ಮಕ್ಕಳಿಗೆ ಶಾಲಾ ಹಂತದಲ್ಲೇ ಕ್ರೀಡಾಸಕ್ತಿ ಬೆಳೆಸಬೇಕು

ಚಿತ್ರದುರ್ಗ:

        ಒಲಂಪಿಕ್ಸ್ ಮತ್ತುಏಷ್ಯಾಕ್ರೀಡಾಕೂಟಗಳಲ್ಲಿ ದೇಶದಯುವಕಯುವತಿಯರುಚಿನ್ನದ ಹುಡುಗ ಹುಡುಗಿಯರಾಗಿ ಹೊರ ಬರುತ್ತಿರುವವರ ಸಂಖ್ಯೆತೀರಾಕಡಿಮೆಯಾಗುತ್ತಿದೆ. ಆದರೆ ಪಕ್ಕದರಾಷ್ಟ್ರದಚೀನಾದಲ್ಲಿ ಈ ಸಂಖ್ಯೆ ಹೆಚ್ಚಾಗಿದೆ.ನಮ್ಮದೇಶದ ಕ್ರೀಡಾಪಟುಗಳು ರಾಷ್ಟ್ರ ಮತ್ತುಅಂತರಾಷ್ಟ್ರೀಯ ಮಟ್ಟದಲ್ಲಿ ಗೆಲುವು ಸಾಧಿಸಬೇಕಾದರೆಕ್ರೀಡಾ ಮನೋಭಾವನೆಯನ್ನು ಶಾಲಾ ಹಂತದಿಂದಲೇ ಬೆಳಸಬೇಕುಎಂದುಡಾ|| ಶಿವಮೂರ್ತಿ ಮುರುಘಾಶರಣರು ಹೇಳಿದರು.

        ಚಿತ್ರದುರ್ಗ ನಗರದ ಹೊರವಲಯದಲ್ಲಿರುವಎಸ್.ಜೆ.ಎಂ ಶಾಲಾ ಸಮೂಹಗಳವತಿಯಿಂದಕರ್ನಾಟಕರಾಜ್ಯಅಮ್ಯೂಚುರ್ ನೆಟ್‍ಬಾಲ್ ಅಸೋಸಿಯೇಷನ್ ಇವರ ಸಹಯೋಗದಿಂದ ಏರ್ಪಡಿಸಿದ್ದ ಎರಡು ದಿನಗಳ ಸಬ್‍ಜ್ಯೂನಿಯರ್ ನೆಟ್‍ಬಾಲ್‍ ಟೂರ್ನ್‍ಮೆಂಟ್‍ನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

       ಮುಂದುವರೆದು, ಶಾಲೆಯಆಡಳಿತ ಮತ್ತು ಸರ್ಕಾರದ ಇಲಾಖೆಗಳು ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕಾಗಿದೆ. ಕ್ರೀಡಾ ಚಳುವಟಿಕೆಗಳನ್ನು ಸಹ ಇತರ ಪಠ್ಯ ಚಟುವಟಿಕೆಗಳಂತೆ ಪರಿಗಣಿಸಿ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗಳ ಅಭಿವೃದ್ಧಿಗೆಗಮನಹರಿಸಬೇಕಾಗಿರುವುದು ಇಂದಿನ ದಿನಗಳಲ್ಲಿ ಅತ್ಯವಶ್ಯಕವಾಗಿದೆ.ಎಸ್.ಜೆ.ಎಂ ಶಾಲೆಯಆರು ವಿದ್ಯಾರ್ಥಿಗಳು ಕಳೆದ ಎರಡು ವರ್ಷಗಳಲ್ಲಿ ಆಂದ್ರಪ್ರದೇಶದ ವರಂಗಲ್ ಮತ್ತು ಬಿಹಾರದಆರಾದಲ್ಲಿ ನಡೆದರಾಷ್ಟ್ರಮಟ್ಟದ ನೆಟ್‍ಬಾಲ್‍ಕ್ರೀಡಾಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

        2017-18 ನೇ ಸಾಲಿನಲ್ಲಿಕರ್ನಾಟಕತಂಡದಿಂದಆಯ್ಕೆಯಾಗಿರಾಷ್ಟ್ರಮಟ್ಟದಲ್ಲಿ ವಿಜೇತರಾದ ಮಕ್ಕಳನ್ನು ಸನ್ಮಾನಿಸಿದ ಅವರು “ ಮಕ್ಕಳಿಗೆ  ನೀಡುವ ಈ ಸನ್ಮಾನಅವರ ನಂತರದ ಬದುಕಿಗೆ ಪ್ರೋತ್ಸಾಹವಾಗುತ್ತದೆಎಂದರು.

        ಕಾರ್ಯಕ್ರಮದಲ್ಲಿ ಚಿತ್ರದುರ್ಗ ಅಮ್ಯೂಚುರ್ ನೆಟ್‍ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ವಿಜಯ ಕುಮಾರ್‍ ಆರ್. ಇವರು ಮಾತಾನಾಡಿ , ಶಾಲೆಯಲ್ಲಿಎಲ್ಲಾತರಹದ ಅಟೋಟಗಳನ್ನು ರಾಜ್ಯಮಟ್ಟದಲ್ಲಿಆಡಿಸುತ್ತಿರುವ ಈ ಶಾಲೆಯ ಬಗ್ಗೆ ಹಾಗು ಸ್ವಾಮೀಜಿಯವರ ಸಹಕಾರ ಮನೋಭಾವನೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

        ಎಸ್.ಜೆ.ಎಂ ವಿದ್ಯಾಪೀಠದ ಕಾರ್ಯದರ್ಶಿಎ.ಜೆ.ಪರಮಶಿವಯ್ಯ,ಕಾರ್ಯನಿರ್ವಹಣಾ ನಿರ್ದೇಶಕ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ , ಅಮ್ಯೂಚುರ್ ನೆಟ್‍ಬಾಲ್ ಅಸೋಸಿಯೇಷನ್‍ನ ಕಾರ್ಯದರ್ಶಿ ಗೀರಿಶ್, ಪ್ರಾಂಶುಪಾಲರಾದ ಶ್ರೀಮತಿ ಪರಂಜ್ಯೋತಿ ಹಾಗೂ ಪೋಷಕವರ್ಗದವರಾದ ಸುರೇಶ್ ಉಪಸ್ಥಿತರಿದ್ದರು.ಸಹನ ವಿ. ಸ್ವಾಗತಿಸಿದರು.ಅಮೋಘ ಕೆ. ವಂದಸಿದರು.ನಂದಿನಿ ಡಿ ಧನುಶ್ರೀ ಹೆಚ್.ಎಸ್. ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap