ಕೊಲಂಬೋ:
ಶ್ರೀಲಂಕಾದಲ್ಲಿ ಬಾಂಬ್ ದಾಳಿ ನಡೆದು ಒಂದು ವಾರ ಕಳೆಯುವ ಮುನ್ನವೇ ಉಗ್ರರ ಅಡಗುತಾಣಕ್ಕೇ ನುಗ್ಗಿ ಶ್ರಿಲಂಕಾ ಸೇನೆ ದಾಳಿ ನಡೆಸಿದೆ. ಈ ದಾಳಿಯಲ್ಲಿ ಒಟ್ಟು ಹದಿನ್ಐದು ಜನರು ಮೃತರಾಗಿದ್ದಾರೆಂದು ಮತ್ತು ಶ್ರೀಲಂಕಾ ಸೇನೆ ದಾಳಿ ನಡೆಸಿದ ವಿಷಯ ತಿಳಿಯುತ್ತಲೇ ಉಗ್ರರು ಸ್ಥಳದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಒಟ್ಟು 15 ಜನರನ್ನು ಕೊಂದುಹಾಕಿದ್ದಾರೆ . ಇದರಲ್ಲಿ ಆರು ಜನ ಮಕ್ಕಳೂ ಸೇರಿದ್ದಾರೆ ಎನ್ನಲಾಗಿದೆ. ಶ್ರೀಕಲ್ಮುನೈನ ಪ್ರದೇಶವೊಂದರಲ್ಲಿ ಉಗ್ರರು ಅಡಗಿದ್ದ ಖಚಿತ ಮಾಹಿತಿಯ ಮೇರೆಗೆ ಸೇನೆ ದಾಳಿ ನಡೆಸಿದ್ದು, ಪ್ರತಿದಾಳಿ ನಡೆಸಲು ಸಾಧ್ಯವಾಗದೆ ಮೂವರು ಉಗ್ರರು ತಾವೇ ಗುಂಡುಹಾಕಿಕೊಂಡು ಸತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ ಮೃತ ಉಗ್ರರಲ್ಲಿ ಹಲವರು ಆತ್ಮಾಹುತಿ ದಾಳಿಕೋರರಿದ್ದರು ಎಂದೂ ಶ್ರೀಲಂಕಾ ಸೇನೆ ತಿಳಿಸಿದೆ. ಆದರೆ ಮೃತರೆಲ್ಲರೂ ಭಯೋತ್ಪಾದಕ ಸಂಘಟನೆಗೆ ಸೇರಿದವರೆ ಎಂಬ ಬಗ್ಗೆ ಇನ್ನೂ ಖಚಿತ ಮಾಹಿತಿ ಲಭ್ಯವಾಗಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
