ಹವಾಮಾನ ಬದಲಾವಣೆಗೆ ಅನುಗುಣವಾಗಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಿ : ಸಿಎಂ

ಬೆಂಗಳೂರು

      ಹವಾಮಾನ ಬದಲಾವಣೆಗೆ ಅನುಗುಣವಾಗಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಆಯಾ ಜಿಲ್ಲೆ ಮತ್ತು ಪ್ರಾಂತ್ಯಗಳಲ್ಲಿ ಪ್ರತ್ಯೇಕ ಕೃಷಿ ಮಾದರಿಗಳನ್ನು ರೂಪಿಸಬೇಕಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

      ನಗರದಲ್ಲಿ ಶುಕ್ರವಾರ ಅಸಚೊಮ್ ಮತ್ತು ಟೆರಿ ಆಯೋಜಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗೆ ಅನುಗುಣವಾಗಿ ಕೃಷಿ ಚಟುವಟಿಕೆಗಳನ್ನು ನಡೆಸಲು ಆಯಾ ಪ್ರಾಂತ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರತ್ಯೇಕ ಮಾದರಿಯನ್ನು ರೂಪಿಸದರೆ ರೈತರ ಸಂಕಷ್ಟ ನಿವಾರಿಸಬಹುದು ಎಂದರು.

       ಜಾಗತಿಕ ಹವಾಮಾನ ಬದಲಾವಣೆಗಳಿಗೆ ಪರಿಹಾರಗಳನ್ನು ಕಂಡುಕೊಂಡು ಕೃಷಿ ಚಟುವಟಿಕೆಗಳಿಗೆ ಬಾಧೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ ಹವಾಮಾನ ಬದಲಾವಣೆಯಿಂದ ಎದುರಾಗಿರುವ ಬರ, ಪ್ರವಾಹ, ಮಳೆಯ ಕೊರತೆ ಎಲ್ಲದ್ದರ ಬಗ್ಗೆಯೂ ತಳಮಟ್ಟದಲ್ಲಿ ಪರಿಹಾರಗಳನ್ನು ರೂಪಿಸುವ ಜರೂರು ಇದೆ ಎಂದು ಹೇಳಿದರು.

       ಕರ್ನಾಟಕವು ಬರ, ಪ್ರವಾಹದಂತಹ ಪ್ರಕೃತಿ ವಿಕೋಪಕ್ಕೆ ಸಿಲುಕಿದೆ. 2019ರಲ್ಲಿ ರಾಜ್ಯದ 103 ತಾಲ್ಲೂಕುಗಳಲ್ಲಿ ಪ್ರವಾಹ ಕಾಣಿಸಿಕೊಂಡಿತ್ತು. 49 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ತಲೆ ದೋರಿದೆ. ಹಾಗಾಗಿ, ಹವಾಮಾನ ವೈಪರಿತ್ಯಗಳಿಗೆ ಪರಿಹಾರ ಹುಡುಕುವ ಪ್ರಯತ್ನಗಳು ಆಗಬೇಕಿದೆ ಈ ವಿಚಾರಸಂಕಿರಣ ಹವಾಮಾನ ವೈಪರೀತ್ಯಗಳಿಗೆ ಪರಿಹಾರ ಹುಡುಕಿಕೊಳ್ಳಲು ಮಾರ್ಗದರ್ಶನ ಮಾಡಲಿ ಎಂದವರು ಆಶಿಸಿದರು.

      ಮಳೆಯಾಧಾರಿತ ಕೃಷಿ ಚಟುವಟಿಕೆಗಳು ಹವಾಮಾನ ಬದಲಾವಣೆಯಿಂದ ತೊಂದರೆಗೊಳಗಾಗಿದೆ. ಎಲ್ಲದ್ದಕ್ಕೂ ಪರಿಹಾರ ಹುಡುಕುವ ಪ್ರಯತ್ನಗಳು ಹೆಚ್ಚಾಗಿ, ಸುಸ್ಥಿರ ಕೃಷಿಗೆ ನೆರವಾಗುವ ಅಗತ್ಯ ಹೆಚ್ಚಿದೆ ಎಂದು ಅವರು ಹೇಳಿದರು.ಪ್ರಧಾನಿ ನರೇಂದ್ರಮೋದಿ ಮತ್ತು ಗೃಹ ಸಚಿವ ಅಮಿತ್ ಶಾ, ಕೇಂದ್ರದ ಜಲಸಂಪನ್ಮೂಲ ಸಚಿವರುಗಳು ಆಸಕ್ತಿ ವಹಿಸಿ ಮಹದಾಯಿ ಅಧಿಸೂಚನೆ ಹೊರಡಿಸಲು ಕಾರಣರಾಗಿದ್ದಾರೆ. ಅವರಿಗೆ ರಾಜ್ಯದ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿಯೂ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು

    ಈ ವಿಚಾರ ಸಂಕಿರಣದಲ್ಲಿ ಅಸಚೊಮ್ ಅಧ್ಯಕ್ಷ ಎಸ್. ಸಂಪಂತ್ ರಾಮನ್, ದೀಪಕ್ ಸೂದ್, ಡಿ.ಎನ್. ನರಸಿಂಹ ರಾಜು, ಆರ್.ಆರ್ ರಶ್ಮಿ ಉಪಸ್ಥಿತರಿದ್ದರು.

        ಮಹದಾಯಿ ನದಿ ನೀರಿನ ಹಂಚಿಕೆ ಸಂಬಂಧ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದು ಬಜೆಟ್‌ನಲ್ಲಿ ಮಹದಾಯಿ ಯೋಜನೆಗೆ ಹೆಚ್ಚಿನ ಅನುದಾನ ಒದಗಿಸಿ ಆದಷ್ಟು ಶೀಘ್ರ ಮಹದಾಯಿ ನದಿ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು ರಾಜ್ಯದ ಪಾಲಿನ 13.5 ಟಿಎಂಸಿ ಮಹದಾಯಿ ನದಿ ನೀರು ಬಳಸಿಕೊಳ್ಳಲು ಸಿದ್ಧ. ಅಡೆ-ತಡೆಗಳು ಈಗ ನಿವಾರಣೆಯಾಗಿದೆ. ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸುವ ಮೂಲಕ ರಾಜ್ಯದ ಮನವಿಗೆ ಸ್ಪಂದಿಸಿದೆ ಮಹದಾಯಿ ನದಿ ಯೋಜನೆಗಳಿಗೆ ಬಜೆಟ್‌ನಲ್ಲಿ ಹೆಚ್ಚಿನ ಹಣ ಒದಗಿಸಿ ಆದಷ್ಟು ಬೇಗ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಮಹದಾಯಿ ನದಿ ಯೋಜನೆಗಳು ಜಾರಿಯಾದರೆ ಧಾರವಾಡ, ಹಾವೇರಿ, ಗದಗ ಸೇರಿದಂತೆ ಕೆಲ ಜಿಲ್ಲೆಗಳ ಹಳ್ಳಿಗಳು ಕುಡಿಯುವ ನೀರಿನ ಸಮಸ್ಯೆಯಿಂದ ಮುಕ್ತವಾಗಲಿದ್ದು ನೀರಾವರಿ ವಿದ್ಯುತ್ ಉತ್ಪಾದನೆಗೂ ಅನುಕೂಲವಾಗಲಿದೆ
ಯಡಿಯೂರಪ್ಪ ಮುಖ್ಯಮಂತ್ರಿ

Recent Articles

spot_img

Related Stories

Share via
Copy link
Powered by Social Snap