತ್ತಿಲ್ಲ : ಸಂತೋಷ ಹೆಗಡೆ

ಬಳ್ಳಾರಿ :

    ಸಧ್ಯ ಭ್ರಷ್ಟ ವ್ಯವಸ್ಥೆ ಯಲ್ಲಿ ನಾವಿದ್ದೇವೆ. ಈ ಸಮಾಜ ಬದಲಾಗ ಬೇಕಿದೆ. ಹೀಗಿನ ವ್ಯವಸ್ಥೆಯೇ ಬದಲಾಗಬೇಕು.ಅದಕ್ಕೆ
ಜನರಲ್ಲಿ ಬದಲಾವಣೆ ಬರಬೇಕು. ಜನರಲ್ಲಿ ದುರಾಸೆ, ಅಧಿಕಾರದ ಆಸೆ ಜಾಸ್ತಿಯಾಗಿರುವುದರಿಂದ ಬದಲಾವಣೆ ಸಾಧ್ಯವಾಗುತ್ತಿಲ್ಲ ಎಂದು ಲೋಕಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ವಿಷಾದ ವ್ಯಕ್ತಪಡಿಸಿದರು.

   ಅವರು‌ ನಗರದಲ್ಲಿ‌ ನಡೆಯುತ್ತಿರುವ ಯುವಜನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.ದುಡ್ಡಿದ್ದವರು ಅಧಿಕಾರ ಬೇಕು ಅಂತಾರೆ. ಅಧಿಕಾರದಲ್ಲಿ ಬಂದವರು ಭ್ರಷ್ಟಾಚಾರ ಮಾಡುತ್ತಿದ್ದಾರೆ. ಈ
ಹಿಂದೆ ಜೈಲಿಗೆ ಹೋದವರನ್ನು ಶಿಕ್ಷೆ ಆಗೋ ಮುಂಚೆ ಜನ ಬಹಿಷ್ಕರಿಸುತ್ತಿದ್ದರು. ಆದರೆ ಅದ್ದೂರಿಯಾಗಿ ಸ್ವಾಗತಿಸುತ್ತಿದ್ದಾರೆ‌ ಇದಕ್ಕೆ ಏನೆನ್ನಬೇಕು ಎಂದು ಪರೋಕ್ಷವಾಗಿ ಇಂದು ಅಕ್ರಮ ಹಣ ಸಂಪಾದನೆಯ ಆರೋಪದಡಿ ಬಂಧನವಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಇಂದು ಬೆಂಗಳೂರಿಗೆ ಬರುತ್ತಿರುವ ಡಿ.ಕೆ.ಶಿವಕುಮಾರ್ ಅವರ ಸ್ವಾಗತದ ಬಗ್ಗೆ ಪರೋಕ್ಷವಾಗಿ‌ ಟೀಕಿಸಿದರು.

   ಏಕ ವ್ಯಕ್ತಿಯನ್ನು ಪೂಜೆ ಮಾಡಲಿ ಆದರೆ ಭ್ರಷ್ಟರನ್ನು ಪೂಜೆ ಮಾಡಬಾರದು. ಬಲಿಷ್ಠ ಲೋಕಪಾಲ ಬಿಲ್ ಜಾರಿ ಬಗ್ಗೆ ಯಾರಿಗೆ ಬೇಕಿಲ್ಲ. ಅಧಿಕಾರದಲ್ಲಿ ಇರೋರು ಎಷ್ಟು ಪ್ರಮಾಣಿಕರು ಇದ್ದಾರೆ ಎಂಬುದೇ ಪ್ರಶ್ನೆಯಾಗಿದೆಂದರು.ಲೋಕಾಯುಕ್ತ ಕೂಡ ದುರ್ಬಲವಾಗಿದೆ. ಎಸಿಬಿ ಪೊಲೀಸ್ ವ್ಯವಸ್ಥೆ ಯಲ್ಲಿ ಬರೋ ಸಂಸ್ಥೆ. ಮಂತ್ರಿ ಕೆಳಗೆ ಇರೋ ಎಸಿಬಿ ಏನು ಮಾಡಬಹುದು ನೀವೇ ಹೇಳಿ ಎಂದರು.

ಲೋ ಶುಗರ್:

    ಯುವಜನೋತ್ಸವದಲ್ಲಿ ಪಾಲ್ಗೊಂಡು ಭಾಷಣ ಮಾಡುವ ವೇಳೆ ‌ಲೋ ಶುಗರ್ ನಿಂದ ಅವರು ಅಸ್ವಸ್ಥರಾಗಿ ಕೆಲ ಹೊತ್ತು ವೇದಿಕೆಯಲ್ಲಿ ಸಂತೋಷ್ ಹೆಗಡೆ ಅವರು ಕುಳಿತುಕೊಂಡರು.ಕೆಲ ಕಾಲದ ನಂತರ ಸುಧಾರಿಸಿಕೊಂಡ ಅವರು ಮತ್ತೆ ಭಾಷಣ ಮುಂದುವರೆಸಿ ತಮಗೆ ಯಾವುದೇ ತೊಂದರೆ ಇಲ್ಲವೆಂದು ಸ್ಪಷ್ಟನೆ ನೀಡಿದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link