ಕೈತೋಟದಲ್ಲಿ ತರಕಾರಿ ಬೆಳೆದು ಆರ್ಥಿಕವಾಗಿ ಸದೃಢರಾಗಿರಿ

ಹಾವೇರಿ:

     ಪ್ರತಿ ಮನೆಯ ಖಾಲಿ ಜಾಗೆಯಲ್ಲಿ ಕೈತೋಟಬೆಳೆಸಿ ಆರ್ಥಿಕವಾಗಿ ಸದೃಢರಾಗುವಂತೆ ಎಂದು ಶಾಸಕ ನೆಹರು ಓಲೇಕಾರ ಅವರು ಹೇಳಿದರು.ಸೋಮವಾರ ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಭಾಭವನದಲ್ಲಿ ಆಯೋಜಿಸಲಾದ ರೈತ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

         ಕೃಷಿ ಕ್ಷೇತ್ರದಲ್ಲಿ ಮಹಿಳೆಯ ಸಾಧನೆ ಪುರುಷರಿಗಿಂತ ಕಡಿಮೆಯೇನಿಲ್ಲ. ಹೆಣ್ಣು ಇಡೀ ಸಂಸಾರವನ್ನು ನಿಭಾಯಿಸುಕೊಂಡು ಹೋಗುವುದರೊಂದಿಗೆ ಕೃಷಿ ಚಟುವಟಿಕೆಯಡಿಯಲ್ಲಿ ತನ್ನನ್ನು ತೋಡಗಿಸಿಕೊಂಡಿದ್ದಾಳೆ. ಗ್ರಾಮೀಣ ಮಹಿಳೆಯರು ಬಿತ್ತುವುದರಿಂದ ಹಿಡಿದು ಒಕ್ಕಣೆ ಮಾಡುವವರೆಗೂ ದುಡಿದು ಎಲ್ಲ ರಂಗಗಳಲ್ಲಿ ಪುರುಷರಿಗೆ ಸರಿಸಮಾನವಾಗಿ ಕಾರ್ಯ ನಿರ್ವಹಿಸುವ ಸಾಮಥ್ರ್ಯ ಹೊಂದಿದ್ದಾರೆ ಎಂದು ಹೇಳಿದರು.

        ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ತಮ್ಮ ತಮ್ಮ ಮನೆಯ ಹಿತ್ತಲದಲ್ಲಿ ಕನಿಷ್ಠ ಐದು ತೆಂಗಿನ ಗಿಡಗಳನ್ನಾದರು ಬೆಳೆಸಿ ಸಂರಕ್ಷಿಸಬೇಕು ಹಾಗೂ ಕೈತೋಟದಲ್ಲಿ ತರಕಾರಿ ಬೆಳೆಯಲು ಮುಂದಾಗಬೇಕು. ಇದರಿಂದ ಆರ್ಥಿಕವಾಗಿ ಸಬಲರಾಗಬಹುದು ಎಂದು ಹೇಳಿದರು.

      ಸಹಾಯಕ ಕೃಷಿ ನಿರ್ದೆಶಕ ಕರಿಯಲ್ಲಪ್ಪ ಕೆ. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಪುರುಷರಿಗಿಂತ ಮಹಿಳೆಯರ ಪರಿಶ್ರಮ ಹೆಚ್ಚು ಇರುವುದನ್ನು ಮನಗಾಣುತ್ತೇವೆ. ಕೃಷಿಯ ಎಲ್ಲಾ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಮತ್ತು ಶ್ರದ್ಧೆಯಿಂದ ನಿರ್ವಹಿಸುವವರು ಮಹಿಳೆಯರು ಹಾಗೂ ಆಹಾರ ಭದ್ರತೆಯಲ್ಲಿ ಗ್ರಾಮೀಣ ಮಹಿಳೆಯ ಪಾತ್ರ ಬಹಳ ಪ್ರಮುಖವಾಗಿದೆ ಎಂದರು.

       ಹನುಮನಮಟ್ಟಿಯ ಕೆ.ವ್ಹಿ.ಕೆ ಮುಖ್ಯಸ್ಥರಾದ ಡಾ.ಅಶೋಕ ಅವರು ಸಿರಿಧಾನ್ಯ ಬೆಳೆ, ಸಮಗ್ರ ಕೃಷಿ, ವಿವಿಧ ವೈಜ್ಞಾನಿಕ ವಿಷಯಗಳ ಮಾಹಿತಿ ನೀಡಿದರು ಹಾಗೂ ಕೃಷಿ ವಿಜ್ಞಾನ ಕೇಂದ್ರದ ತರಬೇತಿಗಳ ಸದುಪಯೋಗ ಪಡೆಸಿಕೊಳ್ಳಲು ತಿಳಿಸಿದರು.ಕೃಷಿಕ ಸಮಾಜ ನಿರ್ದೇಶಕ ಡೊಂಕಣ್ಣನವರ ಮಾತನಾಡಿ, ಇಂದಿನ ದಿನಗಳಲ್ಲಿ ರೈತ ಮಹಿಳೆಯರಿಗೆ ಕೃಷಿ ಇಲಾಖೆಯಿಂದ ಹಲವಾರು ಸೌಲಭ್ಯಗಳಿದ್ದು, ಈ ಸೌಲಭ್ಯಗಳ ಸದುಪಯೋಗಪಡೆದುಕೊಳ್ಳಲು ತಿಳಿಸಿದರು.

      ಇದೇ ಸಂದರ್ಭದಲ್ಲಿ ಹನುಮನಮಟ್ಟಿ ಕೃಷಿ ವಿವಿಯಿಂದ 2018-19 ನೇ ಸಾಲಿನ ಯುವ ಶ್ರೇಷ್ಠ ರೈತ ಮಹಿಳೆ ಎಂಬ ಪ್ರಶಸ್ತಿ ಪಡೆದ ಕರ್ಜಗಿ ಗ್ರಾಮದ ಯುವ ರೈತ ಮಹಿಳೆಯಾದ ಕುಮಾರಿ ಗೌರಮ್ಮ ಹೊನ್ನಪ್ಪ ಗುತ್ತಿ ಅವರನ್ನು ಸನ್ಮಾನಿಸಲಾಯಿತು.

      ಕಾರ್ಯಕ್ರಮದಲ್ಲಿ ತಾ.ಪಂ ಅಧ್ಯಕ್ಷರಾದ ಕರಿಯಪ್ಪ ಮಲ್ಲಪ್ಪ ಉಂಡಿ, ತಾಲ್ಲೂಕ ಪಂಚಾಯತಿ ಉಪಾದ್ಯಕ್ಷರಾದ ಶ್ರೀಮತಿ ಸಾವಿತ್ರಮ್ಮ ಮರಡೂರ, ರೈತ ಸಂಘದ ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷೆ ಶ್ರೀಮತಿ ಮಂಜುಳಾ ಅಕ್ಕಿ, ಹಾವೇರಿ ತಾಲ್ಲೂಕ ಕೃಷಿಕ ಸಮಾಜದ ಅಧ್ಯಕ್ಷ ಶಿವಪುತ್ರಪ್ಪ ಶಿವಣ್ಣನವರ, ಕೃಷಿಕ ಸಮಾಜದ ಕಾರ್ಯದರ್ಶಿ ಬಸವರಾಜ ಹಾದಿಮನಿ, ಕೃಷಿಕ ಸಮಾಜದ ನಿರ್ದೇಶಕ ಪ್ರಕಾಶ ಹಂದ್ರಾಳ, ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ನಾಗಪ್ಪ ವಿಭೂತಿ ಉಪಸ್ಥಿತರಿದ್ದರು.

       ಆತ್ಮಾ ಅಧಿಕಾರಿ ಮಲ್ಲಿಕಾರ್ಜುನ ಗುಮ್ಮಡಿ ಕಾರ್ಯಕ್ರಮ ನಿರೂಪಿಸಿದರು. ತಾಂತ್ರಿಕ ಅಧಿಕಾರಿ ಕೊಟ್ರೇಶ ಗೆಜ್ಜಿ ಸ್ವಾಗತಿಸಿದರು. ಆತ್ಮಾ ಯೋಜನೆ ತಾಲ್ಲೂಕ ತಾಂತ್ರಿಕ ವ್ಯವಸ್ಥಾಪಕ ವಿಶ್ವಾನಾಥರಡ್ಡಿ ರಡ್ಡೇರ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link